ಐಕ್ಯಗಾನ ಮೊಳಗಲಿ

ಐಕ್ಯಗಾನ ಮೊಳಗಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಹಾ ಮ ಸತೀಶ
ಪ್ರಕಾಶಕರು
ಸವಿ ಪ್ರಕಾಶನ, ದಾಸಕೋಡಿ, ಬಾಳ್ತಿಲ, ಬಂಟ್ವಾಳ
ಪುಸ್ತಕದ ಬೆಲೆ
ರೂ. ೨೫.೦೦, ಮುದ್ರಣ: ೨೦೦೧

೨೦೦೧ರಲ್ಲಿ ಬರೆದ ತಮ್ಮ ‘ಐಕ್ಯಗಾನ ಮೊಳಗಲಿ' (ನಾಡು-ನುಡಿ ಗೀತೆಗಳು) ಸಂಕಲನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಕವಿಗಳಾದ ಹಾ.ಮ.ಸತೀಶ ಇವರು ಒಟ್ಟು ಮೂವತ್ತು ಗೀತೆಗಳನ್ನು ಬರೆದಿದ್ದಾರೆ. ನಾಡು-ನುಡಿ ಗೀತೆಗಳನ್ನೇ ಒಂದಾಗಿಸಿ, ನಾಡಭಕ್ತಿ, ಪ್ರೇಮ ಮೆರೆದಿರುವುದು ಗೀತೆಯ ಸಾಲುಗಳಲ್ಲಿ ಪ್ರತಿಧ್ವನಿಸುತ್ತಿದೆ. ‘ಕನ್ನಡದ ಮಕ್ಕಳಿಗಾಗಿಯೇ’ ಬರೆದದ್ದು ಎನ್ನುವ ಮಾತು ತೂಕವುಳ್ಳದ್ದಾಗಿದೆ. ರಾಗ ಹಾಕಿ ಹಾಡು, ನೃತ್ಯ ಮಾಡುವಂತಿದೆ. ಈ ‘ಐಕ್ಯಗಾನ’ ನೋಡಲು ಪುಟ್ಟ ಪುಸ್ತಕವಾದರೂ ಪುಟಗಳ ಬಿಡಿಸುತ್ತಾ ಹೋದಂತೆ ವಿಷಯ ಬ್ರಹ್ಮಾಂಡವೇ ಇದೆ.ದೇಶಭಕ್ತಿ, ರಾಷ್ಟ್ರಪ್ರೇಮ, ಭಾವೈಕ್ಯತೆ ಸಂಕಲನದ ಸಂಗ್ರಹದಲ್ಲಿ ಇದೆ.

ಪುಟ್ಟ ಪುಟ್ಟ ಮಕ್ಕಳೆಲ್ಲ

ಬನ್ನಿ ಕುಣಿಯಿರಿ

ಭಾರತಾಂಬೆ ನಮ್ಮ ತಾಯಿ

ಹೊಗಳಿ ಹಾಡಿರಿ

 

ಕನ್ನಡ ಕನ್ನಡ

ಕನ್ನಡ ಎನ್ನಿರಿ

ಕರ್ನಾಟಕದ ಕಂದಮ್ಮಗಳೆ

 

ಭರತ ದೇಶದಲ್ಲಿ ನಾವು

ಜನಿಸಿ ಬಂದೆವು

ಬಳಸಿದ ಪದಪುಂಜಗಳು ಬಹಳ ತೂಕದಿಂದ ಕೂಡಿ, ಒಂದೊಂದು ಗೀತೆಗಳೂ ಚೆನ್ನಾಗಿದೆ. ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅಭಿನಯ ಮುಖೇನ ಕಲಿಸುವಂತಿದೆ. ಈ ಕೃತಿಗೆ ಶುಭ ಹಾರೈಸಿದವರು ಖ್ಯಾತ ಗಮಕಿಗಳಾದ ಎಚ್.ಎನ್.ಹೆಬ್ಬಾರ್ ಸರ್. ಶ್ರಮಕ್ಕೆ ತಕ್ಕ ಸಾರ್ಥಕತೆ ಸಿಗಲೆಂದು ಹೇಳಿದ್ದಾರೆ ೨೦೦೧ ರಲ್ಲಿ ಸವಿ ಪ್ರಕಾಶನದ ನೆರಳಿನಡಿ ಬಿಡುಗಡೆಗೊಂಡ ಈ ಪುಸ್ತಕದ ಪುಟಗಳು ೩೬. ಕವಿ ಸಾಹಿತಿ, ಗಝಲ್ಕಾರ, ಹಾಡುಗಾರರಾದ ಶ್ರೀಯುತ ಹಾ.ಮ.ಸತೀಶರ ಆಶಯ ನೆರವೇರಲೆಂದು ತಾಯಿ ಶಾರದೆಯಲ್ಲಿ ಬೇಡುತ್ತಾ,ಇನ್ನಷ್ಟು ಕೃತಿಗಳು ಹೊರಬರಲೆಂದು ಕೇಳಿಕೊಳ್ಳುವೆ.ಶುಭವಾಗಲಿ.

-ರತ್ನಾ ಕೆ ಭಟ್,ತಲಂಜೇರಿ