ಪುಸ್ತಕ ಪರಿಚಯ

ಲೇಖಕರು: addoor
October 05, 2023
“ಎಲೆ ಮರೆಯ ಹಣ್ಣುಗಳು" - ಮರೆಯಲ್ಲೇ ಉಳಿದ ದಿಟ್ಟ ಮಹಿಳೆಯರ ಬದುಕಿನ ಚಿತ್ರಣ ಎನ್ನುತ್ತದೆ ಉಪಶೀರ್ಷಿಕೆ. ಇದರಲ್ಲಿರುವ ಒಂಭತ್ತು ಮಹಿಳೆಯರ ಸಂಕಟಗಳ ಕಥನ ಓದುವಾಗ ಕಣ್ಣು ಮಂಜಾಗುತ್ತದೆ. "ದೇವರು ನನಗೇ ಯಾಕೆ ಇಂತಹ ಕಷ್ಟ ಕೊಟ್ಟ?” ಎಂದು ಹಲುಬುವ ಎಲ್ಲರೂ, ಮುಖ್ಯವಾಗಿ ಮಹಿಳೆಯರು ಓದಲೇ ಬೇಕಾದ ಪುಸ್ತಕವಿದು. ಇವುಗಳ ಹಿನ್ನೆಲೆಯ ಬಗ್ಗೆ "ಓದುವ ಮುನ್ನ”ದಲ್ಲಿ ಲೇಖಕಿ ಬರೆದಿರುವ ಮಾತುಗಳು: “ಜೀವನದಲ್ಲಿ ಎಂದೋ ಕೇಳಿದ ಸುದ್ದಿಗಳು, ನಡೆದ ಘಟನೆಗಳು, ಭೆಟ್ಟಿಯಾದ ವ್ಯಕ್ತಿಗಳು ಎಲ್ಲವೂ ನನ್ನ ನೆನಪಿನ…
ಲೇಖಕರು: Ashwin Rao K P
October 04, 2023
ರವಿ ಬೆಳಗೆರೆಯವರ ಅಕಾಲ ನಿಧನದ ಬಳಿಕ ಅವರು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬರೆದ, ಪ್ರಕಟವಾಗದೇ ಉಳಿದಿದ್ದ, ಅಪೂರ್ಣವಾಗಿದ್ದ ಬರಹಗಳು ಒಂದೊಂದಾಗಿ ಪುಸ್ತಕರೂಪದಲ್ಲಿ ಹೊರ ಬರುತ್ತಿದೆ. ಅದೇ ಸಾಲಿಗೆ ಸೇರುವ ಒಂದು ಪುಸ್ತಕ ಇತ್ತೀಚೆಗೆ ಹೊರ ಬಂದಿದೆ. ಈ ಪುಸ್ತಕದ ಬಹಳಷ್ಟು ವಿಷಯಗಳನ್ನು ರವಿ ಬೆಳಗೆರೆ ತಮ್ಮ ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಬರೆದಿದ್ದಾರೆ. ಒಂದು ಸಮಯದಲ್ಲಿ ನಕ್ಸಲ್ ಚಳುವಳಿಯ ಮೇಲೆ ಒಲವಿದ್ದ ರವಿ ಬೆಳಗೆರೆ ಪತ್ರಕರ್ತರಾಗಿದ್ದ ಸಮಯದಲ್ಲಿ ಪೀಪಲ್ಸ್ ವಾರ್ ಗ್ರೂಪ್ ಸಂಸ್ಥಾಪಕ…
October 03, 2023
ಹದಿನೈದು ಸಣ್ಣ ಕತೆಗಳ ಪುಟ್ಟ ಪುಸ್ತಕ. ಎಲ್ಲ ಕತೆಗಳನ್ನು ಓದಿ ಮುಗಿಸಿದ ಬಳಿಕ ಪ್ರತಿ ಕಥೆಯ ಪಾತ್ರಗಳೂ ಕಾಡುತ್ತವೆ. ಕಾರಣ ಕತೆಗಾರ್ತಿ ಕಟ್ಟಿಕೊಟ್ಟ ಬಗೆಯೇ ಹಾಗಿದೆ. ಬಹುಶಃ ಉತ್ತರ ಕನ್ನಡ ಜಿಲ್ಲೆಯ ಓದುಗರಿಗೆ ಹೆಚ್ಚು ಆಪ್ತವಾಗುವ ಸಂಕಲನ ಇದು. ಇಲ್ಲಿಯ ಭಾಷೆ, ಜನ, ಕಥೆಯ ಜಗತ್ತು ಮತ್ತು ಅಲ್ಲಿಂದಲೇ ಹೆಕ್ಕಿ ತಂದಂತಿರುವ ಪಾತ್ರಗಳು ನಮ್ಮ ಊರಲ್ಲೇ ಇದ್ದವರು ಅನ್ನಿಸುವಂತಿದೆ. ಹಾಗೆ ನೋಡಿದರೆ ಪ್ರತಿ ಮನೆಯಲ್ಲೂ ಕತೆಗೊಂದು ಪಾತ್ರ ದೊರೆಯುತ್ತದೆ. ಎಷ್ಟೋ ಮನೆಯ ಕತೆ ಒಂದಕ್ಕೊಂದು ತೀರಾ…
ಲೇಖಕರು: Ashwin Rao K P
September 30, 2023
ವೀರಲೋಕ ಪ್ರಕಾಶನ ಸಂಸ್ಥೆಯಿಂದ ಹೊರಬಂದಿರುವ ನಂದಿನಿ ಹೆದ್ದುರ್ಗ ಅವರ ಕವಿತೆಗಳ ಸಂಗ್ರಹ ‘ಒಂದು ಆದಿಮ ಪ್ರೇಮ. ತಮ್ಮ ಕವಿತೆಗಳ ಬಗ್ಗೆ, ಅವುಗಳು ಹುಟ್ಟಿದ ಸಮಯ ಮೊದಲಾದುವುಗಳ ಬಗ್ಗೆ ಖುದ್ದು ಕವಯತ್ರಿ ನಂದಿನಿ ಅವರು ತಮ್ಮ ಮೊದಲ ಮಾತಿನಲ್ಲಿ ಬರೆದದ್ದು ಹೀಗೆ… “ಮದ್ಯಾಹ್ನ ಮೌನವಾಗಿದೆ. ಥೇಟು ನನ್ನಂತೆ. ನನ್ನದು ಇಳಿಹೊತ್ತಾ ನಡುಮದ್ಯಾಹ್ನವಾ ತಿಳಿಯುತ್ತಿಲ್ಲ. ತಿಳಿದು ಮಾಡುವುದಾದರೂ ಏನು. ತೃಣಮಪಿ ನ ಚಲತಿ ತೇನವಿನಾ. ಕಾಲ ತನ್ನಷ್ಟಕ್ಕೆ ತಾನು ಎಳೆಬೆಳಗು ನಡುಬಿಸಿಲು ಇಳಿಸಂಜೆಯೂ ಹೌದು.…
ಲೇಖಕರು: Ashwin Rao K P
September 28, 2023
ನಾಗೇಶ್ ಜೆ ನಾಯಕ ಇವರು ಬರೆದಿರುವ ನೂತನ ಪುಸ್ತಕ “ಸಜ್ಜನ ರಾಜಕಾರಣಿ ಬಿ.ಎ.ಬೋಳಶೆಟ್ಟರು" . ಈ ಕೃತಿಗೆ ಲೇಖಕರಾದ ಪ್ರಕಾಶ ಗ.ಖಾಡೆ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ನಿಮ್ಮ ಓದಿಗಾಗಿ... “ಕನ್ನಡದ ಹೆಸರಾಂತ ಸಾಹಿತಿಗಳು , ಮಿತ್ರರಾದ ಸವದತ್ತಿಯ ನಾಗೇಶ ಜೆ. ನಾಯಕ ಅವರು ನಮ್ಮ ನಡುವಿನ ಅತ್ಯಂತ ಕ್ರಿಯಾಶೀಲ ಲೇಖಕರು. ಅವರ ಬರವಣಿಗೆ ವೈವಿಧ್ಯಮಯವಾದುದು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಬರೆದು ಛಾಪು ಮೂಡಿಸಿದ್ದಾರೆ. ಅವರ…
ಲೇಖಕರು: addoor
September 28, 2023
ಉಡುಪಿ ಜಿಲ್ಲೆಯ ಕುಂದಾಪುರ ಹತ್ತಿರದ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ ಮತ್ತು ಕೋಟ ಬ್ರಾಹ್ಮಣರ ಬಗ್ಗೆ ಮಾಹಿತಿ ನೀಡುವ ಪುಸ್ತಕ ಇದು. ಸಾಲಿಗ್ರಾಮದ ದೇವಸ್ಥಾನ ಮತ್ತು ಕೋಟ ಬ್ರಾಹ್ಮಣರ ಬಗ್ಗೆ ಮುಂಚೆಯೂ ಕೆಲವು ಪುಸ್ತಕಗಳು ಪ್ರಕಟವಾಗಿವೆ. ಅವುಗಳಲ್ಲಿ ಮುಖ್ಯವಾದ ಕೆಲವು ಆಕರ ಪುಸ್ತಕಗಳು: ಕೋಟ ಶಂಕರನಾರಾಯಣ ಕಾರಂತರ "ಕೂಟ ಮಹಾಜಗತ್ತು, ಕೂಟ ಬ್ರಾಹ್ಮಣರ ಮೂಲ ಮತ್ತು ಸಾಲಿಗ್ರಾಮ ಕ್ಷೇತ್ರ ಮಹಾತ್ಮ್ಯೆ” ಪುಸ್ತಕ; ವಿದ್ವಾಂಸ ಮತ್ತು ಸಂಶೋಧಕರಾಗಿದ್ದ ಡಾ. ಪಾ. ನ. ಮಯ್ಯರು ರಚಿಸಿರುವ “…