ಪುಸ್ತಕ ಪರಿಚಯ

ಲೇಖಕರು: Ashwin Rao K P
December 09, 2021
ಯಕ್ಷಗಾನದಲ್ಲಿ ಭಾಗವತಿಕೆ ಪುರುಷರಿಗೆ ಮಾತ್ರ ಸೈ ಅನ್ನುವ ಸಮಯದಲ್ಲಿ ಲೀಲಾವತಿ ಬೈಪಾಡಿತ್ತಾಯ ಅವರು ಭಾಗವತಿಕೆಯನ್ನು ಮಾಡಲು ಪ್ರಾರಂಭಿಸಿದರು. ಪ್ರಾರಂಭದ ವಿರೋಧದ ನಡುವೆಯೇ ಧೃತಿಗೆಡದೇ ತಮ್ಮ ಕಾಯಕವನ್ನು ಮುಂದುವರೆಸಿಕೊಂಡು ಬಂದರು. ಇವರು ಯಕ್ಷಗಾನ ರಂಗದ ಪ್ರಥಮ ಮಹಿಳಾ ಭಾಗವತರು ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇವರ ಆತ್ಮಕಥೆಯನ್ನು ಪತ್ರಕರ್ತೆ ವಿದ್ಯಾರಶ್ಮಿ ಪೆಲತಡ್ಕ ಅವರು ಸೊಗಸಾಗಿ ನಿರೂಪಿಸಿ ಅದನ್ನು ‘ಯಕ್ಷ ಗಾನ ಲೀಲಾವಳಿ' ಎಂಬ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ…
ಲೇಖಕರು: Ashwin Rao K P
December 07, 2021
‘ಕಾಡು ತಿಳಿಸಿದ ಸತ್ಯಗಳು' ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕಥೆಗಳು ಸರಣಿಯ ೧೨ನೇ ಭಾಗ. ಇದೊಂದು ವೈಚಾರಿಕ ಕಾದಂಬರಿ. ಮಲೆನಾಡಿನ ಸೊಗಸಾದ ಚಿತ್ರವನ್ನು ಹೊಂದಿರುವ ಮುಖಪುಟವನ್ನು ಹೊದ್ದಿಕೊಂಡಿರುವ ಈ ಪುಸ್ತಕ ಬಹಳ ರೋಚಕವಾಗಿದೆ.  ಗಿರಿಮನೆ ಶ್ಯಾಮರಾವ್ ಅವರೇ ತಮ್ಮ ಬೆನ್ನುಡಿಯಲ್ಲಿ ಕಾದಂಬರಿಯ ಕುರಿತು “ ಈ ಜಗತ್ತು ಅಧ್ಬುತ ! ವೈವಿಧ್ಯಮಯ ! ವಿಸ್ಮಯಗಳ ಆಗರ! ಜೊತೆಗೇ ನಿಗೂಢ! ದಿನನಿತ್ಯದ ಬದುಕಿಗಾಗಿ ಎಲ್ಲರೂ ಓಡಾಡುತ್ತಿರುತ್ತಾರೆ. ಕೆಲವೇ ಕೆಲವರು ಹಾಗೆ ಓಡುವವರನ್ನು…
ಲೇಖಕರು: Ashwin Rao K P
December 04, 2021
ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ…
ಲೇಖಕರು: Ashwin Rao K P
December 02, 2021
ಖ್ಯಾತ ಲೇಖಕರಾದ ಖುಶವಂತ್ ಸಿಂಗ್ ಅವರ ಹತ್ತು ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಪ್ರಸಿದ್ಧ ಅನುವಾದಕರಾದ ಡಿ.ಎನ್.ಶ್ರೀನಾಥ್ ಅವರು. ಪುಸ್ತಕದಲ್ಲಿ ಯಾವುದೇ ಮುನ್ನುಡಿಗಳಿಲ್ಲ. ಮೂಲ ಲೇಖಕರ ಹಾಗೂ ಅನುವಾದಕರ ಬಗ್ಗೆ ಕೊಂಚ ಮಾಹಿತಿಗಳಿವೆ. ಪುಸ್ತಕದಲ್ಲಿ ೧೦ ಸಣ್ಣ ಕಥೆಗಳಿವೆ. ವಿಷ್ಣು ಚಿಹ್ನೆ, ಸರ್ ಮೋಹನಲಾಲರೂ ಅವರ ಆಂಗ್ಲ ಪ್ರೇಮವೂ..., ಲಂಡನ್ ನಲ್ಲಿ ಒಂದು ಪ್ರೇಮ ಪ್ರಸಂಗ, ಕಪ್ಪು ಮಲ್ಲಿಗೆ, ಅಜ್ಜಿ, ಬ್ರಹ್ಮ -ವಾಕ್ಯ, ರೇಪ್, ರಸಿಕ, ಸ್ವರ್ಗ ಮತ್ತು ಮರಣೋಪರಾಂತ ಎಂಬ ಕಥೆಗಳಿವೆ. ಪುಟ್ಟ…
ಲೇಖಕರು: addoor
December 02, 2021
ಪ್ರಕಾಶಕರು ಜರಗಿಸಿದ ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನಿತ ೧೩ ಕಥೆಗಳ ಸಂಕಲನ ಇದು. ಈ ಸ್ಪರ್ಧೆಗೆ ಪ್ರಕಾಶಕರಿಗೆ ಬೆಂಗಳೂರಿನ ಜಾಗತಿಕ ಕನ್ನಡಿಗರ ಕೂಟ “ಕಥನ" ಸಹಯೋಗ ನೀಡಿತ್ತು. ಆ ಸ್ಫರ್ಧೆಗೆ ಸಲ್ಲಿಕೆಯಾದ ೨೨೦ ಕತೆಗಳಲ್ಲಿ ಮೊದಲ ಬಹುಮಾನ ಪಡೆದ ಕತೆ “ನೀವೂ ದಾರ ಕಟ್ಟಿ”. ಫತೇಪುರಸಿಕ್ರಿಗೆ ಪ್ರವಾಸ ಹೋಗಿದ್ದ ದಂಪತಿಗಳಿಗೆ ಸೂಫಿ ಸಂತ ಸಲೀಂ ಕ್ರಿಸ್ತಿಯ ಸಮಾಧಿಯ ಕಿಂಡಿಯನ್ನು ತೋರಿಸಿ, ಪ್ರವಾಸಿ ಗೈಡ್ “….ಮಕ್ಕಳಿಲ್ಲದವರು ಈ ಕಿಂಡಿಗೆ ದಾರ ಕಟ್ಟಿದರೆ ಅವರ ಇಷ್ಟಾರ್ಥ ಪೂರೈಸುತ್ತದಂತೆ. ಸರ್,…
ಲೇಖಕರು: Ashwin Rao K P
November 30, 2021
ಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಮತ್ತು ಇತರ ಕರಾವಳಿ ರಾಣಿಯರು ಎಂಬ ಪುಸ್ತಕವನ್ನು ಕಮಲಾ ಹಂಪನಾ ಇವರು ಬರೆದಿದ್ದಾರೆ. ಅವರು ತಮ್ಮ ‘ಮೊದಲ ಮಾತು’ ಎಂಬ ಮುನ್ನುಡಿಯಲ್ಲಿ ಉಲ್ಲೇಖಿಸಿರುವಂತೆ “ಸ್ವಾತಂತ್ರ್ಯ ಪೂರ್ವದಲ್ಲಿ ತುಳುನಾಡು ಮದರಾಸು ಪ್ರಾಂತ್ಯಕ್ಕೆ ಸೇರಿತ್ತು. ಭಾಷಾವಾರು ಪ್ರಾಂತ್ಯ ರಚನೆಯ ಪುನರ್ ವಿಂಗಡಣೆ ಸಂದರ್ಭದಲ್ಲಿ ‘(ಅವಿಭಜಿತ) ದಕ್ಷಿಣ ಕನ್ನಡ ಜಿಲ್ಲೆ’ ಎಂಬ ಹೆಸರಿನಿಂದ ಕನ್ನಡ ನಾಡಿನಲ್ಲಿ ವಿಲೀನವಾಯಿತು. ಮತ್ತೆ ಇತ್ತೀಚೆಗೆ ೨೦೦೨ರಲ್ಲಿ ಜಿಲ್ಲೆಗಳ ಮರುಜೋಡಣೆ…