ಪುಸ್ತಕ ಪರಿಚಯ

January 17, 2022
ಕೇವಲ ಸನಾತನ ಧರ್ಮದ ಉಳುವಿಗೋಸ್ಕರ ಉದ್ಭವಗೊಂಡ ಸಾಮ್ರಾಜ್ಯ ನಮ್ಮ ಕರ್ನಾಟಕ ಸಾಮ್ರಾಜ್ಯ. ಆ ಸಾಮ್ರಾಜ್ಯದ ಮುಕುಟಮಣಿ ಶ್ರೀ ಕೃಷ್ಣದೇವರಾಯರ 551 ನೇ ಜನ್ಮ ಜಯಂತಿ ಇಂದು (ಜನವರಿ ೧೭) ಈ ಸಂದರ್ಭದಲ್ಲಿ ನಮ್ಮ ಪುಸ್ತಕ ‘ಹಸಿರು ಹಂಪೆ’ ಒಂದು ಅಧ್ಯಾಯ...ನಿಮಗೋಸ್ಕರ ಕೃಷ್ಣಾ ನೀ ಬೇಗನೇ ಬಾರೋ.... ಇವತ್ತು ಬ್ರಹ್ಮಮಹೂರ್ತದಿಂದಲೇ ಹೊಸಪೇಟೆಯ ಈ ಗುರುಕುಲದಲ್ಲಿ ಸಂಭ್ರಮವೋ ಸಂಭ್ರಮ. ಇದಕ್ಕೆ ಹಲವಾರು ಕಾರಣಗಳಿವೆ. ಮೊದಲನೆಯದು, ಇವತ್ತು ಗುರುಪೂರ್ಣಿಮೆ, ಇದಕ್ಕೆ ವ್ಯಾಸ ಪೂರ್ಣಿಮೆಯಂತಲೂ ಕರೆಯುತ್ತಾರೆ.…
ಲೇಖಕರು: Ashwin Rao K P
January 14, 2022
“ರಂಗಭೂಮಿಯಲ್ಲಿ ನಾಟಕ ಕರ್ತೃ, ನಟ, ನಿರ್ದೇಶಕರಾಗಿ ಹೆಸರು ಮಾಡಿರುವ ಗೆಳೆಯ ಸೇತೂರಾಮ್, ಈಗ ತಮ್ಮ ಆರು ಕಥೆಗಳ ಸಂಕಲನ ಹೊರತರುತ್ತಿದ್ದಾರೆ. ನಿಷಿತವಾದ ಕತ್ತಿಯಲುಗಿನಂಥ ಭಾಷೆಯೇ ಅವರ ಅಪೂರ್ವ ಶಕ್ತಿ. ಬದುಕಿನ ಆಳ ಅಗಲಗಳನ್ನು ಅನುಭವಗತ ಮಾಡಿಕೊಂಡಿರುವ ಈ ಸೂಕ್ಷ್ಮ ಸಂವೇದಿ, ಜೀವನ ಮತ್ತು ಅದರ ಕಠೋರ ಮುಖವನ್ನು ನಿರ್ಮಮವಾಗಿ ತಮ್ಮ ಕಥೆಗಳಲ್ಲಿ ಪದರಪದರವಾಗಿ ಸೀಳಿ ಇಡುವರಾದರೂ ಆಳದಲ್ಲಿ ಗಾಢವಾದ ಜೀವನ ಪ್ರೀತಿಯುಳ್ಳವರು. ಅವರ ಕಥೆಗಳ ತಿಕ್ಕಾಟ ಹುಟ್ಟುವುದೇ ಈ ಘರ್ಷಣದಲ್ಲಿ. ಭಾರತದ ಸಾಮಾಜಿಕ,…
ಲೇಖಕರು: Ashwin Rao K P
January 13, 2022
ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರ ಕುರಿತಾದ ಕೃತಿ ಇದು. ಬೆನ್ನುಡಿಯಲ್ಲಿ “ಇಂದು ಡಾ। ಎಸ್.ಎಲ್.ಭೈರಪ್ಪನವರು ಬರಿಯ ಕನ್ನಡದ ಮಣ್ಣಿಗಲ್ಲದೆ ಭಾರತದ ಎಲ್ಲ ಪ್ರಮುಖ ಭಾಷೆಗಳಿಗೂ ಹೆಚ್ಚಿನ ಜಗತ್ತಿಗೆ ಸಂಪರ್ಕಭಾಷೆಯಾದ ಇಂಗ್ಲೀಷಿಗೂ ಆಪ್ತರಾದ ಲೇಖಕರೆನಿಸಿಕೊಂಡಿದ್ದಾರೆ. ಪ್ರಸ್ತುತ ಇವರು ತಮ್ಮ ಸಾಹಿತ್ಯ ವ್ಯಕ್ತಿತ್ವಗಳ ಸತ್ವದ ಮೂಲಕ ವಿಶ್ವ ಮೌಲ್ಯವನ್ನು ಎಂದೋ ಮೈದುಂಬಿಸಿಕೊಂಡಿದ್ದಾರೆ. ಇದು ವಿಶೇಷತಃ ಕನ್ನಡಿಗರಾದ ನಮಗೆಲ್ಲರಿಗೆ ಹೆಮ್ಮೆಯ ಸಂಗತಿ. ಇಂಥ ಸಾರಸ್ವತಮೂರ್ತಿಯನ್ನು ಬಹುಕಾಲದಿಂದ…
ಲೇಖಕರು: addoor
January 13, 2022
ಶ್ರೀಕಾಂತ ಮತ್ತು ವಾಣಿ ದೊಡ್ಡ ಕನಸು ಹೊತ್ತು, ಸಿಂಗಪೂರ ಹಾದು, ಅಮೇರಿಕಾದ ಲಾಸ್ ಏಂಜಲಿಸ್ ಇಂಟರ್-ನ್ಯಾಷನಲ್ ಏರ್-ಪೋರ್ಟ್ ತಲಪುವ ಸನ್ನಿವೇಶದೊಂದಿಗೆ ಕಾದಂಬರಿ ಶುರು. ಅವರು ಸಿಂಗಪೂರ ಏರ್-ಪೋರ್ಟಿನಲ್ಲೇ ಎರಡು ದಿನ ಕಳೆಯಬೇಕಾಯಿತು. ಯಾಕೆಂದರೆ, ಅವರು ಸಿಂಗಪೂರ ತಲಪಿದ ದಿನವೇ, ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರಿನ ಎರಡೂ ಗಗನಚುಂಬಿ ಕಟ್ಟಡಗಳನ್ನು (ಅಪಹರಿಸಿದ ವಿಮಾನಗಳನ್ನು ಅವಕ್ಕೆ ಅಪ್ಪಳಿಸುವ ಮೂಲಕ) ಭಯೋತ್ಪಾದಕರು ಧ್ವಂಸ ಮಾಡಿದ್ದರು. ಅದರಲ್ಲೊಂದು ವಿಮಾನ ಇವರು…
ಲೇಖಕರು: Ashwin Rao K P
January 11, 2022
ಸದಾ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುವ ಕಥೆಗಾರ ಜೋಗಿ (ಗಿರೀಶ್ ಹತ್ವಾರ್) ಹತ್ತಾರು ಕತೆಗಳನ್ನು ಹೆಕ್ಕಿ ತಂದು ‘ನನ್ನ ತೋಟದ ನೀಲಿ ಹೂಗಳು' ಎಂದು ಹೆಸರಿಸಿದ್ದಾರೆ. ಪುಸ್ತಕದಲ್ಲಿ ಪುಟ್ಟ ಪುಟ್ಟ ೧೪ ಕಥೆಗಳಿವೆ. ಜೋಗಿಯವರ ಕಥೆಗಳನ್ನು ಓದುವುದೇ ಬಹಳ ಸೊಗಸು.  ಈ ಪುಸ್ತಕವನ್ನು ಸಪ್ನ ಬುಕ್ ಹೌಸ್ ನವರು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಹೊರ ತಂದಿದ್ದಾರೆ. ಈ ಬಗ್ಗೆ ಸಾಹಿತಿ ಚೆನ್ನವೀರ ಕಣವಿಯವರು ಬೆನ್ನುಡಿಯನ್ನು ಬರೆದಿದ್ದಾರೆ. “..ಹೀಗೆ ಲೇಖಕ-ಪ್ರಕಾಶಕ-ಓದುಗರ ನಡುವೆ ನಿಕಟ…
ಲೇಖಕರು: Ashwin Rao K P
January 08, 2022
ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ ದೊರೆಯುವಂಥ ಸ್ಥಾಯೀ ವ್ಯವಸ್ಥೆಯೊಂದನ್ನು ರೂಪಿಸಿ, ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ಮತ್ತು ಧೃಢವಾಗಿ ಬೆಳೆಸುವ ಉದ್ದೇಶದಿಂದ ‘ಕನ್ನಡ ಪುಸ್ತಕ ಪ್ರಾಧಿಕಾರ' ಎಂಬ ದೀರ್ಘಕಾಲಿಕ ಯೋಜನೆಯೊಂದನ್ನು ಸರ್ಕಾರವು ರೂಪಿಸಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ…