ಪುಸ್ತಕ ಪರಿಚಯ

ಲೇಖಕರು: Ashwin Rao K P
February 25, 2022
ಮತ್ತೊಮ್ಮೆ ನಿಮ್ಮ ಮುಂದೆ ಬಂದಿದ್ದಾರೆ, ಗಜಲ್ ನ ಮಗದೊಂದು ಆಯಾಮದೊಂದಿಗೆ, ಅದೂ "ಸ್ನೇಹದ ಮಧುಶಾಲೆ" ಎಂಬ ಗಜಲ್ ಗುಲ್ಜಾರ್ ನೊಂದಿಗೆ ಡಾ. ಮಲ್ಲಿನಾಥ ಎಸ್.ತಳವಾರ ಇವರು. ಮಲ್ಲಿನಾಥ ಇವರ ಮೊದಲ ಗಜಲ್ ಗುಲ್ದಸ್ಥ "ಗಾಲಿಬ್ ಸ್ಮೃತಿ" ಯು ಗಜಲ್ ನ ಉಗಮ, ಸ್ವರೂಪ, ಲಕ್ಷಣ ಹಾಗೂ ಗಜಲ್ ಪ್ರಕಾರಗಳನ್ನು ಉದಾಹರಣೆಯೊಂದಿಗೆ ತಿಳಿ ಹೇಳಿದ್ದರೆ, ಎರಡನೇ ಗಜಲ್ ಸಂಕಲನ "ಮಲ್ಲಿಗೆ ಸಿಂಚನ" ಗಜಲ್ ಹೂದೋಟ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಗಜಲ್ ಪಾರಿಭಾಷಿಕ ಪದಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ. ಈ…
ಲೇಖಕರು: addoor
February 24, 2022
ಇದು ಭಾರತದ ಪಾರಂಪರಿಕ ಔಷಧೀಯ ಸಸ್ಯಜ್ನಾನವನ್ನು ಭಟ್ಟಿ ಇಳಿಸಿದ ಪುಸ್ತಕ; ಪಾಣಾಜೆಯ ಪಾರಂಪರಿಕ ಮೂಲಿಕಾ ವೈದ್ಯರಾಗಿದ್ದ ಪಿ. ಎಸ್. ವೆಂಕಟರಾಮ ದೈತೋಟ ಅವರ ಜೀವಮಾನದ ತಪಸ್ಸಿನ ಫಲ ಇದು. ಈ ಪುಸ್ತಕದಲ್ಲಿದೆ 280 ಜನೋಪಯೋಗಿ ಔಷಧೀಯ ಸಸ್ಯಗಳ ಅಪೂರ್ವ ಜ್ನಾನಭಂಡಾರ. ಪ್ರತಿಯೊಂದು ಔಷಧೀಯ ಸಸ್ಯದ ಬಗ್ಗೆ ಮೂರು ವಿಭಾಗಗಳಲ್ಲಿ ಮಾಹಿತಿ ನೀಡಲಾಗಿದೆ: ಸಸ್ಯದ ಹೆಸರುಗಳು, ಮೂಲಿಕಾ ಪರಿಚಯ, ಉಪಯೋಗಗಳು. ಜೊತೆಗೆ ಸಸ್ಯದ ಗುರುತು ಹಿಡಿಯಲು ಸಹಾಯವಾಗಲಿಕ್ಕಾಗಿ ಲೇಖಕರೇ ಚಿತ್ರಿಸಿರುವ ಸಸ್ಯದ ರೇಖಾ ಚಿತ್ರಗಳು.…
ಲೇಖಕರು: Ashwin Rao K P
February 23, 2022
ಪುನೀತ್ ರಾಜಕುಮಾರ್ ಅವರ ಜೀವನ ಕಥನವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ ಲೇಖಕ, ಪತ್ರಕರ್ತರಾದ ಡಾ.ಶರಣು ಹುಲ್ಲೂರು ಇವರು. ಪುನೀತ್ ಬದುಕಿರುವಾಗಲೇ ಈ ಪುಸ್ತಕವನ್ನು ಹೊರ ತರಬೇಕೆಂದು ಲೇಖಕರಿಗೆ ಬಹಳ ಮನಸ್ಸಿತ್ತು. ಆದರೆ ಪುನೀತ್ ತಮ್ಮ ತಂದೆ ಹಾಗೂ ತಾಯಿಯವರ ಪುಸ್ತಕಗಳ ಜೊತೆ ತಮ್ಮ ಪುಸ್ತಕ ಇರಿಸಲು ಮನಸ್ಸು ಒಪ್ಪುತ್ತಿಲ್ಲ ಎಂದು ಹೇಳಿ ಲೇಖಕರಿಗೆ ನಿರಾಸೆ ಮಾಡಿದ್ದರು. ಆದರೆ ಪುನೀತ್ ಅಕಾಲ ಮರಣಕ್ಕೀಡಾದಾಗ ಅವರು ಮಾಡಿದ ಸಾಧನೆಗಳು ಒಂದೊಂದಾಗಿಯೇ ಹೊರಬರಲಾರಂಭಿಸಿತು. ಶರಣು ಅವರೂ…
ಲೇಖಕರು: Ashwin Rao K P
February 22, 2022
೧೯೭೧ರ ಭಾರತ-ಪಾಕಿಸ್ತಾನ ಯುದ್ಧದ ರೋಚಕ ಕಥೆಗಳನ್ನು ಸುಧೀರ ಸಾಗರ ಇವರು ‘ಆ ಹದಿಮೂರು ದಿನಗಳು' ಎಂಬ ಹೆಸರಿನ ಕೃತಿಯ ಮೂಲಕ ನಿಮಗೆ ಹೇಳಹೊರಟಿದ್ದಾರೆ. ಸೈನ್ಯದ, ಯುದ್ಧದ ಕಥೆಗಳು ಓದುವವರಿಗೆ ರೋಚಕ ಅನುಭವ ನೀಡುತ್ತದೆ, ಆದರೆ ಗಡಿ ಭಾಗದಲ್ಲಿ ವಿದೇಶಿ ಸೈನಿಕರ ಜೊತೆ ಹೋರಾಡುವುದಿದೆಯಲ್ಲ ಅದಕ್ಕೆ ಎಂಟೆದೆಯ ಗುಂಡಿಗೆ ಬೇಕು. ಬಾಂಗ್ಲಾ ದೇಶದ ವಿಮೋಚನಾ ಯುದ್ಧದ ಕಥೆಯನ್ನು ಈ ಕೃತಿಯಲ್ಲಿ ಮಾಹಿತಿಪೂರ್ಣವಾಗಿ, ಸೊಗಸಾಗಿ ವರ್ಣಿಸಿದ್ದಾರೆ. ಪುಸ್ತಕವನ್ನು ಬರೆಯಲು ಕಾರಣವಾದ ಅಂಶಗಳ ಬಗ್ಗೆ ತಮ್ಮ…
ಲೇಖಕರು: Ashwin Rao K P
February 18, 2022
ದೇವು ಪತ್ತಾರ ಅವರ ಸಂಗ್ರಹ ಗುಣದ ಕಾರಣದಿಂದ ವಿ.ಕೃ.ಗೋಕಾಕರು ಬರೆದ ಮುನ್ನುಡಿಗಳು ಇಲ್ಲಿ ಸಂಕಲನಗೊಂಡಿವೆ. ಇಲ್ಲಿನ ಬಹುಪಾಲು ಮುನ್ನುಡಿಗಳನ್ನು ಗೋಕಾಕರು ಬರೆದ ಸಂಗ್ರಹಗಳ ಮೊದಲ ಮುದ್ರಣದ ಪ್ರತಿಗಳಿಂದಲೇ ಸಂಗ್ರಹಿಸಿದ್ದಾರೆ ಎಂಬುದನ್ನು ಗಮನಿಸಿದ ಅವರ ಸಂಗ್ರಹ ಗುಣದ ವಿಸ್ತಾರ ಮತ್ತು ಪರಿಶ್ರಮ ನಮ್ಮ ಗಮನಕ್ಕೆ ಬಂದೀತು. ಇಲ್ಲಿನ ಮುನ್ನುಡಿಗಳಿಗೆ ಚಾರಿತ್ರಿಕವಾದ ಮಹತ್ವವಿರುವಂತೆ ಸಾಹಿತ್ಯಕ ಮಹತ್ವವೂ ಇದೆ. ಗೋಕಾಕರು ಬರೆದ ಬಹುತೇಕ ಮುನ್ನುಡಿಗಳು ಕಾವ್ಯ ಸಂಕಲನಗಳಿಗೆ ಬರೆದವು ಎಂಬುದನ್ನು…
ಲೇಖಕರು: addoor
February 17, 2022
ಔಷಧೀಯ ಸಸ್ಯಗಳ ಬಗ್ಗೆ ಬಹಳ ಉಪಯುಕ್ತ ಮಾಹಿತಿ ತುಂಬಿದ ಈ ಪುಸ್ತಕ, ಪ್ರಕಟವಾದ ಹತ್ತು ವರುಷಗಳಲ್ಲಿ ಒಂಭತ್ತು ಸಲ ಮುದ್ರಣ ಆಗಿರುವುದೇ ಇದರ ಜನಪ್ರಿಯತೆಗೆ ಪುರಾವೆ. ಮನೆಯ ಮುಂಬದಿ ಅಥವಾ ಹಿಂಬದಿಯಲ್ಲಿ ಅಥವಾ ಟೆರೇಸಿನಲ್ಲಿ ಕೆಲವು ಔಷಧೀಯ ಸಸ್ಯಗಳನ್ನೂ ಸೊಪ್ಪಿನ ಗಿಡಗಳನ್ನೂ ಬೆಳೆಸಿ, ಅವುಗಳ ಪ್ರಯೋಜನ ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸಿ ಕೊಡುವ ಪುಸ್ತಕ ಇದು. ಹಲವು ಅನಾರೋಗ್ಯ/ ಜಾಡ್ಯಗಳಿಗೆ ಚಿಕಿತ್ಸೆ ನೀಡಲು ನಮ್ಮ ದೇಶದ ಪಾರಂಪರಿಕ ಚಿಕಿತ್ಸಕರು ಬಳಸುತ್ತಿದ್ದ ಈ ಕೆಳಗಿನ ೩೬ ಔಷಧೀಯ…