ಪುಸ್ತಕ ಪರಿಚಯ

ಲೇಖಕರು: Ashwin Rao K P
February 16, 2022
‘ಎಂಟರ್ ದಿ ಡ್ರಾಗನ್’ ಇದು ಕುಂ.ವೀ. ಎಂದೇ ಖ್ಯಾತರಾದ ಕುಂ.ವೀರಭದ್ರಪ್ಪ ಅವರ ಕಥಾ ಸಂಕಲನ. ಈ ಕಥಾ ಸಂಕಲನದಲ್ಲಿ ಎಂಟರ್ ದಿ ಡ್ರಾಗನ್, ಪಂಪಣ್ಣನ ಗರ್ವಭಂಗ, ಬಟ್ಟೆಹೀನನ ಮನೆಯ..., ಮಸ್ತಾನ್ ಎಂಬ ‘ಆಂಧ್ರ ಫುಲ್ ಮೀಲ್ಸ್', ರತ್ನಳೆಂಬೋ ಬಾಲಕಿಯೂ..., ರಾಧಮ್ಮನ ಪ್ರಣಯ ಪ್ರಸಂಗ, ಅವನು ಮತ್ತು ಅವಳು, ವಿದುಷಿ, ನಂಜು, ತೇಲಲರಿಯರು, ಮುಳುಗಲೂ ಅರಿಯರು, ಎಣ್ಣೆ ಎಣ್ಣೇನೆ...ತುಪ್ಪ ತುಪ್ಪಾನೆ!, ಅಪಸ್ಮಾರ, ಸುಪಾರಿ, ಒತ್ತುವರಿ, ಕರುಳಿನ ಕರೆ, ಸಂಬಂಧ, ಸಿದ್ಧಾರೂಢ ಪುರಾಣವು, ನ್ಯೂ ಭಾರತ್ ಟಾಕೀಸ್,…
ಲೇಖಕರು: Ashwin Rao K P
February 14, 2022
‘ಮಣ್ಣೆ' ಕೃತಿಯು ಎಚ್ ಎಸ್ ಗೋಪಾಲ ರಾವ್ ಅವರ ಒಂದು ಪರಿಚಯಾತ್ಮಕ ಅಧ್ಯಯನವಾಗಿದೆ. ಈ ಕೃತಿಯು ೧೨ ಅನುಕ್ರಮಗಳನ್ನು ಒಳಗೊಂಡಿದೆ. ಮಣ್ಣೆ : ಒಂದು ಪರಿಚಯಾತ್ಮಕ ಅಧ್ಯಯನ, ರಾಜಕೀಯ ಹಿನ್ನಲೆಯಲ್ಲಿ ಮಣ್ಣೆ. ಮಣ್ಣೆಯಲ್ಲಿ ದೊರೆತಿರುವ ಮತ್ತು ಮಣ್ಣೆಗೆ ಸಂಬಂಧಿಸಿದ ಶಿಲಾಶಾಸನಗಳು, ಸಾಂಸ್ಕೃತಿಕವಾಗಿ ಮಣ್ಣೆ, ಸಾಹಿತ್ಯಕ್ಷೇತ್ರದಲ್ಲಿ ಮಣ್ಣೆ, ಧಾರ್ಮಿಕವಾಗಿ ಮಣ್ಣೆ, ಸಾಮಾಜಿಕವಾಗಿ ಮಣ್ಣೆ, ಮಣ್ಣೆಯ ಶಾಸನಗಳು, ಪದಸೂಚಿ, ಶಾಸನ ಪುಟ, ಮಣ್ಣೆ ಬಸದಿಯ ಉಹಾ ನಕ್ಷೆಗಳು, ನೇಮಿನಾಥ ಬಸದಿ, ಮಣ್ಣೆ ಚಿತ್ರಗಳು…
ಲೇಖಕರು: Ashwin Rao K P
February 11, 2022
ಸರಸ್ವತಿ ಶ್ರೀನಿವಾಸರಾಜು ಹೇಳಿದ ಆತ್ಮಕಥನವೇ ‘ಸೋಜಿಗದ ಬಳ್ಳಿ’ ಎಂಬ ಪುಸ್ತಕ. ಸರಸ್ವತಿಯವರ ಮಾತುಗಳನ್ನು ಅಕ್ಷರ ರೂಪಕ್ಕೆ ಇಳಿಸಿ ಸಂಯೋಜನೆ ಮಾಡಿದ್ದಾರೆ ಎಂ. ಆರ್. ಭಗವತಿಯವರು. ಪುಸ್ತಕದ ಬೆನ್ನುಡಿಯಲ್ಲಿ ಮೈಸೂರಿನ ಬಿ.ಪಿ.ಬಸವರಾಜು ಅವರು ಹೀಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.  “ಸರಳವಾಗಿ ಕಾಣಿಸಿದರೂ ಈ ಬರಹ ಸುಂದರವಾಗಿದೆ. ಅಚ್ಚುಕಟ್ಟಾಗಿದೆ. ಸಣ್ಣ ಸಣ್ಣ ಸಂಗತಿಗಳನ್ನೇ ಪೋಣಿಸಿ ದೊಡ್ಡ ಚಿತ್ರವನ್ನೇ ಕೊಡಲಾಗಿದೆ. ತೋರುಗಾಣಿಕೆಯಾಗಲಿ, ಅಬ್ಬರವಾಗಲಿ, ಉತ್ಪ್ರೇಕ್ಷೆಯಾಗಲಿ ಇಲ್ಲದ ಸಾಚಾ…
ಲೇಖಕರು: addoor
February 10, 2022
ಕನ್ನಡ ಕಾವ್ಯಲೋಕದಲ್ಲಿ ಬಿರುಗಾಳಿಯಂತೆ ಬೀಸಿ ಬಂದ ೬೩ ಕವನಗಳ ಸಂಕಲನ ಇದು. ಇದರಿಂದಾಗಿ, ಬಿ. ಎಂ. ಶ್ರೀಕಂಠಯ್ಯನವರ ಹೆಸರು ಕನ್ನಡಿಗರ ನಾಲಿಗೆಯಲ್ಲಿ ನಲಿದಾಡುವಂತಾಯಿತು. ಕವನ ಸಂಕಲನದ ಆರಂಭದಲ್ಲಿಯೇ ಬಿ. ಎಂ. ಶ್ರೀ.ಯವರು ಹೀಗೆ ಅರಿಕೆ ಮಾಡಿಕೊಂಡಿದ್ದಾರೆ: “ಯಾರ ಸಂತೋಷಕ್ಕಾಗಿ ಮೊದಲು ನಾನು ಈ ಗೀತಗಳನ್ನು ಬರೆದೆನೋ ಆ ಕಣ್ಣುಗಳು ಬೇಗ ಮುಚ್ಚಿ ಹೋಗಿ, ಕೆಲವು ವರ್ಷ ಗ್ರಂಥ ನನ್ನಲ್ಲಿಯೇ ಉಳಿದುಕೊಂಡಿತು…… ಇಂಗ್ಲಿಷ್ ಕಾವ್ಯಮಾರ್ಗವನ್ನು ಕನ್ನಡಿಗರು ಈ ಸಣ್ಣ ಗ್ರಂಥದಿಂದ ಸ್ವಲ್ಪ ಮಟ್ಟಿಗೆ…
ಲೇಖಕರು: Ashwin Rao K P
February 09, 2022
ಭಾರತ ರತ್ನ ಡಾ. ಭೀಮಸೇನ ಜೋಶಿಯವರ ಕುರಿತಾದ ಈ ಪುಸ್ತಕವನ್ನು ಬರೆದವರು ಶಿರೀಷ್ ಜೋಶಿ ಇವರು. ಭೀಮಸೇನ ಜೋಶಿಯವರ ಬದುಕು-ಸಂಗೀತ ಸಾಧನೆಯ ಎತ್ತರಗಳನ್ನು ಪರಿಚಯಿಸುವ ಕೃತಿ ಇದು. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರಾದ ಭೀಮಸೇನ ಜೋಶಿ ಅವರು ಬಾಲ್ಯದಿಂದಲೇ ಸಂಗೀತದ ಹುಚ್ಚು ಹಚ್ಚಿಕೊಂಡು, ಉತ್ತರ ಭಾರತದ ವಿವಿದೆಡೆಯೂ ಸಂಚರಿಸಿ, ಗುರುಗಳನ್ನು ಹುಡುಕಾಡಿ ಸಂಗೀತ ಕಲಿತರು. ನಂತರ ಅವರು ಮುಂಬೈನಲ್ಲಿ ಖಾಯಂ ಆಗಿ ನೆಲೆಸಿ, ಭಾರತದಾದ್ಯಂತ ಸಂಗೀತ ಕ್ಷೇತ್ರವನ್ನು ಆಸಕ್ತರಿಗೆ ಆತ್ಮೀಯವಾಗಿಸಿದ್ದರು.…
ಲೇಖಕರು: Ashwin Rao K P
February 08, 2022
“ಒಬ್ಬ ತನ್ನ ಅಂಗಡಿಯಲ್ಲಿ ಕತ್ತಿಗಳನ್ನೂ ಮಾರುತ್ತಿದ್ದ, ಗುರಾಣಿಗಳನ್ನೂ ಮಾರುತ್ತಿದ್ದ. ‘ನನ್ನ ಗುರಾಣಿಗಳು ಎಷ್ಟು ಗಟ್ಟಿಯಾಗಿವೆ ಎಂದರೆ, ಇವುಗಳನ್ನು ಯಾವ ಕತ್ತಿಯಿಂದಲೂ ಭೇದಿಸಲು ಸಾಧ್ಯವಿಲ್ಲ’ ಎನ್ನುತ್ತಿದ್ದ, ಮತ್ತೆ ಅವನೇ ‘ನನ್ನ ಕತ್ತಿಗಳು ಎಷ್ಟು ಹರಿತವಾಗಿವೆ ಎಂದರೆ, ಇವು ಎಂಥ ಗುರಾಣಿಯನ್ನಾದರೂ ಭೇದಿಸಬಲ್ಲುವು' ಎನ್ನುತ್ತಿದ್ದ. ಒಂದು ದಿವಸ ಯಾವನೋ ಒಬ್ಬ ‘ನಿನ್ನ ಗುರಾಣಿಯನ್ನು ನಿನ್ನ ಕತ್ತಿಯಿಂದಲೇ ಹೊಡೆದರೆ?’ ಎಂದು ಕೇಳಿಬಿಟ್ಟ. ಅಂಗಡಿಯವನು ಅದಕ್ಕೆ ಏನು ಉತ್ತರ ಹೇಳಿಯಾನು?…