ಪುಸ್ತಕ ಪರಿಚಯ

ಲೇಖಕರು: addoor
January 27, 2022
ಕನ್ನಡನಾಡಿನಲ್ಲಿ ಮನೆಮಾತಾಗಿರುವ ಕವಿ ಎಚ್. ಎಸ್. ವೆಂಕಟೇಶಮೂರ್ತಿ ಅವರ ಕವನ ಸಂಕಲನ ಇದು. ಮಡದಿ ತೀರಿಕೊಂಡ ನಂತರ, ಆ ಅಗಲಿಕೆಯ ನೋವಿನಲ್ಲಿ ೬ ಜನವರಿ ೨೦೦೭ರಿಂದ ೨೬ ಎಪ್ರಿಲ್ ೨೦೦೮ರ ಅವಧಿಯಲ್ಲಿ ಅವರು ಬರೆದ ೨೪ ಭಾಗಗಳ “ಉತ್ತರಾಯಣ" ಮತ್ತು ಇತರ ಹಲವು ಚಿಂತನೆಗೆ ಹಚ್ಚುವ ಕವನಗಳು ಇದರಲ್ಲಿವೆ. ಈ ಹಿನ್ನೆಲೆಯಲ್ಲಿ, ಕವನ ಸಂಕಲನದ ಆರಂಭದಲ್ಲಿ ಕವಿ ಬರೆದುಕೊಂಡಿರುವ ಮಾತುಗಳ ಆಯ್ದ ಭಾಗ ಹೀಗಿದೆ: “ಬದುಕಿನುದ್ದಕ್ಕೂ ಅಭೇದ್ಯ ಎನ್ನುವಂತೆ ಅಂಟಿಕೊಂಡಿದ್ದ ಆಪ್ತಜೀವ ಶಾಶ್ವತವಾಗಿ ಅಗಲಿಬಿಟ್ಟಾಗ…
ಲೇಖಕರು: Ashwin Rao K P
January 24, 2022
ಸ್ವಾಮಿ ವಿವೇಕಾನಂದರ ಬಗ್ಗೆ ಸಾವಿರಾರು ಪುಸ್ತಕಗಳು ಹೊರಬಂದಿವೆ. ಅವರ ಭಾಷಣಗಳ ಬಗ್ಗೆ, ಜೀವನದ ಬಗ್ಗೆ, ಚಿಂತನೆಗಳ ಬಗ್ಗೆ ಹಲವಾರು ಮಂದಿ ಪ್ರಖ್ಯಾತ ಲೇಖಕರು ತಮ್ಮ ಕೃತಿಗಳನ್ನು ರಚನೆ ಮಾಡಿದ್ದಾರೆ. ಅಂತಹ ಒಂದು ಕೃತಿ ಡಾ. ಪ್ರಭು ಶಂಕರ ಇವರು ಬರೆದ ‘ಸ್ವಾಮಿ ವಿವೇಕಾನಂದ’. ಲೇಖಕರು ತಮ್ಮ ಮುನ್ನುಡಿ ‘ಪ್ರವೇಶ' ದಲ್ಲಿ “ ಇದು ಒಂದು ದೊಡ್ಡ ಜೀವದ ಕತೆ. ಭರತಖಂಡಕ್ಕಾಗಿ ಎದೆಯ ರಕ್ತವನ್ನು ಬಸಿದ ಉಜ್ವಲ ದೇಶಭಕ್ತನ ಕತೆ. ಸನಾತನ ಧರ್ಮವನ್ನು ಸಿಂಹ ಗರ್ಜನೆಯಿಂದ ದೇಶ ವಿದೇಶಗಳಲ್ಲಿ ಸಾರಿದ ವೇದಾಂತ…
ಲೇಖಕರು: Ashwin Rao K P
January 21, 2022
‘ಕಂಗಳ ಬೆಳಗು' ಇದು ಬೇಂದ್ರೆ ಮತ್ತು ಮಧುರಚ್ಹೆನ್ನರ ಕಾವ್ಯಗಳಲ್ಲಿವ್ಯಗಳಲ್ಲಿ ಅನುಭಾವ : ತಲನಿಕ ಅಧ್ಯಯನ ಎಂದು ಲೇಖಕರಾದ ಡಾ. ಸತ್ಯಮಂಗಲ ಮಹಾದೇವ ಇವರು ಪುಸ್ತಕದ ಮುಖಪುಟದಲ್ಲೇ ಪ್ರಕಟ ಮಾಡಿದ್ದಾರೆ. ಈ ಅಪರೂಪದ ಪುಸ್ತಕಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಇದರ ವಿಶ್ರಾಂತ ಕುಲಪತಿಗಳಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಇವರು ಬೆನ್ನುಡಿ ಬರೆದಿದ್ದಾರೆ. ಅವರು ತಮ್ಮ ಮಾತುಗಳಲ್ಲಿ ಹೇಳುವುದು ಹೀಗೆ “ಡಾ. ಸತ್ಯಮಂಗಲ ಮಹಾದೇವ ಇವರ ಕಂಗಳ ಬೆಳಗು ಒಂದು ಅತ್ಯಪೂರ್ವ ವಿಶ್ಲೇಷಣಾತ್ಮಕ ಕೃತಿ.…
ಲೇಖಕರು: addoor
January 20, 2022
ಇಂಜಿನಿಯರಿಂಗ್ ಪದವೀಧರರಾದ ವಿವೇಕ ಶಾನಭಾಗರು ತಮ್ಮ ಸಣ್ಣ ಕತೆಗಳ ಮೂಲಕ ಹೆಸರು ಮಾಡಿದವರು. ಅವರು ಸಂಪಾದಕರಾಗಿದ್ದ “ದೇಶಕಾಲ" ಎಂಬ ವಿಶಿಷ್ಟ ತ್ರೈಮಾಸಿಕ ಪತ್ರಿಕೆಯ ಮೂಲಕವೂ ಕನ್ನಡಿಗರಿಗೆ ಪರಿಚಿತರು. "ಮತ್ತೊಬ್ಬನ ಸಂಸಾರ” ಎಂಬ ಈ ಸಂಕಲನದಲ್ಲಿವೆ ಅವರ ಒಂಭತ್ತು ಕತೆಗಳು. ಇದಕ್ಕೆ ಅಕ್ಷರ ಕೆ. ವಿ. ಬರೆದಿರುವ ಬೆನ್ನುಡಿಯ ಮಾತುಗಳು ಇಲ್ಲಿನ ಕತೆಗಳ ಬಗ್ಗೆ ಕೆಲವು ಒಳನೋಟಗಳನ್ನು ಒದಗಿಸುತ್ತವೆ: "ಯಾವುದೇ ವಸ್ತುವನ್ನು ಕುರಿತು, ಹಲವು ರೀತಿಯ ಕಥನಗಳನ್ನು ಕಟ್ಟುವುದು ಸಾಧ್ಯ. ಆದರೆ, ಒಂದೇ…
ಲೇಖಕರು: Ashwin Rao K P
January 19, 2022
ಹರಿಕಿರಣ್ ಹೆಚ್. ಉದಯೋನ್ಮುಖ ಕಥೆಗಾರರು. ‘ಲಾಲಿ ಪಾಪ್ ಮತ್ತು ಇತರ ಕಥೆಗಳು' ಇವರ ಚೊಚ್ಚಲ ಕಥಾ ಸಂಕಲನ. ಈ ಸಂಕಲನದಲ್ಲಿ ೧೦ ಕಥೆಗಳಿವೆ. ಕಥೆಗಳು ಪುಟ್ಟದಾಗಿದ್ದು ಸೊಗಸಾಗಿ ಓದಿಸಿಕೊಂಡು ಹೋಗುತ್ತವೆ. ಅದರಲ್ಲೂ ಕೆಲವೊಂದು ಕಥೆಗಳು ನಿಜಕ್ಕೂ ಬಹಳ ಚೆನ್ನಾಗಿದೆ. ಈ ಸಂಕಲನದಲ್ಲಿ ನಿರ್ಭಯ, ಮೊಬೈಲ್ ಮತ್ತು ನಾನು, ಕಷ್ಟಮರ್ ದೇವೋಭವ, ಪರೀಕ್ಷೆ, ಉರುಳು, ಕ್ಷಣಿಕ, ಬಾಟ್ಲಿ, ಭಯ, ಕಾಫಿ ಬೈಟ್, ಲಾಲಿ ಪಾಪ್ ಮೊದಲಾದ ಹೆಸರಿನ ಹತ್ತು ಕಥೆಗಳಿವೆ.  ಕಥೆಗಾರ ಹರಿಕಿರಣ್ ಅವರು ತನ್ನ ನನ್ನುಡಿಯಲ್ಲಿ ಹೀಗೆ…
ಲೇಖಕರು: Ashwin Rao K P
January 18, 2022
ಶಾಂತಾ ನಾಗರಾಜ್ ಅವರು ತಮ್ಮ ಸಿಂಗಪುರ, ಮಲೇಷಿಯಾ ಮತ್ತು ಥಾಯ್ ಲ್ಯಾಂಡ್ ಪ್ರವಾಸದ ಬಗ್ಗೆ ಸೊಗಸಾಗಿ ಕಥನವೊಂದನ್ನು ಬರೆದಿದ್ದಾರೆ. ಡಾ.ಎಂ.ಸಿ.ಪ್ರಕಾಶ್ ಹಾಗೂ ನೇಮಿಚಂದ್ರ ಇವರು ಈ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ. ಡಾ. ಎಂ.ಸಿ.ಪ್ರಕಾಶ್ ಅವರ ಪ್ರಕಾರ “ Travel in the younger sort, is a part of experience, in the elder, a part of experience’ ಎಂದು ಫ್ರಾನ್ಸಿಸ್ ಬಾಕಾನ್ ಹೇಳಿದ ಹಾಗೆ ಈ ಪ್ರವಾಸ ಕಥನದಲ್ಲಿ ಶಿಕ್ಷಣಾಸುಧರ್ಮಗಳು ಹದವಾಗಿ ಮಿಶ್ರಗೊಂಡಿವೆ.…