ಪುಸ್ತಕ ಪರಿಚಯ
ಲೇಖಕರು: ಮಮತಾ ಕಾಪು
December 25, 2012
ಕನ್ನಡದ ನುಡಿಚಿತ್ರಕಾರರಲ್ಲಿ ನಿರಂಜನ ವಾನಳ್ಳಿಯವರದ್ದು ಗಮನಾರ್ಹ ಹೆಸರು. ಇವರ ಎಲ್ಲಾ ನುಡಿಚಿತ್ರಗಳಲ್ಲಿಯೂ ಜೀವನ ಪ್ರೀತಿ, ಮಾನವೀಯ ಅನುಕಂಪಗಳು ಎದ್ದು ಕಾಣುತ್ತವೆ. ಅವರ ಸುಸಂಸ್ಕೃತ ಮನಸ್ಸು ಹಾಗೂ ಕುತೂಹಲದ ಮನೋಭಾವ ಹಾಗೂ ಚಿಕಿತ್ಸಕ ದೃಷ್ಟಿಗಳು ಎಲ್ಲಾ ವರ್ಗದ ಓದುಗರನ್ನು ತಮ್ಮೆಡೆಗೆ ಸೆಳೆಯುತ್ತವೆ. ಕಾಬಾಳೆ ಮತ್ತು ಪ್ರೀತಿ ಅವರ ಆಯ್ದ ನುಡಿಚಿತ್ರಗಳ ಸಂಗ್ರಹ- ಪುಸ್ತಕ. 2009 ರಲ್ಲಿ ಪ್ರಕಟಗೊಂಡ ಈ ಪುಸ್ತಕದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಬೇರೆ ಬೇರೆ ಕಡೆಗಳಲ್ಲಿ ಪ್ರಕಟಗೊಂಡ ಆಯ್ದ…
1
ಲೇಖಕರು: ಮಮತಾ ಕಾಪು
December 24, 2012
ನಮ್ಮ ಎಲ್ಲಾ ಕೆಲಸಗಳ ಉದ್ದೇಶವೂ ಅಂತಿಮವಾಗಿ ಸಾರ್ಥಕತೆ, ಸಂತಸ, ಉಲ್ಲಾಸವೇ ಆಗಿದ್ದರೂ ಆ ಉದ್ದೇಶ ಈಡೇರಿದೆಯೋ ಇಲ್ಲವೋ ಎಂಬುದನ್ನು ನೋಡಲು ನಮಗೆ ಬಿಡುವಿಲ್ಲ. ಅಂದರೆ ನಿಜ ಜೀವನದ ಹಲವಾರು ಒತ್ತಡಗಳಲ್ಲಿ ನಮ್ಮ ಬಗ್ಗೆ ಒಂದೈದು ನಿಮಿಷ ಚಿಂತಿಸಲು ಸಮಯ ಇಲ್ಲದಾಗುತ್ತದೆ. ಮನೋವಿಜ್ಞಾನದ ಪ್ರಕಾರ ವ್ಯಕ್ತಿ ಅದೆಷ್ಟೇ ಶ್ರೀಮಂತನಾಗಿದ್ದರೂ ತನಗಿಂತ ಶ್ರೀಮಂತರನ್ನು ಕಂಡಾಗ ಆತನದಲ್ಲಿದ್ದ ಉತ್ಸಾಹ, ತೃಪ್ತಿ, ಸಂತೋಷ ಕಡಿಮೆಯಾಗುತ್ತದೆ. ಲೇಖಕ ನಾಗೇಶ ಹೆಗಡೆಯವರ "ಮತ್ತೆ ಮತ್ತೆ ಕೂಗು ಮಾರಿ" ಪುಸ್ತಕದ '…
2
ಲೇಖಕರು: raguks
December 20, 2012
ಆಟ, ದಶಾವತಾರ, ಬಯಲಾಟ ಎಂದೇ ನೂರಾರು ವರ್ಷಗಳಿಂದ ಪ್ರಸಿದ್ಧವಾಗಿದ್ದ ಕನ್ನಡದ ಕಲೆಯ ಇತ್ತೀಚಿನ ಹೆಸರೇ ಯಕ್ಷಗಾನ. ಜಾನಪದ ಕಲೆ ಎಂದು ಯಾವುದೇ ಪ್ರೊತ್ಸಾಹವಿಲ್ಲದೇ ತಿರಸ್ಕಾರಕ್ಕೆ ಒಳಗಾದ ಬಯಲಾಟದ ಅನೇಕ ವಿಧಗಳಲ್ಲಿ ಇದೂ ಒಂದು. ದೊಡ್ಡಾಟ, ಘಟ್ಟದಕೋರೆ, ಶ್ರೀ ಕೃಷ್ಣ ಪಾರಿಜಾತ ಹೀಗೆ ಅನೇಕ ರಂಗ ಕಲೆಗಳು ಮೂಲೆ ಗುಂಪಾಗಿ ನಶಿಸಿ ಹೋಗಿವೆ ಹೋಗುತ್ತಿವೆ. ಯಕ್ಷಗಾನವೆಂದು ಕರಾವಳಿ ಮತ್ತು ಮಲೆನಾಡಿನ ಬಡಗು ಮತ್ತು ತೆಂಕು ಶೈಲಿಯ ಆಟ ಇತ್ತೀಚೆಗೆ ಪ್ರಸಿದ್ಧಿಗೆ ಬಂದರೂ ಸಿನೆಮಾ, ಸುಗಮ ಸಂಗೀತ, ಟಿವಿ…
ಲೇಖಕರು: ಮಮತಾ ಕಾಪು
December 18, 2012
ಒಟ್ಟು ಏಳು ಕಥೆಗಳ ಈ ಸಂಕಲನದಲ್ಲಿ ಚೇಳು-ಕಥೆ ಬಹಳ ಪ್ರಧಾನವಾದುದು. ಹಿಡಿ ಗಾತ್ರದ ಚೇಳಿನಿಂದಾಗಿ ಬಳ್ಳಾರಿ ಜಿಲ್ಲೆಯ ಒಂದು ಪುಟ್ಟ ಊರಿನಲ್ಲಿನ ಜನರು ಪಟ್ಟ ಪಾಡು, ಅದರಿಂದಾಗುತ್ತಿದ್ದ ಫಜೀತಿಗಳನ್ನು ಈ ಕಥೆಯಲ್ಲಿ ಸೊಗಸಾಗಿ ನಿರೂಪಿಸಿದ್ದಾರೆ. ಆ ಹಳ್ಳಿಯ ಜನಸಂಖ್ಯೆಗಿಂತ ಹೆಚ್ಚೇ ಚೇಳುಗಳಿದ್ದರಿಂದ ನೆಲದ ಮೇಲೆ ಕಾಲು ಇಡಲೂ ಕಷ್ಟಕರವಾದ್ದಂತಹ ಪರಿಸ್ಥಿತಿ. ತಾರಸಿಯ ಒಳಗೆ, ಮಡಿಸಿಟ್ಟ ಅರಿವೆಗಳಲ್ಲಿ, ಬೀಸುಕಲ್ಲಿನ ಕುಣಿಯಲ್ಲಿ, ಅಕ್ಕಿ ಡಬ್ಬಿಯ ಒಳಗೆ ಹೀಗೆ ನಾನಿಲ್ಲದೆಡೆಯಿಲ್ಲ ಎನ್ನುವ ಭಗವಂತನ…
5
ಲೇಖಕರು: partha1059
December 07, 2012
'ನಾನು ದೊಡ್ಡವನಾದ ಮೇಲೆ ಪೋಷ್ಟ್ ಕಾರ್ಡ್ ಮಾರುತ್ತೀನಿ" ಒಬ್ಬ ಪುಟ್ಟ ಬಾಲಕನ ಕನಸು. ಆ ಕನಸಿಗೆ ಇರುವ ಪ್ರಾಮುಖ್ಯತೆ ಅರ್ಥವಾಗಿಯೊ ಏನೊ ದೇವರು ತಥಾಸ್ತು ಅನ್ನುತ್ತಾನೆ. ಆ ಬಾಲಕ ಯುವಕನಾದಾಗ ಪೋಸ್ಟ್ ಆಫೀಸಿನಲ್ಲಿಯೆ ಕೆಲಸವು ದೊರಕುತ್ತದೆ. ಬಹುಷಃ ಅಲ್ಲಿಯೆ ಮುಂದುವರೆಯುತ್ತಿದ್ದಲ್ಲಿ , ಪ್ರಾಮಾಣಿಕವಾಗಿ ದುಡಿಯುತ್ತ ತನ್ನ ಕೆಲಸದಲ್ಲಿಯೆ ತೃಪ್ತಿ ಕಾಣುತ್ತ ಒಬ್ಬ ಪೋಸ್ಟ್ ಮಾಸ್ಟರ್ ಆಗಿ ನಿವೃತ್ತನಾಗಿ ಶಾಂತ ಜೀವನ ನಡೆಸುತ್ತ ಇದ್ದನೇನೊ ಅವನು.
ಆದರೆ ವಿದಿ ಬಿಡಬೇಕಲ್ಲ, ಆ ಯುವಕನ ಮುಂದೆ…
6
ಲೇಖಕರು: spr03bt
November 27, 2012
ಕನ್ನಡ ಸಾಹಿತ್ಯರ೦ಗದಲ್ಲಿ ಡಾ|| ಬಿ.ಜಿ.ಎಲ್. ಸ್ವಾಮಿ ಎ೦ಬ ಹೆಸರಿಗೆ ವಿಶೇಷ ಸ್ಥಾನವಿದೆ. ವಿಜ್ಞಾನವನ್ನು ತಮ್ಮದೇ ಆದ ಶೈಲಿಯಲ್ಲಿ ಬರೆದು ಸಾಮಾನ್ಯರೂ ಅವರ ಬರಹಗಳಿಗೆ ಮುಗಿಬೀಳುವ೦ತೆ ಮಾಡಿದ್ದರು. ಹಾಸ್ಯ ಅವರ ಬರಹಗಳಲ್ಲಿನ ವೈಶಿಷ್ಟ್ಯತೆ. ಪ್ರತಿಯೊಬ್ಬರೂ ಓದಲೇಬೇಕಾದ೦ಥ ಸ್ವಾಮಿಯವರ ಪುಸ್ತಕಗಳಲ್ಲಿ "ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ" ಮುಖ್ಯವಾದದ್ದು. ಪುಸ್ತಕದ ಹೆಸರೇ ತು೦ಬಾ ಕುತೂಹಲಕಾರಿಯಾಗಿದೆ.
ವಿದೇಶಿಯರು ನಮ್ಮ ದೇಶಕ್ಕೆ ಬ೦ದಿದುರ ಫಲವಾಗಿ ನಮ್ಮ ಸಾಮಾಜಿಕ, ಸಾ೦ಸ್ಕೃತಿಕ, ಆರ್ಥಿಕ…
6