ಪುಸ್ತಕ ಪರಿಚಯ

ಲೇಖಕರು: ramaswamy
August 10, 2010
ಗಾಯದ ತುಟಿಗಳಿಂದ ಮುರಿದ ಕೊಳಲನೂದಬೇಕಿದೆ’-ಎಂದು ವಾಸ್ತವದ ಸಂಕಟಗಳನ್ನು ತೆರೆದಿಡುವ ಶ್ರೀ ವೀರಣ್ಣ ಮಡಿವಾಳರ ತಮ್ಮ ಮೊದಲ ಕವನ ಸಂಕಲನ ‘ನೆಲದ ಕರುಣೆಯ ದನಿ’ ಯ ಮೂಲಕ ಸಾರಸ್ವತ ಲೋಕಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮೊದಲ ಸಂಕಲನ ತರುವ ಎಲ್ಲ ಕವಿಗಳಿಗೂ ಇರುವ ಹಾಗೇ ವೀರಣ್ಣನವರಿಗೂ ಇಲ್ಲಿನ ಕವಿತೆಗಳ ಆಯ್ಕೆಯಲ್ಲಿ ದ್ವಂದ್ವಗಳು ಕಾಡಿರುವ ಕುರುಹುಗಳಿವೆ. ಮೊದಲ ಸಂಕಲನ ಪ್ರಕಟಿಸುವ ಕವಿಗೆ ಕಾಡುವ ವಿಚಿತ್ರ ಸಮಸ್ಯೆಯೆಂದರೆ ಎಲ್ಲವನ್ನೂ ಮೊಗೆ ಮೊಗೆದು ಹೇಳಬೇಕು ಎಂಬ ಉತ್ಸಾಹ ಮತ್ತು…
ಲೇಖಕರು: rjewoor
August 09, 2010
ಕನ್ನಡದ ಪುಸ್ತಕಲೋಕದಲ್ಲಿ ಅವಿಷ್ಕಾರಗಳು ನಡೀತಾನೇ ಇರುತ್ತವೆ. ಮಕ್ಕಳ ಸಾಹಿತ್ಯದಲ್ಲೂ ಇಂತಹ ಪ್ರಯೋಗಗಳಿಗೆ ಕೊರೆತೆಯಿಲ್ಲ. ಮಕ್ಕಳ ಮನ ತಟ್ಟುವ...ಮನರಂಜಿಸುವ ಅದೆಷ್ಟೋ ಪುಸ್ತಕಗಳು ಪ್ರಕಟಗೊಂಡಿವೆ. ಕಾಮಿಕ್ ಪುಸ್ತಕಗಳು ಇದೆ ಸಾಲಿಗೆ ಸೇರುವ ಮತ್ತೊಂದು ಸಚಿತ್ರ ಸಾಹಿತ್ಯವೆಂತಲೇ ಹೇಳಬಹುದು. ಆದ್ರೆ, ಸಾಹಿತಿ ತಿರುಮಲೆ ಎಂ.ಎಸ್.ರಾಮಮೂರ್ತಿ ನಿಜಕ್ಕೂ ಹೊಸ ಪ್ರಯೋಗ ಮಾಡಿದ್ದಾರೆ. ಅಂದ್ರೆ, ಮಕ್ಕಳ ಇಷ್ಟಪಡುವ ವಿಷಯವನ್ನೆ ಆಧರಿಸಿ ಇಡೀ ಕಾದಂಬರಿಯನ್ನ ರಚಿಸಿದ್ದಾರೆ..ಕಾದಂಬರಿ ಮುಖ ಪುಟ ನೋಡಿದರೆ…
ಲೇಖಕರು: h.a.shastry
August 05, 2010
  (ನನ್ನ ಈ ಲೇಖನ ಆಗಸ್ಟ್ ೮, ೨೦೧೦ರ ’ಕರ್ಮವೀರ’ದಲ್ಲಿ ಪ್ರಕಟವಾಗಿದೆ.)  ಎಸ್.ಎಲ್. ಭೈರಪ್ಪನವರು ಮತ್ತೊಮ್ಮೆ ನಮ್ಮ ಮನ-ಮಸ್ತಿಷ್ಕಗಳಿಗೆ ಚುರುಕು ಮುಟ್ಟಿಸಿದ್ದಾರೆ. ’ಕವಲು’ ಕಾದಂಬರಿಯನ್ನು ಕೊಟಿದ್ದಾರೆ.  ’ಭಾರತೀಯ ಸಮಾಜದಲ್ಲಿ ಕವಲುದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುತ್ತಾ ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು’ ಎಂಬ ಪೂರ್ವನುಡಿ ಹೊಂದಿರುವ ಈ ಕಾದಂಬರಿಯು ತನ್ನೀ ಹಾದಿಯಲ್ಲಿ, ದಾಂಪತ್ಯಜೀವನವೇ ಮೊದಲಾಗಿ ಭಾರತೀಯ ಕುಟುಂಬಪದ್ಧತಿಯು…
ಲೇಖಕರು: h.a.shastry
August 02, 2010
  ಈಚೆಗೆ ನನ್ನ ಕೈಗೊಂದು ಮೌಲಿಕ ಕೃತಿ ಸಿಕ್ಕಿತು. ಕೊಂಡಜ್ಜಿ ಕೆ. ವೆಂಕಟೇಶ್ ಸಂಪಾದಿಸಿರುವ ’ಭೈರಪ್ಪಾಭಿನಂದನಾ’ ಗ್ರಂಥ ಅದು. ೧೯೯೩ರಲ್ಲಿ ಪ್ರಥಮ ಮುದ್ರಣವಾಗಿ ಹೊರಬಂದು ೨೦೦೫ರಲ್ಲಿ ದ್ವಿತೀಯ ಮತ್ತು ವಿಸ್ತೃತ ಮುದ್ರಣ ಕಂಡಿರುವ ಈ ಪುಸ್ತಕ ಅದುಹೇಗೋ ಇದುವರೆಗೆ ನನ್ನ ದೃಷ್ಟಿಯಿಂದ ತಪ್ಪಿಸಿಕೊಂಡುಬಿಟ್ಟಿತ್ತು! ಓದುತ್ತಹೋದಂತೆ ಈ ಕೃತಿಯು ನನ್ನನ್ನು ಹಿಡಿದಿಟ್ಟು ಕುಳ್ಳಿರಿಸಿ ಓದಿಸಿಕೊಂಡಿತು.  ನಮ್ಮ ನಡುವಿನ ಶ್ರೇಷ್ಠ ಸಾಹಿತಿ ಎಸ್.ಎಲ್. ಭೈರಪ್ಪನವರ ಬಗ್ಗೆ ಮತ್ತು ಅವರ ಅನೇಕ ಕೃತಿಗಳ…
ಲೇಖಕರು: ramaswamy
July 22, 2010
ಈ ಕಡಲ ತುಂಬ ಅವಿಶ್ರಾಂತ ಅಲೆಗಳು. . . . . .                                    ‘ಕಡಲಿಗೆಷ್ಟೊಂದು ಬಾಗಿಲು’ ರೂಪ ಹಾಸನ ಅವರ ನಲವತ್ತು ಪದ್ಯಗಳ ಮೂರನೆಯ ಸಂಕಲನ. ‘ಒಂದಷ್ಟು ಹಸಿಮಣ್ಣು’ ‘ಬಾಗಿಲಾಚೆಯ ಮೌನ’ ಸಂಕಲನಗಳಿಂದ ಸಾರಸ್ವತ ಲೋಕದ ಹೆಬ್ಬಾಗಿಲು ಬಡಿದು ಅಲ್ಲಿ ಈಗಾಗಲೇ ಪ್ರತಿಷ್ಠಾಪನೆಗೊಂಡ ಕೆಲ ಹೆಸರುಗಳಲ್ಲಿ ರೂಪ ಅವರೂ ಒಬ್ಬರು. ವಿವಿಧ ಕವಿಗೋಷ್ಠಿಗಳ ಖಾಯಂ ಹೆಸರುಗಳಲ್ಲಿ ಒಬ್ಬರಾಗಿರುವ ರೂಪ, ಪದ್ಯ ಬರೆಯುವದರ ಜೊತೆಜೊತೆಗೆ ನಾಡಿನ ಬಹುತೇಕ ಯುವ ಬರಹಗಾರರೊಂದಿಗೆ ಸಾಹಿತ್ಯಕ…
ಲೇಖಕರು: ramaswamy
July 18, 2010
ಕೃತಿ: ಅವ್ವನ ಅಂಗನವಾಡಿ ಡಾ.ಅರುಣ ಜೋಳದಕೂಡ್ಲಿಗಿ ವಾಚಕರವಾಣಿ ಮತ್ತು ಓದುಗರ ಪತ್ರದ ಮೂಲಕ ನಿರಂತರವಾಗಿ ತಮ್ಮ ಸುತ್ತಲಿನ ಅನ್ಯಾಯಗಳನ್ನು ಕುಂದುಕೊರತೆಗಳನ್ನೂ ಅವರಿವರ ಕತೆ-ಕವಿತೆಗಳಿಗೆ ಪ್ರತಿಕ್ರಿಯೆಗಳನ್ನು  ಬರೆಯುತ್ತಲೇ ಕವಿಯಾಗಿ ಅರಳಿದವರು. ಕಾವ್ಯ ಸ್ಪರ್ಧೆಗಳಲ್ಲೂ ತಮ್ಮ ಕವಿತೆಗಳಿಗೆ ಬಹುಮಾನಗಳನ್ನು ಪಡೆಯುವ ಮೂಲಕ ಎಡ ಪಂಥೀಯ ಆಶಯಗಳನ್ನು, ಸಮಾನತೆಯ ಕನಸುಗಳನ್ನೂ ತಮ್ಮ ಬರಗಳುದ್ದಕ್ಕೂ ಕಾಣಿಸುತ್ತಲೇ ಬಂದವರು. ಈಗಾಗಲೇ ‘ನೆರಳು ಮಾತಾಡುವ ಹೊತ್ತು’ (೨೦೦೪) ಕವನ ಸಂಕಲನವನ್ನೂ,…