ಪುಸ್ತಕ ಪರಿಚಯ

ಲೇಖಕರು: spr03bt
October 10, 2012
ಇತ್ತೀಚೆಗೆ ಪ್ರಜವಾಣಿ ಪತ್ರಿಕೆಯಲ್ಲಿ ಡಾ. ಕೆ.ಎನ್. ಗಣೇಶಯ್ಯನವರ ಹೊಸ ಕಾದ೦ಬರಿ "ಮೂಕ ಧಾತು" ಬಿಡುಗಡೆಯಾದ ಸುದ್ದಿ ಓದಿ ನನಗೆ ತು೦ಬಾ ಖುಶಿಯಾಗಿತ್ತು. ಕನ್ನಡದಲ್ಲಿ ಅವರ ವಿಶಿಷ್ಟ ಹಾಗು ಹೊಸ ಬರವಣಿಗೆ ಶೈಲಿಗೆ ಮರುಳಾದವರಲ್ಲಿ ನಾನೂ ಒಬ್ಬ. ಇವರ ಬಗ್ಗೆ ತಿಳಿದ ಸ್ವಲ್ಪವೇ ಸಮಯದಲ್ಲಿ ಇವರ ಎಲ್ಲಾ ಹತ್ತು ಪುಸ್ತಕಗಳನ್ನು ಓದಿ ಮುಗಿಸಿರುವೆ ಎ೦ದರೆ ಇವರ ಬರವಣಿಗೆಗಿರುವ ಸೆಳತ ಅರ್ಥವಾಗಬಹುದು. ವೃತ್ತಿಯಲ್ಲಿ ಕೃಷಿ ವಿಜ್ಞಾನಿಯಾದ ಇವರ ಬರವಣಿಗೆಯಲ್ಲಿ ಹೆಚ್ಚಾಗಿ ಕಾಣುವುದು ಇತಿಹಾಸಕ್ಕೆ…
ಲೇಖಕರು: siddharam
November 26, 2011
ಭಾರತ ಹೇಗೆ ಕೃಷಿ ಪ್ರಧಾನವಾದ ದೇಶವೋ ಚೀನಾ ದೇಶವೂ ಕೃಷಿ ಪ್ರಧಾನವಾದ ದೇಶವೇ. ಇಂದು ಚೀನ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿದ್ದರೂ ಅದರ ಅಂತರಾಳದಲ್ಲಿ ಹರಿಯುತ್ತಿರುವುದು ಕೃಷಿಯ ಬೆವರೇ. ಅಮೆರಿಕನ್ ಲೇಖಕಿ ಪರ್ಲ್.ಎಸ್.ಬಕ್ ಚೀನಾ ದೇಶದಲ್ಲಿ ೫ ವರ್ಷಗಳವರೆಗೆ ಇದ್ದು, ಅಲ್ಲಿನವರಿಗೆ ಕೃಷಿಯ ಬಗೆಗಿರುವ ಒಲವು, ಅಲ್ಲಿನ ಬದುಕಿನ ಬವಣೆಗಳು, ಲಿಂಗ ತಾರತಮ್ಯ, ಮೇಲ್ವರ್ಗದವರ ಶೋಷಣೆ, ಭೂಮಿಯ ಬಗೆಗೆ ಕೃಷಿಕರಿಗಿರುವ ಪ್ರೀತಿ ಎಲ್ಲವನ್ನೂ ತಮ್ಮ ಗುಡ್ ಅರ್ತ್ ಕಾದಂಬರಿಯಲ್ಲಿ ಹಿಡಿದಿಟ್ಟಿದ್ದಾರೆ.…
ಲೇಖಕರು: hamsanandi
November 25, 2011
ನಾನು ಚಿಕ್ಕವನಿದ್ದಾಗ ಅಜ್ಜಿ ಎಷ್ಟೋ ಹಳೆಯ ವಿಚಾರಗಳ ಬಗ್ಗೆ ಹೇಳುತ್ತಿದ್ದರು. ಅವರು ಹೋಗಿದ್ದ ಊರುಗಳ ಪ್ರಸ್ತಾಪವೂ ಅಲ್ಲಲ್ಲಿ ಬರ್ತಿತ್ತು. ಅವುಗಳಲ್ಲಿ ಒಂದು ಪ್ರಯಾಗದ ತ್ರಿವೇಣಿ ಸಂಗಮ. ಅಲ್ಲಿ ಗಂಗೆ ಮತ್ತೆ ಯಮುನೆ ಎರಡೂ ನದಿಗಳು ಸೇರುತ್ತವೆ. ಕಪ್ಪು ಬಣ್ಣದ ಯಮುನಾ ಮತ್ತೆ ತಿಳಿಯಾದ ಗಂಗೆ ಎರಡೂ ಅಲ್ಲದೆ, ಬರಿಗಣ್ಣಿಗೆ ಕಾಣದ ಸರಸ್ವತೀ ಕೂಡ ಅಲ್ಲೇ ಸೇರುತ್ತೆ. ಅದು ಗುಪ್ತ ಗಾಮಿನಿ, ಹಾಗಾಗಿ ಇದಕ್ಕೆ ತ್ರಿವೇಣಿ ಸಂಗಮ ಅಂತ ಹೆಸರು (ವೇಣಿ = ಜಡೆ. ಜಡೆಗೆ ಮೂರು ಕಾಲುಗಳಿರುವುದರಿಂದ ಈ ಹೆಸರು…
2
ಲೇಖಕರು: makrumanju
October 21, 2011
 ಜ್ಞಾನಪೀಠ ಪ್ರಶಸ್ತಿ ವಿಜೇತ ಕಂಬಾರರ ಈ ಕಾದಂಬರಿಯನ್ನು ನಾನು ಎಂ.ಫಿಲ್ ಪದವಿಯಲ್ಲಿ ಅಧ್ಯಯನ ವಿಷಯವಾಗಿ ತೆಗೆದು ಕೊಂಡಿದ್ದೆ. ಇಲ್ಲಿ ಈ ಕಾದಂಬರಿಯ ಓದಿನ ಸಾರಾಂಶವನ್ನು ತಿಳಿಸಲು ಪ್ರಯತ್ನಿಸುತ್ತೇನೆ.    'ಶಿಖರಸೂರ್ಯ' ಕಾದಂಬರಿಯು ಜನಪದ ಕತೆಯನ್ನು ಆಧರಿಸಿ ರಚಿತವಾಗಿದೆ. ಚಂದ್ರಶೇಖರ ಕಂಬಾರರ ಐದನೆಯ ಹಾಗೂ ಇಲ್ಲಿವರೆಗಿನ ಕೊನೆಯ ಕಾದಂಬರಿ 'ಶಿಖರಸೂರ್ಯ'. ಈ ಕಾದಂಬರಿಯು 2006 ರಲ್ಲಿ  ಪ್ರಕಟಗೊಂಡಿತು. ಜಾನಪದ ಮೈಯ್ಯಿಗೆ ಆಧುನಿಕ ಸಂವೇದನೆಯನ್ನು ಕಸಿ ಮಾಡಿದ ನಮ್ಮ ಅದ್ವೀತಿಯ ಕವಿಯಾದ ಕಂಬಾರರ…
ಲೇಖಕರು: siddharam
September 02, 2011
ಸಾಹಿತ್ಯದ ಆತ್ಮಕಥನಗಳು ಕನ್ನಡಕ್ಕೆ ಬಂದಾಗ ಓದುಗರಿಗೆ ನವಿರೇಳಿಸಿದ್ದವು. ನೋವು, ಹತಾಶೆ, ಶೋಷಣೆ, ಅಮಾನವೀಯತೆಗಳನ್ನು ಅನುಭವಿಸಿದವರಿಂದಲೇ ನೇರವಾಗಿ ಆತ್ಮಕಥನಗಳಾಗಿ ಕನ್ನಡ ಓದುಗರಿಗೆ ಮರಾಠಿ ಸಾಹಿತ್ಯದಿಂದ ಇತರೆ ಭಾಷೆಗಳಿಂದಲೂ ಲಭಿಸಿತ್ತು. ಆದರೆ ಮಹಿಳೆಯೊಬ್ಬರು ಲೈಂಗಿಕ ಕಾರ್ಯಕರ್ತೆಯಾಗಿ ಅನುಭವಿಸಿದ ನೋವನ್ನು ಕಣ್ಣೋಟದಿಂದ ಕಂಡ ಜಗತ್ತನ್ನು ಅನಾವರಣಗೊಳಿಸಿದ ಆತ್ಮಕಥನ ಕನ್ನಡದಲ್ಲಿ ಬಂದಿರುವುದು ವಿಶೇಷ. ಮೂಲತ: ಮಲೆಯಾಳಂ ಭಾಷೆಯ ಜ್ಞಾನ್ ಲೈಂಗಿಕ ತೊಳಿಲಾಳಿ ಎಂಬ ನಳಿನಿ ಜಮೀಲಾರ…
ಲೇಖಕರು: siddharam
November 01, 2010
ಕುಂವೀ ಆತ್ಮಕಥನ - ಗಾಂಧಿ ಕ್ಲಾಸು ಇತ್ತೀಚೆಗೆ ಬಿಡುಗಡೆಯಾದ ಬಹು ನಿರೀಕ್ಷೆಯ ಕುಂವೀ ಆತ್ಮಕಥನ ಗಾಂಧಿ ಕ್ಲಾಸು ಆತ್ಮಕಥನ ರೂಪದ ಕಾದಂಬರಿ ಎನ್ನುವಂತಿದೆ. ಯಾಕೆಂದರೆ ಇಲ್ಲಿ ಬರುವ ಎಲ್ಲ ಸನ್ನಿವೇಶಗಳೂ ಕಾದಂಬರಿಯ ರೀತಿಯಲ್ಲಿ ಹೆಣೆಯಲ್ಪಟ್ಟಿವೆಯಲ್ಲದೆ, ಇಲ್ಲಿ ಬರುವ ಎಲ್ಲ ಘಟನೆಗಳೂ ತಮ್ಮ ಜೀವನದ ಶೇ.೯೯ರಷ್ಟು ಸತ್ಯವೆಂದೇ ಕುಂವೀ ಹೇಳುತ್ತಾರೆ.  ಬಾಲ್ಯದಿಂದ ಹಿಡಿದು, ಅಮೆರಿಕಾದ ಅಕ್ಕ ಸಮ್ಮೇಳನದವರೆಗೆ ಬೆಳೆದ ಕುಂವೀಯನ್ನು ನಾವಿಲ್ಲಿ ಕಾಣುತ್ತೇವೆ. ಅಪ್ಪಟ ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಷೆಯ…
1