ಪುಸ್ತಕ ಪರಿಚಯ
ಲೇಖಕರು: Ashwin Rao K P
July 10, 2020

ಸ್ವಾತಂತ್ರ್ಯವೆಂಬುವುದು ಕೇವಲ ರಾಜಕೀಯ ಸ್ಥಿತ್ಯಂತರವಲ್ಲ. ಅದು ಎಲ್ಲ ಜೀವನ ಕ್ಷೇತ್ರಗಳನ್ನೂ ಸ್ವಾಭಿಮಾನದಿಂದ ಉಜ್ಜೀವಿಸಬಲ್ಲ ಸ್ವಧರ್ಮ ನಿಷ್ಠೆ- ಎಂಬ ಮನವರಿಕೆಯನ್ನು ಇಪ್ಪತ್ತನೇ ಶತಮಾನದ ಆರಂಭದ ವರ್ಷಗಳಲ್ಲಿ ಭಾರತೀಯರಲ್ಲಿ ಮೂಡಿಸಿ ಸ್ವಾತಂತ್ರ್ಯ ಸಂಘರ್ಷಕ್ಕೆ ಅನುಪಮ ಯೋಗದಾನ ಮಾಡಿದವರು ಸಿಸ್ಟರ್ ನಿವೇದಿತಾ ಇವರು. ಈ ಸಂಘರ್ಷಕ್ಕೆ ಒಂದು ಆಯಾಮ ನೀದಲು ‘ಆಕ್ರಮಕ ಹಿಂದೂಧರ್ಮ' ಎಂಬ ಕಲ್ಪನೆಯನ್ನು ಹುಟ್ಟುಹಾಕಿದವರು ಇವರೇ. ಸ್ವಾಮೀ ವಿವೇಕಾನಂದರ ಶಿಷ್ಯೆಯಾಗಿದ್ದು ತಮ್ಮ ಗುರುಗಳ ಆಶಯದಂತೆ…
ಲೇಖಕರು: Ashwin Rao K P
July 08, 2020

ಡಾ॥ ಎಲ್.ವಸಂತ ಇವರು ಬರೆದಿರುವ ಈ ಕೃತಿ ನಿರಂತರವಾಗಿ ಪುನರ್ ಮುದ್ರಣ ಕಾಣುತ್ತಿದೆ. ಈಗಾಗಲೇ ೧೧ ಮುದ್ರಣಗಳು ಕಂಡ ಕೃತಿ ಇದು. ನಮ್ಮ ಶರೀರ ನಿಸರ್ಗದ ಒಂದು ಅಂಗ, ನಿಸರ್ಗದ ಸೃಷ್ಟಿ. ಶರೀರದ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಲು, ಅದರ ಸೌಂದರ್ಯವನ್ನು ಅಧಿಕಗೊಳಿಸಲು ನಿಸರ್ಗ ನಮಗೆ ಗಿಡಮೂಲಿಕೆಗಳು, ಖನಿಜ, ಲವಣಗಳ ರೂಪದಲ್ಲಿ ಹಲವಾರು ಉಪಯುಕ್ತ ಸಾಧನಗಳನ್ನೂ ಕರುಣಿಸಿದೆ. ಇವನ್ನು ಸರಿಯಾಗಿ ಉಪಯೋಗಿಸಿದರೆ, ಇಂದಿನ ಜಲ, ವಾಯು ಹಾಗೂ ಪರಿಸರ ಮಾಲಿನ್ಯದ ಕಲುಷಿತ ವಾತಾವರಣದಲ್ಲಿಯೂ ಶರೀರದ ಆರೋಗ್ಯ…
ಲೇಖಕರು: Ashwin Rao K P
July 02, 2020

ಆರೋಗ್ಯವೇ ಭಾಗ್ಯ. ನಮ್ಮ ಸುತ್ತಮುತ್ತಲಿನ ತರಕಾರಿ, ಹಣ್ಣು ಹಂಪಲುಗಳಲ್ಲಿರುವ ರೋಗ ನಿವಾರಕ ಗುಣಗಳನ್ನು ಈ ಪುಸ್ತಕದ ಮೂಲಕ ನಮ್ಮ ಮುಂದೆ ಇರಿಸಿದ್ದಾರೆ ಡಾ. ಎಂ.ಎಚ್. ಸವಿತ ಇವರು. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದುಕೊಂಡು ತಮ್ಮ ಅನುಭವದ ನೆಲೆಗಟ್ಟಿನಲ್ಲಿ ಈ ಪುಸ್ತಕ ಬರೆದಿದ್ದಾರೆ.
ನಿತ್ಯ ಬಳಸುವ ಆಹಾರದಲ್ಲಿ ಎಷ್ಟೊಂದು ವೈವಿಧ್ಯಮಯ ಪೋಷಕಾಂಶಗಳಿವೆ. ‘ಊಟ ಬಲ್ಲವನಿಗೆ ರೋಗವಿಲ್ಲ' ಎಂಬುದು ಮೊದಲಿನಿಂದ ಚಾಲ್ತಿಯಲ್ಲಿರುವ ಗಾದೆ. ನಮ್ಮ ಊಟದಲ್ಲಿರುವ…
ಲೇಖಕರು: Ashwin Rao K P
June 29, 2020

ಹಿರಿಯ ಲೇಖಕರಾದ ರಾಜಾರಾಂ ತಲ್ಲೂರು ಅವರ ನಾಲ್ಕನೇ ಕೃತಿ ಇದು. ನುಣ್ಣನ್ನ ಬೆಟ್ಟ (೨೦೧೭), ತಲ್ಲೂರು ಎಲ್ ಎನ್ (೨೦೧೮) ಮತ್ತು ಏನಿದು ಪೌರತ್ವ ತಿದ್ದುಪಡಿ ಕಾಯಿದೆ (೨೦೧೯) ರಾಜಾರಾಂ ತಲ್ಲೂರು ಅವರ ಪ್ರಕಟಿತ ಕೃತಿಗಳು. ಇವರಿಗೆ, ಇವರ ಕೃತಿಗಳಿಗೆ ೨೦೧೭ರಲ್ಲಿ ಅಮ್ಮ ಪ್ರಶಸ್ತಿ ಮತ್ತು ೨೦೨೦ರಲ್ಲಿ ಶಿವರಾಮ ಕಾರಂತ ಪುರಸ್ಕಾರ ಸಂದಿದೆ.
ದುಪ್ಪಟ್ಟು ಆಕರ್ಷಕ ಮತ್ತು ಕುತೂಹಲ ಮೂಡಿಸುವ ಮುಖಪುಟ ಚಿತ್ರದೊಂದಿಗೆ ಗಮನಸೆಳೆಯುತ್ತದೆ. ತಲ್ಲೂರು ಅವರ ಕೃತಿ ಎಂದರೆ ಸಹಜವಾಗಿಯೇ ಅದು ಅಚ್ಚುಕಟ್ಟಾಗಿ…
1
ಲೇಖಕರು: Ashwin Rao K P
June 27, 2020

ಸ್ವಾಮಿ ಮತ್ತು ಅವನ ಸ್ನೇಹಿತರು ಖ್ಯಾತ ಸಾಹಿತಿ ಆರ್.ಕೆ.ನಾರಾಯಣ್ ಅವರ ಮಾಲ್ಗುಡಿ ಡೇಸ್ ಎಂಬ ಕಥಾ ಸಂಕಲನದ ಒಂದು ಕಥಾ ಭಾಗ. ಕನ್ನಡದ ಖ್ಯಾತ ನಟ, ನಿರ್ದೇಶಕ ಶಂಕರ್ ನಾಗ್ ಈ ಕಥೆಗಳನ್ನು ಕಿರುತೆರೆಗೆ ಧಾರವಾಹಿ ರೂಪದಲ್ಲಿ ತಂದಿದ್ದು ಎಲ್ಲರಿಗೂ ತಿಳಿದ ವಿಷಯ. ಹಿಂದಿಯಲ್ಲಿ ಬಹಳ ಹಿಂದೆ ಪ್ರಸಾರವಾದ ಮಾಲ್ಗುಡಿ ಡೇಸ್ ಈಗ ಮತ್ತೆ ಕನ್ನಡಕ್ಕೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.
ಸ್ವಾಮಿ ಮತ್ತು ಅವನ ಸ್ನೇಹಿತರು ಎಂಬ ಕಥೆಯು ಸ್ವಾಮಿನಾಥನ್ ಎಂಬ ೧೦ ವರ್ಷದ ಮುಗ್ಧ ಬಾಲಕನ ಸುತ್ತ…
ಲೇಖಕರು: Ashwin Rao K P
June 20, 2020

ನವಕರ್ನಾಟಕ ಪ್ರಕಾಶನದವರು ಡಾ. ಸಿ.ಆರ್. ಚಂದ್ರಶೇಖರ್ ಇವರ ಸಂಪಾದಕತ್ವದಲ್ಲಿ ವ್ಯಕ್ತಿ ವಿಕಸನ ಮಾಲೆ ಈ ಮಾಲಿಕೆಯಲ್ಲಿ ಹೊರತಂದ ಪುಸ್ತಕವೇ ‘ಮನಸ್ಸಿನ ಮ್ಯಾಜಿಕ್'. ವೃತ್ತಿಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದ ಅಡ್ಡೂರು ಕೃಷ್ಣ ರಾವ್ ಇವರ ಪ್ರವೃತ್ತಿ ಬರವಣಿಗೆ. ಮಂಗಳೂರಿನ ಬಳಕೆದಾರರ ವೇದಿಕೆಯ ಸಂಚಾಲಕರಾಗಿ ಹಲವಾರು ಮಂದಿಗೆ ಸಲಹೆ ಸಹಾಯ, ಮಾರ್ಗದರ್ಶನ ಮಾಡಿಕೊಟ್ಟಿದ್ದಾರೆ. ಕೃಷಿಯ ಬಗ್ಗೆಯೂ ಆಸಕ್ತಿ ಇರುವ ಇವರು ‘ಹಸುರು ಹೆಜ್ಜೆ' ಎಂಬ ಕೃತಿಯನ್ನು ಹೊರತಂದಿದ್ದಾರೆ. ದಿನ ಹಾಗೂ ಮಾಸ…