ಗಿಡ ಮೂಲಿಕೆಗಳಿಂದ ಸೌಂದರ್ಯ ಸಾಧನಗಳು

ಗಿಡ ಮೂಲಿಕೆಗಳಿಂದ ಸೌಂದರ್ಯ ಸಾಧನಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ॥ ಎಲ್.ವಸಂತ
ಪ್ರಕಾಶಕರು
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈ.ಲಿ. ಬೆಂಗಳೂರು
ಪುಸ್ತಕದ ಬೆಲೆ
೩೫.೦೦ ರೂ. ಮೊದಲ ಮುದ್ರಣ: ೧೯೯೩

ಡಾ॥ ಎಲ್.ವಸಂತ ಇವರು ಬರೆದಿರುವ ಈ ಕೃತಿ ನಿರಂತರವಾಗಿ ಪುನರ್ ಮುದ್ರಣ ಕಾಣುತ್ತಿದೆ. ಈಗಾಗಲೇ ೧೧ ಮುದ್ರಣಗಳು ಕಂಡ ಕೃತಿ ಇದು. ನಮ್ಮ ಶರೀರ ನಿಸರ್ಗದ ಒಂದು ಅಂಗ, ನಿಸರ್ಗದ ಸೃಷ್ಟಿ. ಶರೀರದ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಲು, ಅದರ ಸೌಂದರ್ಯವನ್ನು ಅಧಿಕಗೊಳಿಸಲು ನಿಸರ್ಗ ನಮಗೆ ಗಿಡಮೂಲಿಕೆಗಳು, ಖನಿಜ, ಲವಣಗಳ ರೂಪದಲ್ಲಿ ಹಲವಾರು ಉಪಯುಕ್ತ ಸಾಧನಗಳನ್ನೂ ಕರುಣಿಸಿದೆ. ಇವನ್ನು ಸರಿಯಾಗಿ ಉಪಯೋಗಿಸಿದರೆ, ಇಂದಿನ ಜಲ, ವಾಯು ಹಾಗೂ ಪರಿಸರ ಮಾಲಿನ್ಯದ ಕಲುಷಿತ ವಾತಾವರಣದಲ್ಲಿಯೂ ಶರೀರದ ಆರೋಗ್ಯ ಹಾಗೂ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.

ಈ ಕೃತಿಯ ಲೇಖಕರಾದ ಡಾ॥ ಎಲ್.ವಸಂತ್ ಅವರು ಗಿಡಮೂಲಿಕೆಗಳಿಂದ ಮನೆಯಲ್ಲೇ ಹೇಗೆ ಸೌಂದರ್ಯ ಸಾಧನಗಳನ್ನು ತಯಾರಿಸಿಕೊಳ್ಳಬಹುದು ಎಂಬುದನ್ನು ಶರೀರ ಸೌಂದರ್ಯದ ಜತೆಗೆ ಶರೀರಾರೋಗ್ಯ ಕಾಪಾಡಿಕೊಳ್ಳಲು ಆಯುರ್ವೇದದ ಪ್ರಕಾರ ಅನುಸರಿಸಬೇಕಾದ ಕೆಲವು ಆಚರಣೆಗಳನ್ನು ಸರಳವಾಗಿ ವಿವರಿಸಿದ್ದಾರೆ. 

ಸುಮಾರು ೬೦ ಪುಟಗಳ ಈ ಕಿರು ಹೊತ್ತಿಗೆ ಮಾಹಿತಿಪೂರ್ಣ ವಿಷಯಗಳನ್ನು ಹೊಂದಿದೆ.