ಅಗ್ನಿಪಥಿಕೆ ನಿವೇದಿತಾ

ಅಗ್ನಿಪಥಿಕೆ ನಿವೇದಿತಾ

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್. ಆರ್. ರಾಮಸ್ವಾಮಿ
ಪ್ರಕಾಶಕರು
ರಾಷ್ಟೋತ್ಥಾನ ಸಾಹಿತ್ಯ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೦೦.೦೦ ಮೊದಲ ಮುದ್ರಣ: ೨೦೨೦

ಸ್ವಾತಂತ್ರ್ಯವೆಂಬುವುದು ಕೇವಲ ರಾಜಕೀಯ ಸ್ಥಿತ್ಯಂತರವಲ್ಲ. ಅದು ಎಲ್ಲ ಜೀವನ ಕ್ಷೇತ್ರಗಳನ್ನೂ ಸ್ವಾಭಿಮಾನದಿಂದ ಉಜ್ಜೀವಿಸಬಲ್ಲ ಸ್ವಧರ್ಮ ನಿಷ್ಠೆ- ಎಂಬ ಮನವರಿಕೆಯನ್ನು ಇಪ್ಪತ್ತನೇ ಶತಮಾನದ ಆರಂಭದ ವರ್ಷಗಳಲ್ಲಿ ಭಾರತೀಯರಲ್ಲಿ ಮೂಡಿಸಿ ಸ್ವಾತಂತ್ರ್ಯ ಸಂಘರ್ಷಕ್ಕೆ ಅನುಪಮ ಯೋಗದಾನ ಮಾಡಿದವರು ಸಿಸ್ಟರ್ ನಿವೇದಿತಾ ಇವರು. ಈ ಸಂಘರ್ಷಕ್ಕೆ ಒಂದು ಆಯಾಮ ನೀದಲು ‘ಆಕ್ರಮಕ ಹಿಂದೂಧರ್ಮ' ಎಂಬ ಕಲ್ಪನೆಯನ್ನು ಹುಟ್ಟುಹಾಕಿದವರು ಇವರೇ. ಸ್ವಾಮೀ ವಿವೇಕಾನಂದರ ಶಿಷ್ಯೆಯಾಗಿದ್ದು ತಮ್ಮ ಗುರುಗಳ ಆಶಯದಂತೆ ರಾಷ್ಟ್ರ ದರ್ಶನಕ್ಕೆ ಸಮರ್ಥ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಸೇವೆ-ತ್ಯಾಗಗಳ ಮೂಲಕ ತಮ್ಮ ಪದ ಚಿನ್ಹೆಯನ್ನು ಉಳಿಸಿ ಹೋದವರು ಇವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಓರ್ವ ಅಗ್ರಣಿಯಾಗಿದ್ದುದಲ್ಲದೇ ಆ ಪೀಳಿಗೆಯ ಹತ್ತಾರು ಮಂದಿಯನ್ನು ಹೋರಾಟಕ್ಕೆ ಅಣಿಗೊಳಿಸಿದ್ದು ಸಿಸ್ಟರ್ ನಿವೇದಿತಾ ಇವರ ಹೆಗ್ಗಳಿಕೆ. ಹಿಂದೂ ಧರ್ಮದೊಂದಿಗೆ ಇವರು ಬೆಳೆಸಿಕೊಂಡಿದ್ದ ಸಮರ್ಪಿತ ಜೀವನ ಇಂದಿಗೂ ಅದ್ವೀತೀಯ ಸ್ಪೂರ್ತಿಗಾಥೆಯಾಗಿ ಉಳಿದಿದೆ. ಇಂಥಹ ದಿವ್ಯ ಚೇತನದ ಪಯಣದ ಹಲವು ಮಜಲುಗಳ ವಿಶ್ಲೇಷಣಾತ್ಮಕ ಕಥನವೇ ಅಗ್ನಿಪಥಿಕೆ ನಿವೇದಿತಾ.

ಸುಮಾರು ೧೨೫ ಪುಟಗಳನ್ನು ಹೊಂದಿರುವ ಪುಸ್ತಕವನ್ನು ರಾಷ್ಟೋತ್ಥಾನ ಸಾಹಿತ್ಯ, ಬೆಂಗಳೂರು ಇವರು ಹೊರ ತಂದಿದ್ದಾರೆ.