ನಮ್ಮ ತರಕಾರಿಯಲ್ಲಿ ಔಷಧೀಯ ಗುಣಗಳು

ನಮ್ಮ ತರಕಾರಿಯಲ್ಲಿ ಔಷಧೀಯ ಗುಣಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಎಂ.ಎಚ್. ಸವಿತ
ಪ್ರಕಾಶಕರು
ಅರೀಡ್ಸ್, ಶಿವಮೊಗ್ಗ
ಪುಸ್ತಕದ ಬೆಲೆ
೧೦೦.೦೦ ರೂ. ಪ್ರಥಮ ಮುದ್ರಣ ೨೦೧೪

ಆರೋಗ್ಯವೇ ಭಾಗ್ಯ. ನಮ್ಮ ಸುತ್ತಮುತ್ತಲಿನ ತರಕಾರಿ, ಹಣ್ಣು ಹಂಪಲುಗಳಲ್ಲಿರುವ ರೋಗ ನಿವಾರಕ ಗುಣಗಳನ್ನು ಈ ಪುಸ್ತಕದ ಮೂಲಕ ನಮ್ಮ ಮುಂದೆ ಇರಿಸಿದ್ದಾರೆ ಡಾ. ಎಂ.ಎಚ್. ಸವಿತ ಇವರು. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದುಕೊಂಡು ತಮ್ಮ ಅನುಭವದ ನೆಲೆಗಟ್ಟಿನಲ್ಲಿ ಈ ಪುಸ್ತಕ ಬರೆದಿದ್ದಾರೆ.

ನಿತ್ಯ ಬಳಸುವ ಆಹಾರದಲ್ಲಿ ಎಷ್ಟೊಂದು ವೈವಿಧ್ಯಮಯ ಪೋಷಕಾಂಶಗಳಿವೆ. ‘ಊಟ ಬಲ್ಲವನಿಗೆ ರೋಗವಿಲ್ಲ' ಎಂಬುದು ಮೊದಲಿನಿಂದ ಚಾಲ್ತಿಯಲ್ಲಿರುವ ಗಾದೆ. ನಮ್ಮ ಊಟದಲ್ಲಿರುವ ಪೋಷಕಾಂಶಗಳನ್ನು ನಾವು ಗಮನಿಸಿ ಹಿತಮಿತವಾಗಿ ಬಳಸಿದರೆ ಖಂಡಿತವಾಗಿಯೂ ನಿರೋಗಿಗಳಾಗಲು ಸಾಧ್ಯ. ನಮ್ಮ ಆಹಾರದಲ್ಲಿ ಬಳಸುವ ತರಕಾರಿ, ಸೊಪ್ಪು, ಕಾಯಿಗಳ ಬಗ್ಗೆ ಅದನ್ನು ಯಾವ ಯಾವ ಸಮಸ್ಯೆಗಳಿಗೆ ಬಳಸ ಬಹುದು ಎನ್ನುವುದರ ಬಗ್ಗೆ ಲೇಖಕಿ ಚೆನ್ನಾಗಿ ಹೇಳಿದ್ದಾರೆ. ಸುಮಾರು ೫೭ ಅಧ್ಯಾಯಗಳು ಈ ಪುಸ್ತಕದಲ್ಲಿವೆ. ಪ್ರತಿಯೊಂದು ತರಕಾರಿಯ ವೈಜ್ಞಾನಿಕ ಹೆಸರು, ಅದರಲ್ಲಿರುವ ಪೋಷಕಾಂಶಗಳು ಹಾಗೂ ಔಷಧೀಯ ಗುಣಗಳ ಬಗ್ಗೆ ವಿವರಿಸಲಾಗಿದೆ. ಪುಸ್ತಕದಲ್ಲಿರುವ ಪುಟಗಳ ಸಂಖ್ಯೆ ೧೦೦.