ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
August 07, 2024
ಗಝಲ್ ೧
ಕತ್ತು ಹಿಸುಕಿ ಕೊಲ್ಲುವವನು ಅರ್ಥವಿರುವ ಗಂಡನೆ
ಬೆತ್ತಲಾಗಿ ನೋಡಿದವನು ಸ್ವಾರ್ಥವಿರುವ ಗಂಡನೆ
ಭೂಮಿಯೀಗ ದುಂಡೊ ತುಂಡೊ ಹಾಗೆ ನೋವ ತಂದೆಯೆ
ಭ್ರಾಂತಿತುಂಬಿ ಪ್ರೀತಿ ಕೊಂದ ಲೋಭವಿರುವ ಗಂಡನೆ
ಅಪ್ಪ ಮದುವೆ ಮಾಡಿ ಬಿಟ್ಟ ಮತ್ತೆಯಿತ್ತ ಸುಳಿಯದೆ
ಉಬ್ಬು ತಗ್ಗು ಎಲ್ಲ ಹೋಗೆ ಶೀತವಿರುವ ಗಂಡನೆ
ಬೆತ್ತ ಹಿಡಿದ ಕೈಗಳಿಂದ ಒಲವು ಬರದು ಎಂದಿಗು
ಕದ್ದು ಬೆಕ್ಕು ಹಾಲು ಕುಡಿಯೆ ಕಾಯುತಿರುವ ಗಂಡನೆ
ಜೀತ ಮುಕ್ತ ಎನುತ ನಡೆದೆ ನೀತಿ ಇರದ ಈಶನೆ
ಚಿತ್ತ ಕಲಕಿ ಹೋದ ಗಳಿಗೆ ಕಾರುತಿರುವ ಗಂಡನೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
August 06, 2024
ಅಯ್ಯೋ ಮೂಢಾ
ಎಲ್ಲ ಪಕ್ಷದ
ನಾಯಕರಿಗೂ
ಸೈಟ್ಗಳ
ಹಂಚಿಕೆ ಮಾಡಿದೆ
ಮೈಸೂರು
ಮೂಡಾ...
ಇದರಲ್ಲಿ
ಜನಸಾಮಾನ್ಯರ
ಒಂದೂ
ಹೆಸರು
ಕೇಳಿ ಬರಲಿಲ್ಲವೋ
ಮೂಢಾ!
***
ರಾಜಾಸ್ಥಾನದಿಂದ ನಾಯಿ ಮಾಂಸ....!
ರಾಜಾಸ್ತಾನದಿಂದ
ನಾಯಿಮಾಂಸ
ಬಂದಿದೆಯಂತೆ!
ಜನ ತಿನ್ನದಂತೆ
ಎಚ್ಚರವಹಿಸಿ
ನಾಯಕರೇ...
ಕುರಿಗಳಂತೆ
ತಲೆ ಬಗ್ಗಿಸಿ
ಹೋಗುತ್ತಿದ್ದವರು-
ನಾಯಿಗಳಂತೆ
ಬೊಗಳಿಯಾರು
ತಡೆಯಿರೇ!
***
ಪಾದಯಾತ್ರೆ
ಎಲೆಕ್ಷನ್
ಮುಗಿಯಿತೀಗ
ಕೊಂಚ ಫ್ರೀ-
ಮುಗಿಯಿತು
ರಾಜಕೀಯ
ಆಡಂಬರದ ಜಾತ್ರೆ...
ದೇಹದ
ಕೊಬ್ಬನಿಳಿಸಲು
ವೈದ್ಯರ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
August 05, 2024
ಗೋವಿಂದ ಹರಿಗೋವಿಂದ ಹರಿಗೋವಿಂದ
ನಿನ್ನ ನಾಮ ಸ್ಮರಣೆಯಿಂದ ಮನಕಾನಂದ
ಹರಿಯೆ ನಿನ್ನ ಕರುಣೆಯಿಂದ ನಮಗಾನಂದ||ಪ||
ಬೇಡಲು ಬಂದಿರುವೆ ಬಾಳಲಿ ನೋವಿಂದ
ಕರುಣದಿ ಪರಿಹರಿಸೊ ಹರಿ ಗೋವಿಂದ
ಮರೆತೆನು ಬದುಕಿನಲಿ ಗೋವಿಂದ ನೆನೆಯದೆಲೆ
ನೀ ಬಂದು ಮನ್ನಿಪುದು ಶ್ರೀ ಗೋವಿಂದ
ಕಷ್ಟದಿ ಸಿಲುಕಿರುವೆ ನಿನ್ನಯ ದಯೆ ಇರಲಿ
ದೂರ ತಳ್ಳಿ ನೋಯಿಸದೆ ಬಾ ಒಲವಿಂದ
ಹರಿಯೆ ನಿನ್ನ ದಯೆಗಾಗಿ ನಾನಿಂದು ಬಂದೆ||
ಮಾನವ ರೂಪಿಂದ ದೇವಕಿ ಉದರದಲಿ
ಧರೆಯೊಳು ಅವತರಿಸಿ ಬಂದೇ ತಂದೆ
ಪುನರಪಿ ನೀನಿಲ್ಲಿ ತಾಳೆಯ ಅವತಾರ
ಲೋಕವು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
August 04, 2024
ಎದೆಯ ಮೇಲೆ ಮಲಗಿ ಕಂದ
ತಂಟೆ ಮಾಡುವೇ
ಅಧರದಲ್ಲಿ ಸುರಿಸಿ ಜೇನು
ಮತ್ತು ಬರಿಸುವೆ
ಒಂದು ಕ್ಷಣವು ಬಿಡದೆ ನೀನು
ನನ್ನ ಕರೆಯುವೆ
ಮನೆಯ ಕೆಲಸ ಮಾಡಲೆಂತು
ಚಿಂತೆ ಮೂಡಿದೆ
ಮನದ ನೋವು ಸರಿಸಿ ಬಿಡುವೆ
ನಗುವ ತರಿಸುವೆ
ನಿನ್ನ ನಗುವು ಸೆಳೆವುದೆನ್ನ
ದೃಷ್ಟಿ ತೆಗೆಯುವೆ
ಆಟ ಸಾಕು ಜಳಕವಾಡೊ
ಸಮಯ ಬಂದಿದೆ
ತೊಟ್ಟಿಲಲ್ಲಿ ಮಲಗು ಬಳಿಕ
ಲಾಲಿ ಹಾಡುವೆ
ಸುಖದ ನಿದ್ರೆ ಬರಲಿ ನಿನಗೆ
ಕೇಳು ಜೋಗುಳ
ಕೆಲಸ ಮುಗಿಸಿ ಬರುವೆ ನಾನು
ಮುಚ್ಚು ಕಣ್ಗಳ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಲೇಖಕರು: ಬರಹಗಾರರ ಬಳಗ
ವಿಧ: ಕವನ
August 03, 2024
ಸಣ್ಣನೆ ನಡುವಿನ ಬೆಡಗಿನ ನಾರಿ
ಬಣ್ಣದ ಛತ್ರಿಯ ಹಿಡಿದಳು ಪೋರಿ
ಕಣ್ಣುಗಳೆರಡು ತಿರುಗುವ ಬುಗುರಿ
ಹುಣ್ಣಿಮೆ ಬೆಳಕಿನ ನಗುವನು ಬೀರಿ
ಬೆಂದಿದೆ ಭೂಮಿಯು ಸುಡುತಿದೆ ಧರಣಿ
ಚಂದದಿ ಬಿಸಿಲನು ಮರೆಸುತ ತರುಣಿ
ಮುಂದಿದೆ ಸಾಲಲಿ ಹಬ್ಬದ ಸರಣಿ
ಬಂದಳು ಉಡುಪನು ಕೊಳ್ಳಲು ರಮಣಿ
ಕೊಂಡಳು ಚಂದದ ಬಣ್ಣದ ಉಡುಪು
ಬಂದಿತು ಬಾಲ್ಯದಿ ಧರಿಸಿದ ನೆನಪು
ತಂದಳು ಮನೆಗದ ತೊಳೆಯುವ ಹುರುಪು
ನೊಂದಳು,ಉಡುಪಲಿ ಉಳಿದುದು ಬಿಳುಪು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
August 02, 2024
ಬಿರುಮಳೆ ಸುರಿದರೆ ನದಿಗಳಿಗೌತಣ
ತುಂಬುತ ಹರಿವವು ಮೈಮರೆತು
ಮಣ್ಣದು ಮಿಶ್ರಿತ ಕೆಂಪಿನ ಜಲವಿದು
ನೋಡಲು ಭಯವನು ತರಿಸಿತ್ತು
ಅಡೆತಡೆ ಇಲ್ಲದೆ ಹರಿವವು ರಭಸದಿ
ಆತುರ ಕಡಲಿನ ಸಂಗಮಕೆ
ಕಲುಷಿತ ನೀರನು ಒಲ್ಲದ ಸಾಗರ
ತಡೆಯನು ನೀಡಿತು ಸಂಭ್ರಮಕೆ
ಕಡಲಿನ ಅಲೆಗಳ ನಿಲ್ಲದ ನರ್ತನ
ದಡವನು ಚುಂಬಿಸೆ ಹೆಬ್ಬಯಕೆ
ಶರಧಿಯ ಅಲೆಗಳ ಬಯಕೆಯ ಕೆಣಕಲು
ಉದ್ಧದ ರಸ್ತೆಯು ತಡೆಯದಕೆ
ಅರ್ಧದ ವರ್ತುಲ ಸಾಲಲಿ ನಿರ್ಮಿಸಿ
ಸೆಳೆಯುತಲಿರುವುದು ಮರವಂತೆ
ಕಡಲಿನ ತೆರೆಗಳ ಅಂದವ ಕಾಣುತ
ನೋಡುಗ ಮೈಮನ ಮರೆವಂತೆ||
-ಪೆರ್ಮುಖ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
August 01, 2024
ಷಟ್ಕರ್ಮ ಪತ್ನೀ/ಪತೀ
ಆಗ-
ಷಟ್ಕರ್ಮಯುಕ್ತಾ ಕುಲಧರ್ಮ ಪತ್ನಿ-
ಕಾರ್ಯೇಷು ದಾಸಿ
ಕರಣೇಶು ಮಂತ್ರಿ
ಭೋಜ್ಯೇಶು ಮಾತಾ
ರೂಪೇಶು ಲಕ್ಷ್ಮೀ
ಶಯನೇಶು ರಂಭಾ
ಕ್ಷಮಯಾಧರಿತ್ರಿ
ಈಗ-
ಷಟ್ಕರ್ಮಯುಕ್ತಾ ಕುಲಧರ್ಮ ಪತೀ-
ಕಾರ್ಯೇಷು ದಾಸ
ಕರಣೇಶು ಮಂತ್ರಿ
ದುಡಿಮೇಶು ಕೃಷಿಕ
ರೂಪೇಶು ಕೃಷ್ಣ
ಶಯನೇಶು ರಸಿಕ
ಕ್ಷಮೆಯೇಶು ಬಾನು
**
ಧೂರ್ತರೇ....
ಸ್ವಚ್ಛ ಆಡಳಿತ
ಮಾಡಿ
ಎಂದು ಜನ
ಶಕ್ತಿ ಕೇಂದ್ರಕೆ
ಆರಿಸಿ
ಕಳಿಸಿದ್ರೇ...
ಹಗರಣಗಳ
ಹಾಲಾಹಲಗಳನೇ
ಸೃಷ್ಟಿಸಿ ಸರ್ಕಾರದ
ಖಜಾನೆ ಲೂಟೀ
ಹೊಡೆಯುತಿರುವಿರಾ
ಧೂರ್ತರೇ!
***…
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 31, 2024
ತಂದೆಯ ಅಗಲಿಕೆ ತಂದಿತು ಸಂಕಟ
ಹರಿಸಿತು ಬಳಗದಿ ಕಣ್ಣೀರಾ
ಉದರದ ಪೋಷಣೆ ತಾಯಿಯ ಹೆಗಲಿಗೆ
ಬಡತನದಲ್ಲಿದೆ ಸಂಸಾರ
ಅನುದಿನ ಮೊಗ್ಗನು ಆರಿಸಿ ತರುವಳು
ಮಲ್ಲಿಗೆ ಮಾಲೆಯ ಹೆಣೆಯುವಳು
ಪಟ್ಟಣಕೊಯ್ಯುತ ಮಾರಲು ಮಾಲೆಯ
ಕಂದನ ಕರದಲಿ ನೀಡುವಳು
ದೇವರ ಪೂಜೆಗೆ, ನಾರಿಯ ತುರುಬಿಗೆ
ಉದಯದಿ ಹೂವನು ಬಯಸುವರು
ಕೊಳ್ಳುವ ಮಂದಿಯು ಬೆಳಗಿನ ವೇಳೆಗೆ
ಉತ್ಸುಕರಾಗಿಯೆ ಕೊಳ್ಳುವರು
ಚಳಿಯಲಿ ಬೆಚ್ಚಗೆ ಹೊದಿಕೆಯ ಒಳಗಡೆ
ನಿದ್ರೆಯಲಿರುತಿರೆ ಎಳೆ ಕಂದ
ಅಮ್ಮನು ಕರೆದಿರೆ ಅರೆಬರೆ ಎಚ್ಚರ
ಹೊರಟನು ತಕ್ಷಣ ಮನೆಯಿಂದ
…
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 30, 2024
ಕಾಗೆ ಕಟ್ಟಿದ ಗೂಡನರಸುತ
ಹಾರಿ ಬಂದಿತು ಕೋಗಿಲೆ
ಕಾಗೆ ಇರಿಸಿದ ಮೊಟ್ಟೆ ಜೊತೆಯಲಿ
ತನ್ನದಿರಿಸಿತು ಆಗಲೆ
ನಡೆಸಿ ಕೋಗಿಲೆ ತಂತ್ರಗಾರಿಕೆ
ಅರಿಯದಾಯಿತು ಕಾಗೆಗೆ
ಕಾವು ಕೊಟ್ಟಿತು ಮರಿಯ ಮಾಡಿತು
ತುತ್ತನಿತ್ತಿತು ಜೊತೆಯಲೆ
ರೆಕ್ಕೆ ಬಲಿಯಲು ಪಿಕದ ಮರಿಗಳು
ಗೂಡು ತೊರೆದವು ಹಾಡುತ
ಕೇಳಿ ಮಂದಿಯ ಹೊಗಳು ನುಡಿಗಳು
ಕಾಗೆ ತ್ಯಾಗವ ಮರೆಯುತ
ಕಾಗೆ ಇಲ್ಲದೆ ಎಲ್ಲಿ ಕೋಗಿಲೆ?
ಪಿಕದ ಮೊಟ್ಟೆಗಳೊಡೆಯದು
ಅದರ ಜನ್ಮಕೆ ಕಾಗೆ ಕಾರಣ
ಹೆಸರು ಮರೆಯಲಿ ಉಳಿದುದು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
July 29, 2024
ಕಟ್ಟಿಹರೆ ಅಣೆಕಟ್ಟು ಆಕಾಶದೊಡಲಲ್ಲಿ
ಬಿಟ್ಟಿಹರೆ ಕೆಲವೊಂದು ತೂಬು ತೆಗೆದು
ಕೆಲವೊಂದು ಜಾಗದಲಿ ಅತಿವೃಷ್ಟಿ ಯಾಗುತಿದೆ
ಸಿಲುಕಿಹರು ಕೆಲಮಂದಿ ಗುಡ್ಡ ಕುಸಿದು
ಭಗವಂತ ಅರಿತಿರುವ ಮಾನವನು ಬಿಡಲಾರ
ಜಲಕಾಗಿ ಅರಸುವನು ಭೂಮಿ ಬಗೆದು
ಬುವಿಯೊಡಲು ಬರಿದಾಗಿ ಕಳೆದಿಹುದ ತುಂಬಿಸಲು
ಭೂಮಾತೆ ಕೇಳಿದಳೆ ಹರಿಯ ನೆನೆದು
ನದಿ ನೀರು ಗಡಿದಾಟಿ ನೆರೆಯಾಗಿ ಪರಿಣಮಿಸಿ
ತೆಗೆಯುತಿದೆ ನೆಲ ಬೆಳೆಯ ಆಪೋಶನ
ಭಗವಂತ ಕನಿಕರಿಸು ಹಿತವಾಗಿ ನೀ ಸುರಿಸು
ತೊಡಕಿರದೆ ನಡೆದಿರಲಿ ಜನಜೀವನ||
-ಪೆರ್ಮುಖ ಸುಬ್ರಹ್ಮಣ್ಯ ಭಟ್…