ಮಲಗು ಮಗುವೇ..

ಮಲಗು ಮಗುವೇ..

ಕವನ

ಎದೆಯ ಮೇಲೆ ಮಲಗಿ ಕಂದ

ತಂಟೆ ಮಾಡುವೇ

ಅಧರದಲ್ಲಿ ಸುರಿಸಿ ಜೇನು

ಮತ್ತು ಬರಿಸುವೆ

 

ಒಂದು ಕ್ಷಣವು ಬಿಡದೆ ನೀನು

ನನ್ನ ಕರೆಯುವೆ

ಮನೆಯ ಕೆಲಸ ಮಾಡಲೆಂತು

ಚಿಂತೆ ಮೂಡಿದೆ

 

ಮನದ ನೋವು ಸರಿಸಿ ಬಿಡುವೆ

ನಗುವ ತರಿಸುವೆ

ನಿನ್ನ ನಗುವು ಸೆಳೆವುದೆನ್ನ

ದೃಷ್ಟಿ ತೆಗೆಯುವೆ

 

ಆಟ ಸಾಕು ಜಳಕವಾಡೊ

ಸಮಯ ಬಂದಿದೆ

ತೊಟ್ಟಿಲಲ್ಲಿ ಮಲಗು ಬಳಿಕ

ಲಾಲಿ ಹಾಡುವೆ

 

ಸುಖದ ನಿದ್ರೆ ಬರಲಿ ನಿನಗೆ

ಕೇಳು ಜೋಗುಳ

ಕೆಲಸ ಮುಗಿಸಿ ಬರುವೆ ನಾನು

ಮುಚ್ಚು ಕಣ್ಗಳ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್