ಒಂದಿಷ್ಟು ಹನಿಗಳು...
ಷಟ್ಕರ್ಮ ಪತ್ನೀ/ಪತೀ
ಆಗ-
ಷಟ್ಕರ್ಮಯುಕ್ತಾ ಕುಲಧರ್ಮ ಪತ್ನಿ-
ಕಾರ್ಯೇಷು ದಾಸಿ
ಕರಣೇಶು ಮಂತ್ರಿ
ಭೋಜ್ಯೇಶು ಮಾತಾ
ರೂಪೇಶು ಲಕ್ಷ್ಮೀ
ಶಯನೇಶು ರಂಭಾ
ಕ್ಷಮಯಾಧರಿತ್ರಿ
ಈಗ-
ಷಟ್ಕರ್ಮಯುಕ್ತಾ ಕುಲಧರ್ಮ ಪತೀ-
ಕಾರ್ಯೇಷು ದಾಸ
ಕರಣೇಶು ಮಂತ್ರಿ
ದುಡಿಮೇಶು ಕೃಷಿಕ
ರೂಪೇಶು ಕೃಷ್ಣ
ಶಯನೇಶು ರಸಿಕ
ಕ್ಷಮೆಯೇಶು ಬಾನು
**
ಧೂರ್ತರೇ....
ಸ್ವಚ್ಛ ಆಡಳಿತ
ಮಾಡಿ
ಎಂದು ಜನ
ಶಕ್ತಿ ಕೇಂದ್ರಕೆ
ಆರಿಸಿ
ಕಳಿಸಿದ್ರೇ...
ಹಗರಣಗಳ
ಹಾಲಾಹಲಗಳನೇ
ಸೃಷ್ಟಿಸಿ ಸರ್ಕಾರದ
ಖಜಾನೆ ಲೂಟೀ
ಹೊಡೆಯುತಿರುವಿರಾ
ಧೂರ್ತರೇ!
***
ಮುಗ್ಧರು
ಮದುವೆ ಮನೆಯಲಿ
ಗಂಡು ಹೆಣ್ಣುಗಳ
ಮಧ್ಯೆ ನಿಂತು
ನಗುತ ಫೋಟೋ
ತೆಗೆಸಿ
ನಲಿಯಿರೋ ಎಂದರೇ...
ಮದುವೆಯಾದ
ಜೋಡಿಗಳೆಲ್ಲದರದ್ದೂ
ಸಪ್ಪೆ ಮೋರೆಯೇ;
ನಗುವವರಿಬ್ಬರು
ಮಾತ್ರ ಆ ಮುಗ್ಧ
ನವ ಜೋಡಿಗಳೇ!
***
ಕೃತಜ್ಞತೆ ಇಲ್ಲದವರು
ಎಲ್ಲರಿಗೂ
ಆರಿಸಿ
ಹೋಗಲು ಬೇಕು
ನಿರ್ಮಲ
ಸುಸುಂದರ
ಕರ್ನಾಟಕ...
ಇದರ
ಋಣ
ತೀರಿಸಲು
ಮಾತ್ರ
ಇಲ್ಲ ಸಲ್ಲದ
ನಾಟಕ!
***
ಮಲತಾಯಿ ಧೋರಣೆ
ಅಯ್ಯೋ
ಆಂಧ್ರಕ್ಕೆ
ಬಿಹಾರಕ್ಕೆ
ಹಣದೊಳೆಯ
ಮಹಾ
ಪೂರಾ...
ಕರ್ನಾಟಕಕೆ
ಭಾರೀ
ಮಳೆಯ
ಬರೀ
ಕೊಚ್ಚೇ
ನೀರಾ?
***
ಏನೀ ಅಸಮಾನತೇ?
ಅಧಿಕಾರಕ್ಕೆ
ಕೂತ
ಮೇಲೆ
ನೀವು
ಭಾರತದ
ಸರ್ಕಾರ...
ತೋರಿರಿ
ಎಲ್ಲಾ
ರಾಜ್ಯಗಳಿಗೂ
ಒಂದೇ
ರೀತಿಯ
ಮಮಕಾರ!
***
ಬಜೆಟ್-24
ಕೇಂದ್ರದಲಿ;
ರಾಜ್ಯದಲಿ-
ಯಾವ
ಸರ್ಕಾರಗಳೇ
ಇರಲಿ
ಗೆಳೆಯಾ...
ಇದು ದುರದೃಷ್ಟ
ಕರ್ನಾಟಕ!
ಎಂದೂ
ಬರೀ ಚೊಂಬೇ
ಎಂಬುದನು
ನೀ ತಿಳಿಯಾ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೇಟ್ ತಾಣ
