ಕನಿಕರಿಸು ಭಗವಂತ
ಕವನ
ಕಟ್ಟಿಹರೆ ಅಣೆಕಟ್ಟು ಆಕಾಶದೊಡಲಲ್ಲಿ
ಬಿಟ್ಟಿಹರೆ ಕೆಲವೊಂದು ತೂಬು ತೆಗೆದು
ಕೆಲವೊಂದು ಜಾಗದಲಿ ಅತಿವೃಷ್ಟಿ ಯಾಗುತಿದೆ
ಸಿಲುಕಿಹರು ಕೆಲಮಂದಿ ಗುಡ್ಡ ಕುಸಿದು
ಭಗವಂತ ಅರಿತಿರುವ ಮಾನವನು ಬಿಡಲಾರ
ಜಲಕಾಗಿ ಅರಸುವನು ಭೂಮಿ ಬಗೆದು
ಬುವಿಯೊಡಲು ಬರಿದಾಗಿ ಕಳೆದಿಹುದ ತುಂಬಿಸಲು
ಭೂಮಾತೆ ಕೇಳಿದಳೆ ಹರಿಯ ನೆನೆದು
ನದಿ ನೀರು ಗಡಿದಾಟಿ ನೆರೆಯಾಗಿ ಪರಿಣಮಿಸಿ
ತೆಗೆಯುತಿದೆ ನೆಲ ಬೆಳೆಯ ಆಪೋಶನ
ಭಗವಂತ ಕನಿಕರಿಸು ಹಿತವಾಗಿ ನೀ ಸುರಿಸು
ತೊಡಕಿರದೆ ನಡೆದಿರಲಿ ಜನಜೀವನ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್