ಕವನಗಳು

ವಿಧ: ಕವನ
December 10, 2023
ಎಲ್ಲಿ ನಾನಿಹೆನೀಗ ಎಂಬ ಅರಿವಿಲ್ಲೆನಗೆ ಇದ್ದ ಜಾಗವೆ ನನಗೆ ನಿನ್ನ ಹೆಗಲು ಬಾಲ್ಯವಿದ್ದಿರಲಾಗ ಮನವು ಬಯಸುತಲಿತ್ತು ಸಗ್ಗ ಎನಿಸುತಲಿತ್ತು ತಾಯ ಮಡಿಲು   ಎಲ್ಲ ಬದಲಿದೆ ಈಗ ಏನು ಮೋಡಿಯೊ ಹುಡುಗ ಮನದೊಳಗೆ ನೀನಿರದ ವೇಳೆಯಿಲ್ಲ ನಿನ್ನೊಳಗೆ ಒಂದಾಗಿ ಬದುಕಿ ಬಾಳುವ ಆಸೆ ಬಯಕೆಯಲೆಗಳ ಮೊರೆತ ಬಿಡದು ನಲ್ಲ   ಮಾತು ಮರೆತಿಹೆ ನಾನು ನಿನ್ನ ಕನಸುಗಳಲ್ಲಿ ನಿನ್ನತ್ತ ಸುತ್ತುತಿದೆ ನನ್ನ ಚಿತ್ತ ಕಣ್ಣು ಮುಚ್ಚಿದರೇನು ತೆರೆದು ನೋಡಿದರೇನು ನಗುಬೀರಿ ನಿಂತಿರುವ ನಿನ್ನ ಚಿತ್ರ -ಪೆರ್ಮುಖ ಸುಬ್ರಹ್ಮಣ್ಯ ಭಟ್ (…
ವಿಧ: ಕವನ
December 09, 2023
ಆತುರ ತುಂಬಿದೆ ಶ್ಯಾಮನ ಕಾಣಲು ಕಾತರವರಿಯನೆ ಶ್ರೀಹರಿಯೂ ಚಾತಕ ಪಕ್ಷಿಯ ತರದಲಿ ಕಾದಿಹೆ ಮಾತಿಗೆ ನಿಲುಕದ ಭಾವನೆಯೂ   ಮುರಳಿಯ ನಾದವು ಕೇಳುತಲಿರುವುದು ಮರೆಯಲಿ ನಿಂತನೆ ಕಾಣಿಸದೆ ಕರುಣೆಯ ಮೂರುತಿ ಮಾಧವಗೀದಿನ ತರುಣಿಯ ಪ್ರೇಮವು ಮರೆತಿಹುದೆ   ಹುಣ್ಣಿಮೆ ಚಂದ್ರನ ಕಾಂತಿಯು ಚೆಲ್ಲಿದೆ ತಣ್ಣನೆ ಗಾಳಿಯು ಬೀಸುತಿದೆ ಕಣ್ಣಿಗೆ ಕಾಣದೆ ಕೇಶವನವಿತಿಹ ಸಣ್ಣನೆ ವೇದನೆ ಕಾಡುತಿದೆ   ಬಾರನೆ ಈದಿನ ಯಮುನೆಯ ತೀರಕೆ ಕಾರಣವರಿಯದೆ ಬೆಂದಿರುವೆ ತೋರುತ ಕರುಣೆಯ ಬೇಗನೆ ಬಾರೆಯ ದಾರಿಯ ಕಾಯುತ ನೊಂದಿರುವೆ||   -…
ವಿಧ: ಕವನ
December 08, 2023
೧. ತರ್ಜುಮೆ ಇನಿಯ ಬರೆದ ಪ್ರೇಮಪತ್ರ ಇಂಗ್ಲೀಷ್ ನಲ್ಲಿ ತರ್ಜುಮೆ ಮಾಡಿಸಲಿ ಯಾರ ಹತ್ರ ೨. ಕಡ್ಡಾಯ ದ್ವಿಚಕ್ರ ವಾಹನದಲ್ಲಿ ಕಡ್ಡಾಯ ಶಿರಸ್ತ್ರಾಣ ತಪ್ಪಿದರೆ ಅನ್ಯರಿಗೆ ಅಡವಿಟ್ಟಂತೆ ನಿನ್ನ ಪ್ರಾಣ ೩. ಫರ್ಮಾನು ತಡೆಯದಿರೆಂದು ನನ್ನಾಕೆಯ ಫರ್ಮಾನು ಇಲ್ಲ ಬಸ್ ತನಕ ಬಂದು ಬೀಳ್ಕೊಡುವೆ ನಾನು ೪. ರಾಜಕೀಯ ಒಂದು ಸಮಾಜಸೇವೆ ರಾಜಕೀಯ ಬದಲಾಗಿದೆ ಈಗ ಸ್ವಹಿತಾಸಕ್ತಿಯೇ ಮೊದಲ ಧ್ಯೇಯ ೫. ಹೆಂಡತಿ ಹೆಂಡತಿ ನಕ್ಕರೆ ಮನೆಯೇ ನಾಕ ಮುನಿದರೆ ಎಲ್ಲಾ ಇದ್ದರೂ ಬರಿಯ ನರಕ ೬. ಬಹುಮಾನ ಬಹುಮಾನ ದೊರೆತು ಹೂವಾಯ್ತು…
ವಿಧ: ಕವನ
December 07, 2023
ಸಫಲತೆಯೊಂದಿಗೆ ಪಯಣವು ಸಾಗಿರೆ ವಿಫಲತೆ ಅವಿತಿಹ ಹಾಗೆ ಚಪಲದಿ ಮನಗಳು ಗೆಲುವಿಗೆ ಕಾದಿರೆ ಅಪಜಯ ಬಂದಿದೆ ಹೀಗೆ   ದಶ ದಿನ ಔತಣ ನೀಡಿದೆ ತಂಡವು ವಿಷಮದ ದಿನದಲಿ ಕೂಡ ಕಸಿವಿಸಿಯೇತಕೆ ಸೋತಿಹ ದಿನದಲಿ ಕುಸಿಯದೆ ಮುಂದಕೆ ನೋಡ   ಒಂದಿನ ಸೋತರೆ ಜರೆಯುವುದೇತಕೆ ಹಿಂದಿನ ವಿಜಯವ ಮರೆತು ಕುಂದದೆ ಸೋಲಿಗೆ ಬೆಂಬಲ ನೀಡುವ ಮುಂದಿನ ಗೆಲುವಿನ ಕುರಿತು   ಕಂಬವು ಬಾಗದೆ ಸುಂಟರಗಾಳಿಯ ಜಂಭದ ದಾಳಿಗೆ ಸೋತು ತುಂಬುವ ಶಕ್ತಿಯ ಸೋತಿಹ ಮನಸಿಗೆ ಬೆಂಬಲ ಗೆಲುವಿಗೆ ಹೇತು||   -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ…
ವಿಧ: ಕವನ
December 06, 2023
ತಾವರೆಯ ವದನದಲಿ ಜೋಡಿ ಕಣ್ಗಳು ಕಮಲ ಸಾವಧಾನದಲಿಂತು ಬಂದೆಯಲ್ಲ ಯಾವ ಯೋಚನೆಯೊಳಗೆ ನೀನಿರುವೆ ನಾನರಿಯೆ ಭಾವಗಳ ಮರೆಮಾಚಿ ನಿಂತೆಯಲ್ಲ   ಯಾರ ಕಾದಿಹೆ ನೀನು ನಲ್ಲ ಬರುತಿಹನೇನು ಮೋರೆಯಲಿ ಕಾತರದ ಎಳೆಯ ಕಂಡೆ ಮೇರೆ ಮೀರಿದ ತುಮುಲ ಮರೆಸಬಲ್ಲುದೆ ಕಮಲ ದಾರಿಯುದ್ದಕೆ ಒಲವ ಹಾಸಿ ನಿಂದೆ   ಕರದಿ ಹಿಡಿದಿಹ ಗುಚ್ಛ ಇನಿಯಗೀಯುವ ಇಚ್ಛೆ ಬರಲವನು ಕಾದಿರುವ ಕುಸುಮಬಾಲೆ ಭರಪೂರ ಪ್ರೇಮದಲಿ ಇನಿಯಗರ್ಪಿಸಿಕೊಳುವೆ ಶರಣೆನುವ ಭಾವವಿದು ಒಲವ ಲೀಲೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ ಚಿತ್ರ ಕೃಪೆ : ಅಂತರ್ಜಾಲ
ವಿಧ: ಕವನ
December 05, 2023
ಕಷ್ಟಕಾಲ ಬಂದಿತೆಂದು ಸುಮ್ಮನೆ ಕೂತರೆ ಆಗುವುದಿಲ್ಲ ನಷ್ಟವಾಯಿತೆಂದು ದುಃಖಿಸಿ ಪ್ರಯೋಜನವೂ ಇಲ್ಲ   ಅಪಕ್ತಾಲದಲ್ಲಿ ಆಗುವನು ನಿನಗೆ ಅಂತವರು ಯಾರು ಇಲ್ಲ ಸುಖವಿದ್ದರೆ ಬರುವರು ನಿನ್ನ ಬೆನ್ನ ಹಿಂದೆ ಓಡೋಡಿ ಬರುವರೆಲ್ಲ   ಕಷ್ಟಗಳಿಗೆ ಎದೆಯೊಡ್ಡಿ ನಿಲ್ಲು ಸುಖವು ದೊರಕುವುದು ದುಡಿಯಲು ಮುನ್ನುಗ್ಗಿ ಹೋಗು ಸಂತಸ ಅಲ್ಲೇ ಕಾಣುವುದು   ನಿನಗಾಗಿ ಇಲ್ಲಿ ಯಾರು ಬರಲು ಇಲ್ಲವೆಂದು ತಿಳಿದುಕೋ ಹಿಂದೆ ಮುಂದೆ ಮಾತನಾಡುವರು ಯಾರಿರುವರು ಅರಿತುಕೋ. -ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ  ಚಿತ್ರ ಕೃಪೆ:…
ವಿಧ: ಕವನ
December 04, 2023
ನೋಡು, ನನಗಿಹರು ಬಂಧುಗಳು --- ಚೆಲುವಾಗೇ ಇಹರವರು ನನಗಿಂದು ಬಡತನ,ಬಾಳಲಾರದ ಸ್ಥಿತಿಯು -- ನೆಲ ಅಸೆಯೇ ಒಡಲು ! ಸೊರಗಿರುವ ಜೀವಕ್ಕೆ , ಚರ್ಮವಂಟಿದೆ -- ನೋವ ನುಂಗಿ ! ಸಾಯಲಾರೆ ದಿಟ, ಒಳ್ಳೆಯ ಮನ ಇರುವವಗೆ -- ಇಲ್ಲಿ ಸಾವಿಲ್ಲ ಕಿರಿಯರಿಗೆ ಬೇಕಾಗಿ, ದುಡಿ ದುಡಿದು ಹಣ್ಣಾದೆ-- ಕೊಳೆತು ಹೋದೆ ಕಿರಿಯರೆಲ್ಲ ಸಿರಿಯ ಕಂಡರು, ನಾನು ದಟ್ಟ ದರಿದ್ರನಾದೆ ! ನನ್ನ ಮಕ್ಕಳು ,ಹಲಸಿನ ಹಪ್ಪಳ ತಿನ್ನುತ್ತಾ ಬೆಳೆದರು ಅವರ ಮಕ್ಕಳು ಮಸಾಲೆದೋಸೆ ತಿಂದು - ಸವಿದು ಬಾಳಿದರು ನನ್ನ ಹಾಡು ಹಾಡಾಗಲಿಲ್ಲ ಅವರ…
ವಿಧ: ಕವನ
December 03, 2023
ಕನ್ನಡ ನಾಡಿನ ಹೆಮ್ಮೆಯ ಪುತ್ರರು ನಾಡಿನ ಸಂಸ್ಕೃತಿ ಸಂಪ್ರದಾಯ ಆಚರಿಸುವರು ಹಲವಾರು ಭಾಷೆ ಮಾತನಾಡುವರು ಕನ್ನಡಮ್ಮನ ದೇವಾಲಯ ಮನದಲ್ಲಿ ಕಟ್ಟಿದವರು   ನಾಡಿನ ಭವ್ಯತೆಯ ಬಗ್ಗೆ ಸಾರಿದವರು ನುಡಿ ಕನ್ನಡ ನಡೆ ಕನ್ನಡವ ಹೊನ್ನುಡಿಗಾರರು ಕನ್ನಡ ತಾಯಿಗೆ ನಮನ ಸಲ್ಲಿಸಿದವರು ಕನ್ನಡ ಬಾವುಟ ಹಾರಿಸಿ ಮೆರೆದ ಚೆನ್ನುಡಿಗಾರರು   ಹೆತ್ತ ತಾಯಿಗಿಂತ ಹೊತ್ತ ನಾಡೆ ಶ್ರೇಷ್ಠವೆಂದರು ತಾಯಿಯ ಮಡಿಲಲ್ಲಿ ತೂಗಿ ನಂದಾದೀಪವಾದರು ಕನ್ನಡಿಗರ ಮನಸಲ್ಲಿ ಹಚ್ಚೆಯಾಕಿಸಿದರು ನಕ್ಷತ್ರಗಳಂತೆ ಮಿನುಗಿ ದೃವತಾರೆಯಾದವರು  …
ವಿಧ: ಕವನ
December 02, 2023
ಜಗಮಂಡಲಕ್ಕೆ ಆಹಾರ ಪೂರೈಸುವ ಸೂರ್ಯನೇ ನಿನಗಾರು ಸಾಟಿ ಬೆಳದಿಂಗಳ ಕಾಂತಿಯ ಬೆಳಗಿಸುವ ಚಂದ್ರನೇ ನಿನಗಾರು ಸಾಟಿ   ಆಕಾಶದಲ್ಲಿ ಮಿಣ ಮಿಣ ಮಿನುಗುವ ನಕ್ಷತ್ರವೇ ನಿನಗಾರು ಸಾಟಿ ಕಪ್ಪು ಮೋಡಗಳಿಂದ ಮಳೆ ಸುರಿಸುವ ವರುಣನೇ ನಿನಗಾರು ಸಾಟಿ   ಮಾನವನಿಗೆ ಉಸಿರು ನೀಡುವ ಮರವೇ ನಿನಗಾರು ಸಾಟಿ ನಿಸರ್ಗದ ಮಡಿಲಲ್ಲಿ ಹರಿಯುವ ನೀರೇ ನಿನಗಾರು ಸಾಟಿ   ಅಮೃತದ ಸುರಪಾನ ಕೊಡುವ ಗೋಮಾತೆ ನಿನಗಾರು ಸಾಟಿ ವೈವಿಧ್ಯಮಯ ಪ್ರಕೃತಿ ಸೃಷ್ಟಿಸಿರುವ ದೇವನೇ ನಿನಗಾರು ಸಾಟಿ   ದೃಷ್ಟಿಯ ನೋಟವು ಕಾಣುವ ಕಂಗಳೇ ನಿನಗಾರು…
ವಿಧ: ಕವನ
December 01, 2023
ಕುರುಬರ ಕುಲದಲಿ ಜನಿಸಿದರಿವರು ಬೀರಪ್ಪ ಬಚ್ಚಮ್ಮ ಉದರದಲಿ ತಿಮ್ಮಪ್ಪ ನಾಯಕ ನಾಮವು ಇವರದು ದಂಡನಾಯಕರಾದವರು   ಸಮರದ ಕಣದಲಿ ಸೋಲನು ಕಾಣುತ ಬದುಕಲಿ ಬಂದಿತು ವೈರಾಗ್ಯ ದೇವರ ಮೇಲಿನ ಭಕ್ತಿಯು ತಂದಿತು ಕೃಷ್ಣನ ಒಲುಮೆಯ ಸೌಭಾಗ್ಯ   ಉಡುಪಿಯ ಕೃಷ್ಣನ ದರ್ಶನ ಪಡೆಯಲು ಬಂದರು ತುಂಬಿದ ಕಾತರದೆ ಜಾತಿಯ ನೆಪದಲಿ ದೇಗುಲದೊಳಗಡೆ ಹೋಗಲು ದೊರೆಯದ ಬೇಸರದೆ   ಹಿತ ಕೂತರು ಕನಕದಾಸರು ಪಠಿಸುತಲಿದ್ದರು ಹರಿನಾಮ ಭಕ್ತಿಗೆ ಮೆಚ್ಚಿದ ಕೇಶವನೊಲಿದನು ತಿರುಗಿಸಿ ತನ್ನಯ ಮೊಗವನ್ನ   ಕನಕದಾಸರ ಹೆಸರದು ಮೆರೆದಿದೆ…