ಕಷ್ಟ ಕಾಲ
ಕವನ
ಕಷ್ಟಕಾಲ ಬಂದಿತೆಂದು ಸುಮ್ಮನೆ
ಕೂತರೆ ಆಗುವುದಿಲ್ಲ
ನಷ್ಟವಾಯಿತೆಂದು ದುಃಖಿಸಿ
ಪ್ರಯೋಜನವೂ ಇಲ್ಲ
ಅಪಕ್ತಾಲದಲ್ಲಿ ಆಗುವನು ನಿನಗೆ
ಅಂತವರು ಯಾರು ಇಲ್ಲ
ಸುಖವಿದ್ದರೆ ಬರುವರು ನಿನ್ನ ಬೆನ್ನ
ಹಿಂದೆ ಓಡೋಡಿ ಬರುವರೆಲ್ಲ
ಕಷ್ಟಗಳಿಗೆ ಎದೆಯೊಡ್ಡಿ ನಿಲ್ಲು
ಸುಖವು ದೊರಕುವುದು
ದುಡಿಯಲು ಮುನ್ನುಗ್ಗಿ ಹೋಗು
ಸಂತಸ ಅಲ್ಲೇ ಕಾಣುವುದು
ನಿನಗಾಗಿ ಇಲ್ಲಿ ಯಾರು ಬರಲು
ಇಲ್ಲವೆಂದು ತಿಳಿದುಕೋ
ಹಿಂದೆ ಮುಂದೆ ಮಾತನಾಡುವರು
ಯಾರಿರುವರು ಅರಿತುಕೋ.
-ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
