ಕವನಗಳು

ವಿಧ: ಕವನ
December 27, 2023
ಜಾತ್ಯಾತೀತರು... ರಾಜಕೀಯ ಸಂಪೂರ್ಣ ಜಾತಿಮಯ... ಓಟು-ಸ್ಥಾನ-ಹುದ್ದೆ-ಹಣ-  ಎಲ್ಲವೂ ಜಾತಿಯೆಂಬ ಸಮುದ್ರ ಮಥನದ ಉತ್ಪನ್ನಗಳೇ...   ಆದರೆ ಗುಡಿಸಿ-ಸಾರಿಸಿ ರಂಗೋಲಿಯನು ಹಾಕುವುದು ಮಾತ್ರ ಜಾತ್ಯಾತೀತವೆಂಬ ರಂಗೋಲಿಯೇ! *** ಪಾರದರ್ಶಕ  ಸಿನಿಮಾ ನಾಟಕಗಳಲಿ ಆದರ್ಶ ಪಾತ್ರಗಳ ಮಾಡಿ ಸೈ  ಎನ್ನಿಸಿಕೊಂಡ ನಟ-ನಟಿಯರು ಬಲು ಆಕರ್ಷಕ...   ನಿಜ ಜೀವನದ ಪಾತ್ರಗಳಲಿ ಸೋಲುತಿರುವುದನು ಕಣ್ಣಾರೆ ಕಾಣುತಿರುವೆವು... ಜೀವನ ಯಾರನ್ನೂ  ಬಿಡದು ಪಾರದರ್ಶಕ! *** ಕನ್ನಡದ ದೌರ್ಭಾಗ್ಯ...  ಓ ಅಪ್ಪಟ ಕನ್ನಡದ …
ವಿಧ: ಕವನ
December 26, 2023
ಇಡೀ ವಿಶ್ವಕೆ ಭಯ ಹುಟ್ಟಿಸಿರುವ ರೋಗವು ಕೊರೊನಾ ಎಂಬ ಮಹಾಮಾರಿಯ ತಲ್ಲನವು ಹೆದರಬೇಡಿ ಹೆದರಿಸಬೇಡಿ ಮನಕುಲವು ಸಾಮಾಜಿಕ ಅಂತರದಿ ಬದುಕೋಣ ನೀವು ನಾವು   ಚೀನಾ ದೇಶದಿಂದ ಬಂದಿದೆ ಕೊರೋನಾ ವೈರಸ್ಸು  ಕದ್ದಿದೆ ಭೂಮಿಯ ಮೇಲೆ ಎಲ್ಲರ ಉಮ್ಮಸ್ಸು ಯಾರ ಬಳಿಯು ಇಲ್ಲ ಲವಲವಿಕೆಯ ತೇಜಸ್ಸು ಚಳಿಗಾಲದಲ್ಲಿ ಮಾತ್ರ ನಡೆಯುತ್ತೆ ಇದರ ಸರ್ಕಸ್ಸು   ಬಳಸಿರಿ ನಿತ್ಯ ನೂತನ ಸ್ಯಾನಿಟೈಸರ್  ಮಾಸ್ಕಗಳಿಂದ ಆಗಲಿ ನಿಮ್ಮ ಮುಖವು ಕವರ್ ಕೊರೋನ ರೋಗಕ್ಕೆ ತೋರಿಸಿ ನಿಮ್ಮ ಪವರ್ ಬಳಸಿರಿ ಪ್ರತಿನಿತ್ಯ ಬೆಳಿಗ್ಗೆ ಬಿಸಿಯ…
ವಿಧ: ಕವನ
December 25, 2023
ಮಾಧವನ ಶಿರದಿ ನಿತ್ಯ ಕಾಣುತ ಮೆರೆಯುವುದು ನವಿಲುಗರಿ ಹೃದಯಕೆ ತಟ್ಟಿ ಮುದ ನೀಡುತ ಕರೆಯುವುದು ನವಿಲುಗರಿ   ಕದವ ತೆರೆಯಲು ಗೋಪಾಲನ ಬಳಿ ಇಟ್ಟು ನೆನೆಯಲಿಲ್ಲವೇ ರಾಧೆಯ ಮನದಿ ಮಿಂಚು ಕೊಡುತ ಕೊರೆಯುವುದು ನವಿಲುಗರಿ   ಇಷ್ಟ ಪಡುವರು ಪುಟಾಣಿ ಮಕ್ಕಳು ಪುಸ್ತಕದಿ ಇರಿಸಲು ನಷ್ಟ ಆಗಲು ಬಿಡದೆಂದು ಅಂಗಡಿಯಲಿ ಬೆರೆಯುವುದು ನವಿಲುಗರಿ   ಮನೆಯಲಿ ಕೂಡಿ ಶನಿ ದೋಷವ ನಿವಾರಿಸುವ ನಂಬಿಕೆ ಮನದಲಿ ತುಂಬಿದ ದುಗುಡ ಸರಿಸಿ ಮರೆಯುವುದು ನವಿಲುಗರಿ   ಗುರುವಿಗೆ ಪ್ರೀತಿಯ ಕಾಣಿಕೆ ತೋರುತ ಚಂದ್ರನು ಅರ್ಪಿಸುವನು…
ವಿಧ: ಕವನ
December 24, 2023
ವಾನರ ದೇವ ವೀರ ಹನುಮನೆ ದೃಢಭಕುತಿಗೆ ಹೆಸರಾದವನೆ/ ಕೇಸರಿ ಅಂಜನಾ ಮಾತೆಯ ಪುತ್ರನೆ ಅದ್ವಿತೀಯ ಮಹಿಮಾತೀತನೆ//   ಪುರುಷೋತ್ತಮನ ಚರಣ ಸೇವಕ ಶಕ್ತಿ ಸಾಮರ್ಥ್ಯ ಬ್ರಹ್ಮಚರ್ಯದ ಪ್ರತೀಕ/ ಹನ್ನೆರಡು ನಾಮಗಳಿಂದ ಮೆರೆವ ಧೀಮಂತ ಸಪ್ತ ಚಿರಂಜೀವಿಗಳಲ್ಲಿ ಸ್ಥಾನಪಡೆದಾತ//   ರಾಮಾಯಣದ ಪರಮ ಧೀರ ಮೇಧಾವಿ ಸಂಜೀವಿನಿಯ ಹೊತ್ತು ತಂದ ಸಾಹಸಿ/ ಇಚ್ಛಾರೂಪಿ ಕುಶಲಮತಿ  ಮಹಾಶಕ್ತಿ ಸುಗ್ರೀವ ಸಖ್ಯಕೆ  ಕಾರಣವಾದ ಭಕ್ತಿ//   ಚೈತ್ರಮಾಸದಿ ಉದಯಿಸಿ ಖ್ಯಾತಿ ಪಡೆದವ  ಹನುಮ ಜಯಂತಿಯ ಶುಭದಿನವು/ ಕೆಂಪು ವಸ್ತ್ರ ಧಾರಣೆ…
ವಿಧ: ಕವನ
December 24, 2023
ಹೊಸತಿದು ಚಪ್ಪಲಿ ತಂದಿಹ ದಿನವೇ ಕಡಿದೇ ಬಿಟ್ಟಿತು ನಾಯಿಮರಿ ಮೌಲ್ಯವ ನೀಡಿದ ಕೈಬಿಸಿ ಆರದೆ ಚಪ್ಪಲಿ ಹರಿದುದು ಹೊಟ್ಟೆಯುರಿ   ಹೊಡೆಯುವೆನೆಂದರೆ ಮನವೇ ಬಾರದು ಮರಿಯದು ಇನ್ನೂ ಬಲುಎಳಸು ಶಿಕ್ಷೆಯ ನೀಡದೆ ಬಿಟ್ಟರೆ ನನ್ನಲಿ ನನಗೇ ಬರುವುದು ಅತಿ ಮುನಿಸು   ಚಪ್ಪಲಿ ಜೋಡಿಯ ಒಂದನು ಕಳೆದರೆ ಏತಕೆ ಬೇಕದು ಮತ್ತೊಂದು? ನಾಯಿಯ ಮುಸುಡಿಗೆ ಬಂಧಿಸಿ ಬಿಟ್ಟೆನು ಕೋಪವು ತಣಿಯಲು ನಾನಿಂದು   ಅರಿತಿದೆ ತಪ್ಪನು ದೈನ್ಯದ ನೋಟವು ಸಾರುತಲಿರುವುದು ಸತ್ಯವನು ಮನಸಿದು ಕರಗಿತು ಕಟ್ಟನು ಬಿಚ್ಚಿದೆ…
ವಿಧ: ಕವನ
December 23, 2023
ಕಹಿಯಾದರೇನು ಗುಣವಿಲ್ಲವೇನು ತಿನಲಾರೆ ಎಂದೂ ನೀ ನುಡಿವೆಯೇನು ಈ ಶಂಕೆ ದೂರಾ ತಳ್ಳಿರಿ||ಪ||   ಬೆಂಡೆ ರುಚಿಯಾದರೇನು ತೊಂಡೆ ಬಳಿ ಇದ್ದರೇನು ಹಾಗಲದ ಗುಣವ ಮರಿಬಾರದಲ್ಲ ದೂರದಿರು ಸಾರವನ್ನು ರುಚಿಯು ಕಹಿಯಾದರೇನು ಖಾದ್ಯ ಹಿತವಾಗದೇನು ಸೇರಿಸಲು ಉಪ್ಪು, ಹುಳಿ,ಮೆಣಸು,ಬೆಲ್ಲ ಆ ತಿನಿಸ ಮರೆವೆಯೇನು? ಔಷಧ ಗುಣವಿದೆ, ಒಮ್ಮೆ ತಿನಬಾರದೇನು||೧||   ಬೀಜ ಎಸೆದಲ್ಲೆ ತಾನು ಮೊಳೆತು ಫಲ ನೀಡದೇನು ಹೆಚ್ಚೇನು ಕಷ್ಟ ಪಡುವಷ್ಟು ಇಲ್ಲ ನೀಡುವುದು ಕಾಯಿಯನ್ನು ಇತರ ತರಕಾರಿಯಂತೇ ಬಳಸೆ ನಿನಗೇಕೆ ಚಿಂತೆ…
ವಿಧ: ಕವನ
December 22, 2023
ಸರ್ ಎಂದರೇ ಶುಭವು ಸರ್ ಎಂದರೇ ಕೀರ್ತಿ ಸರ್ ಎನುತ ಸ್ಪಂದಿಸಿದರೆ ಪ್ರೀತಿ ಒಲವು ಮೇಡಂ ಎಂದರೇ ಖುಷಿಯು ಮೇಡಂ ಎಂದರೇ ನಲಿವು ಮೇಡಂ ಎನುತ ಹೇಳಿದರೆ ಜೀವ ಗೆಲುವು   ಅಣ್ಣಾ ಎಂದರೆ ಬಲವು ಅಣ್ಣಾ ಎಂದರೆ ಸವಿಯು ಅಣ್ಣಾ ಎನುತ ಸಾಗು ಆಶೀರ್ವಾದದ ಜಯವು ಅಕ್ಕಾ ಎಂದರೆ ಮಮತೆ ಅಕ್ಕಾ ಎಂದರೆ ಸಮತೆ ಅಕ್ಕಾ ಎನುತ ಹೇಳು ಭವವೆಂದೂ ಸೋಲವು *** ಗಝಲ್ ನಾನು ಭಿಕಾರಿಯಲ್ಲ ಆದರೂ ತಿರುಗುತ್ತಿದ್ದೇನೆ ನಾನು ಸಂಸಾರಿಯಲ್ಲ ಆದರೂ ತಿರುಗುತ್ತಿದ್ದೇನೆ   ನಾನು ವಿವೇಕಿಯಲ್ಲ ಆದರೂ  ತಿರುಗುತ್ತಿದ್ದೇನೆ ನಾನು…
ವಿಧ: ಕವನ
December 21, 2023
ಅರ್ಧ ಬಿರಿದಿಹುದೇಕೆ ಪೂರ್ತಿ ಅರಳದೆ ಉಳಿದೆ ಲಜ್ಜೆ ಮುಸುಕಿತೆ ಮನದೆ ಏತಕೀ ಬಿಗುಮಾನ ಭಯವು ಕಾಡಿತೆ ನುಡಿಯೆ ಯಾರದಂಜಿಕೆ ನಿನಗೆ ಬೆದರು ನೋಟದಲಿರುವೆ ಏನಿದೀ ಅನುಮಾನ   ರವಿಯು ಬಂದನು ನೋಡು ಅತ್ತ ಮುಖವನು ಮಾಡು ಲಜ್ಜೆ ಭಯವನು ತೊರೆದು ಅರಳಿ ಬಿಡು ನೀ ಪೂರ್ತಿ ನಿನ್ನ ಅಂದವ ಕಂಡು ಮನದೆ ಸಂತಸಗೊಂಡು ತಂದುಕೊಡುವುದು ಎನಗೆ ಕವನ ಬರೆವಾ ಸ್ಪೂರ್ತಿ|| -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
December 20, 2023
ಮುರಳಿಯ ನಾದವ ಕೇಳುತ ಸುಮ್ಮನೆ ಕುಳಿತಿರಲಾರದೆ ಚಡಪಡಿಕೆ|| ಕೊಳಲನು ನುಡಿಸುವ ಶ್ರೀಹರಿ ಮಾಧವ ಅವನೇ ಕಾರಣ ತಳಮಳಕೆ||೧||   ಧರ್ಮವನುಳಿಸಲು ಧರೆಯಲಿ ಉದಿಸಿದ ದನುಜರನಳಿಸಿದ ದನುಜಾರಿ|| ತುರುಗಳ ರಕ್ಷಿಸೆ ಬೆರಳಿನ ತುದಿಯಲಿ ಗಿರಿಯನು ಎತ್ತಿದ ಗಿರಿಧಾರಿ||೨||   ಕೃಷ್ಣನ ಆಲಿಸಿ ತನುವಿರೆ ದೂರದಿ ಮನವಿದು ಸೇರಿದೆ ಕೇಶವನ|| ವೇಣುವ ನಾದದಿ ಜಗವನೆ ಕುಣಿಸುವ ಕರುಣಾಮಯನಾ ಮೋಹನನ||೩||   -ಪೆರ್ಮುಖ ಸುಬ್ರಹ್ಮಣ್ಯ ಭಟ್ ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
December 19, 2023
ಪರಶಿವನ ಆತ್ಮಜನೆ ಷಣ್ಮಖ ಸ್ವಾಮಿಯೇ/ ದುರಿತಗಳ ಪರಿಹರಿಸು ಕಾರ್ತಿಕೇಯನೇ//   ಸುಬ್ರಹ್ಮಣ್ಯದಲಿ ನೆಲೆನಿಂತ ಸುಬ್ಬಪ್ಪನೇ/ ಭಕ್ತರು ನಮಿಪರು ನಿನ್ನಂಘ್ರಿಗೆ ಸ್ಕಂದನೇ//   ದುಷ್ಟ ತಾರಕನ ಅಟ್ಟಹಾಸವ ಮೆಟ್ಟಿದವನೇ/ ಕಷ್ಟಗಳ ನಿವಾರಿಸಿ ಅನವರತ ಪೊರೆಯುವವನೇ//    ಪೂಜೆ ಉಪವಾಸ ವ್ರತ ನೇಮ ನಾಗರಾಜನೇ/ ಹಾಲು ಮೊಸರು ತುಪ್ಪ ಹೂಗಳ ನೈವೇದ್ಯ ಗೊಂಬವನೇ //   ಬ್ರಹ್ಮ ರಥೋತ್ಸವ ಪಲ್ಲಕ್ಕಿ ಮೆರವಣಿಗೆ ವಿಶೇಷನೇ/ ಕರ್ಮಗಳ ನಿವಾರಿಸಿ ಹರಸಿ ಪೊರೆಯುವವನೇ//   ಪಲ್ಲಪೂಜೆ ಬೀದಿ ಮೆರವಣಿಗೆ ವೈಭವ ಗುಹನೇ/…