ಹೀಗೊಂದು ಗಝಲ್

ಹೀಗೊಂದು ಗಝಲ್

ಕವನ

ಮಾಧವನ ಶಿರದಿ ನಿತ್ಯ ಕಾಣುತ

ಮೆರೆಯುವುದು ನವಿಲುಗರಿ

ಹೃದಯಕೆ ತಟ್ಟಿ ಮುದ ನೀಡುತ

ಕರೆಯುವುದು ನವಿಲುಗರಿ

 

ಕದವ ತೆರೆಯಲು ಗೋಪಾಲನ ಬಳಿ

ಇಟ್ಟು ನೆನೆಯಲಿಲ್ಲವೇ

ರಾಧೆಯ ಮನದಿ ಮಿಂಚು ಕೊಡುತ

ಕೊರೆಯುವುದು ನವಿಲುಗರಿ

 

ಇಷ್ಟ ಪಡುವರು ಪುಟಾಣಿ ಮಕ್ಕಳು

ಪುಸ್ತಕದಿ ಇರಿಸಲು

ನಷ್ಟ ಆಗಲು ಬಿಡದೆಂದು ಅಂಗಡಿಯಲಿ

ಬೆರೆಯುವುದು ನವಿಲುಗರಿ

 

ಮನೆಯಲಿ ಕೂಡಿ ಶನಿ ದೋಷವ

ನಿವಾರಿಸುವ ನಂಬಿಕೆ

ಮನದಲಿ ತುಂಬಿದ ದುಗುಡ ಸರಿಸಿ

ಮರೆಯುವುದು ನವಿಲುಗರಿ

 

ಗುರುವಿಗೆ ಪ್ರೀತಿಯ ಕಾಣಿಕೆ ತೋರುತ

ಚಂದ್ರನು ಅರ್ಪಿಸುವನು

ಗುರುಕುಲ ಶಿಕ್ಷಣಕೆ ಉಪಯೋಗ ಆಗುತ

ಬರೆಯುವುದು ನವಿಲುಗರಿ

-ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ 

ಚಿತ್ರ್