ಕಹಿಯಾದರೇನು?
ಕವನ
ಕಹಿಯಾದರೇನು ಗುಣವಿಲ್ಲವೇನು
ತಿನಲಾರೆ ಎಂದೂ ನೀ ನುಡಿವೆಯೇನು
ಈ ಶಂಕೆ ದೂರಾ ತಳ್ಳಿರಿ||ಪ||
ಬೆಂಡೆ ರುಚಿಯಾದರೇನು
ತೊಂಡೆ ಬಳಿ ಇದ್ದರೇನು
ಹಾಗಲದ ಗುಣವ ಮರಿಬಾರದಲ್ಲ ದೂರದಿರು ಸಾರವನ್ನು
ರುಚಿಯು ಕಹಿಯಾದರೇನು
ಖಾದ್ಯ ಹಿತವಾಗದೇನು
ಸೇರಿಸಲು ಉಪ್ಪು, ಹುಳಿ,ಮೆಣಸು,ಬೆಲ್ಲ
ಆ ತಿನಿಸ ಮರೆವೆಯೇನು?
ಔಷಧ ಗುಣವಿದೆ, ಒಮ್ಮೆ ತಿನಬಾರದೇನು||೧||
ಬೀಜ ಎಸೆದಲ್ಲೆ ತಾನು
ಮೊಳೆತು ಫಲ ನೀಡದೇನು
ಹೆಚ್ಚೇನು ಕಷ್ಟ ಪಡುವಷ್ಟು ಇಲ್ಲ ನೀಡುವುದು ಕಾಯಿಯನ್ನು
ಇತರ ತರಕಾರಿಯಂತೇ
ಬಳಸೆ ನಿನಗೇಕೆ ಚಿಂತೆ
ಮಧುಮೇಹವನ್ನು ತಡೆಹಿಡಿಯದೇನು
ಆ ಹಿತವ ತೊರೆವೆಯೇನು
ಅನುದಿನ ಬಳಸಲು ಮತ್ತೆ ಬಿಡಲಾರೆ ನೀನು||೨||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ: ವಾಟ್ಸಾಪ್ ಕೃಪೆ)
ಚಿತ್ರ್
