ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 04, 2024
೧. ಸಾಹಿತ್ಯ
ಚೆಲುವ ಕನ್ನಡದ
ಪದಗಳ ಅಂದವು
ಸಾಹಿತ್ಯ ಮೆರೆಸುವ
ಅಕ್ಷರಗಳ ಮಾಲೆ.
***
೨. ಶಿಲ್ಪಕಲೆ
ವಾಸ್ತುಶಿಲ್ಪ ಮೆರುಗು
ಶಿಲ್ಪಕಲೆ ಸೊಬಗು
ನಯನ ಮನೋಹರ
ದೃಶ್ಯ ಕಾವ್ಯ ಆನಂದ.
***
೩. ಸಂಸ್ಕಾರ
ಸಂಸ್ಕಾರದ ನೆಲೆಯು
ಅರಿತರೆ ಬೆಲೆಯು
ಸೌಹಾರ್ದತ ಸೆಲೆಯು
ವರ್ಣಮಯ ಕಲೆಯು.
***
೪. ಸಂಸ್ಕೃತಿ
ಸಂಸ್ಕೃತಿ ತವರೂರು
ಕಪ್ಪು ಮಣ್ಣಿನ ನಾಡು
ಹಳೇಬೀಡು ಬೇಲೂರು
ಅಂದ ಚಂದದ ಬೀಡು.
***
-ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 03, 2024
ಅಡಿಯಿಟ್ಟು ನಾ ಹೊರಟೆ
ಗುಡಿಯನ್ನು ನೆಪ ಮಾಡಿ
ನಡೆಯುತಿರೆ ಮನವೆಲ್ಲ ನಿನ್ನ ಕಡೆಗೆ
ತಡೆಯಿರದ ಜಾಗದಲಿ
ಕಡೆಗಣ್ಣ ನೋಟದಲಿ
ಹುಡುಕುತಿರೆ ನೀ ಕಂಡೆ ಬಂದೆ ಬಳಿಗೆ
ಅನುಮಾನವೇ ಇಲ್ಲ
ಅನುಸರಿಸಿ ನೀ ಬರುವೆ
ಮನವಿಂದು ನುಡಿದಿತ್ತು ನನ್ನ ಕೂಗಿ
ಮನದೊಳಗೆ ನೀ ಸೇರಿ
ಕನಸಿಗದು ರಹದಾರಿ
ತನುವಲ್ಲಿ ಸಿಹಿ ನಡುಕ ನೋಟ ತಾಗಿ
ಚೈತ್ರದಲಿ ಭೇಟಿಯಲಿ
ಮೈಮನವ ಸೆಳೆದಿರುವೆ
ಧೈರ್ಯದಲಿ ಹಡೆದವರ ಕೇಳಲಿರುವೆ
ಕೈ ಸನ್ನೆ ಏಕಾಗಿ
ಜೈ ಎಂದೆ ಒಲವಿಂಗೆ
ಬೈಯ್ಯದಿರು ನಾನೀಗ ಹೋಗಿ ಬರುವೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 02, 2024
ಉದರದೊಳಗಡೆ ಹೊತ್ತ ಗರ್ಭವು
ಭಾರವೆನಿಸದು ತಾಯಿಗೆ
ಹೆತ್ತು ಮಡಿಲಲಿ ಇರಿಸಿ ಬೆಳೆಸಲು
ಕಷ್ಟವೆನಿಸದು ಮಾತೆಗೆ
ಕಂದ ಬೆಳೆಯುತ ನಡೆಯ ತೊಡಗಲು
ಎತ್ತಲಾಗದು ಸುಲಭದಿ
ಮತ್ತೆ ಕರವನು ಹಿಡಿದು ನಡೆಯಲು
ಜತನ ಗೈವಳು ಮೌನದಿ
ಮಾವು ಹಲಸದು ಫಲವನೀಯಲು
ಮಾಡಿಕೊಂಡಿದೆ ಸಿದ್ಧತೆ
ಕಾಲ ಕಾಲಕೆ ಫಸಲನೀವುದು
ಸಸ್ಯಕಿರುವುದು ಬಧ್ಧತೆ
ಹಲಸು ಮರವಿದು ಮಿಡಿಯ ಬಿಟ್ಟಿದೆ
ಮುಂದೆ ಬೆಳೆಯುವ ಹಂತದೆ
ಕೆಳಗೆ ನೀಡಿತೆ ಕೊಂಬೆಯಾಸರೆ
ಮರದ ಜಾಣ್ಮೆಯು ಇರುವುದೆ?||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 01, 2024
ಕಾಲ ಚಕ್ರವು ಸದಾ ಉರುಳುತಲಿದೆ
ಬೆಳಕ ಪ್ರಭೆ ಎಲ್ಲೆಡೆ ಬೀರುತಲಿದೆ
ನವನವೀನತೆ ಎದ್ದು ಕಾಣುತಲಿದೆ
ಹೊಸ ಹರುಷ ಬುವಿಯ ಪಸರಿಸುತಿದೆ
ಎದ್ದೇಳು ನರನೇ ಆಲಸ್ಯ ತೊರೆದು
ಮುಂಜಾವಿನ ಕೋಳಿ ಕೂಗನು ನೆನೆದು
ದಿನಕರನ ಹಾದಿಯನು ಎಂದೆಂದು ತುಳಿದು
ನರಸತ್ತ ಸತ್ವ ಹೀನತೆಯ ತೊರೆದು
ಪ್ರಕೃತಿ ಮಾತೆಯ ಒಡಲ ಸಿರಿಯಾಗು
ದೀನರಿಗೆ ಚಂದ್ರಮನ ಬೆಳಕಾಗು
ಮನೆಯ ಬೆಳಗುವ ದೀಪವಾಗು
ಕಷ್ಟಗಳ ಮೆಟ್ಟಿ ನಿಲ್ಲುವ ನರನಾಗು
ಜಗದೇಕ ವೀರ ಭರತಮಾತೆಯ ಕುವರ
ನೆಲ ಜಲ ಸಂಪತ್ತು ಯಾವತ್ತು ಅಮರ
ಕಳೆದುದ ನೆನೆಯದೆ ಮುನ್ನುಗ್ಗು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
December 31, 2023
ವೆಂಕಪ್ಪಗೌಡ ಸೀತಮ್ಮ ದಂಪತಿಗಳ ಸುಕುಮಾರ
ಶಿವಮೊಗ್ಗದ ತೀರ್ಥಹಳ್ಳಿಯ ಕುಪ್ಪಳ್ಳಿಯ ಕುವರ
ಸ್ನಾತಕೋತ್ತರ ಓದಿದ ಸಭ್ಯತೆಯ ಧೀಮಂತರು
ಪ್ರಾಧ್ಯಾಪಕ ವೃತ್ತಿಯಲಿ ಬದುಕು ಸವೆಸಿದವರು
ಮಲೆನಾಡಿನ ಸಾಹಿತ್ಯ ಲೋಕದ ಘಮಲ ಪುಷ್ಪ
ಸಮಕಾಲೀನ ಸೃಜನಶೀಲತೆ ವಾಸ್ತವತೆ ಸಾರಿದ ಕೀರ್ತಿ
ವಿಶ್ವಮಾನವತೆಯ ಸಂದೇಶದ ಹರಿಕಾರರು
'ಮನುಜಮತ ವಿಶ್ವಪಥ' ಸಕಲಕಾಲಕೂ ಬೇಕೆಂದರು
ಜಾತಿಮತದ ಕಟ್ಟುಪಾಡುಗಳ ಸರಿಸಿರೆಂದರು
ಬುದ್ಧ ಬಸವರ ಹಾಗೆ ಯೋಚಿಸಿರೆಂದರು
ಹುಟ್ಟುವ ಪ್ರತಿ ಮಗುವಿನಲೂ ಮಾನವತೆಯ ಬಿಂಬಿಸಿರೆಂದರು
ವೈಚಾರಿಕ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
December 31, 2023
ನೀನು ಎಳೆಯ ನನ್ನ ಗೆಳೆಯ
ಬಾರೊ ಜೊತೆಗೆ ಆಡುವೆ
ಬೇರೆ ನನಗೆ ಗೆಳೆಯರಿಲ್ಲ
ನಿನ್ನ ಜೊತೆಗೆ ಕೂಡುವೆ
ಪಾಠದಲ್ಲಿ ಓದಿಕೊಂಡೆ
ಮಂಗನಿಂದ ಮಾನವ
ನೀನು ಮನುಜನಾಗಬಹುದು
ಸ್ವಲ್ಪ ಸಮಯ ಕಾಯುವ
ಬಾಳೆಹಣ್ಣು ತಂದೆ ನೋಡು
ಹಂಚಿ ನಾವು ತಿನ್ನುವ
ಸುಲಿದೆ ನೋಡು ಬೇಗ ಬೇಗ
ಈಗ ಪಾಲು ಮಾಡುವ
ಸುಲಿದ ಹಣ್ಣು ನೋಡಿ ನಿನ್ನ
ಮುಖದಲೆಂಥ ನಗುವಿದೆ
ನಿನ್ನ ನಗುವ ಕಂಡು ನನಗೆ
ಖುಷಿಯ ನಗುವ ತರುತಿದೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
December 30, 2023
ಸರಳಿನ ಪಂಜರ ಬಂಧನದಲ್ಲಿರೆ
ತೊರೆದಿದೆ ಮನವು ಬಯಕೆಗಳ
ಬರುವವರೆಲ್ಲರ ಕಾಣುವೆನನುದಿನ
ಕರುಣೆಯು ಬರದ ಮನಸುಗಳ
ಬರುವರು ಬಹುಜನ ನುಡಿವರು ಬಹುವಿಧ
ಕರೆವರು ಮುನ್ನ ಗಿಣಿರಾಮ
ಪರಿ ಪರಿ ತಿನಿಸನು ನೀಡುವರಾದರು
ಕರೆವುದು ನನ್ನ ಗಿರಿಧಾಮ
ಬೆರೆಯುವ ಮನವಿದೆ ಬಂಧುಗಳೆಲ್ಲರ
ಕರೆವುದು ಕನಸು ನೂರಾರು
ತೆರಳಲು ಕಾಡಿಗೆ ಬಿಡಿಸಲು ಬಂಧನ
ತೆರೆಯಲು ಕದವ ಯಾರಿಹರು
ಮರೆಯುವೆನೆಂದರು ನೆನಪದು ಹೋಗದು
ಮರಳುತ ಮನವ ಕಾಡುವುದು
ಕರುಳಿನ ಕೂಗಿದು ಗುರಿಯನು ಸೇರದೆ
ಚರಿತೆಯ ಪುಟವ ಸೇರುವುದು||
-ಪೆರ್ಮುಖ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
December 29, 2023
ಸುತ್ತ ಮುತ್ತ ಕಾಣದಂತೆ
ಎಂಥ ಹಿಮಪಾತ
ಹೊರಗ್ಬರ್ತೀಯಾ,ಒಳಗೇ ಇರ್ತೀಯಾ
ನೋಡಂತೀಯಾ ಬೇಡ ಅಂತೀಯಾ||ಪ||
ಮಂಜು ಹನಿಯು ಕವಿದು
ದಾರಿ ಮರೆಯಲಿಹುದು
ಚಳಿಗೆ ತನುವು ನಡುಗಿ
ಬೇಡಪ್ಪ ಬೇಡ ಚಳಿಯ ಹೊಡೆತ ತಡೆಯೆ
ಚಳಿಯು ಈತರ ಏಕಿದೆ ನನ್ನನು ಕಾಡಿದೆ
ಎಲ್ಲಿಗೆ ಹೋಗೋಣ
ಮನಸು ಮೆಲ್ಲಗೆ ನನ್ನಲಿ ಹೇಳಿದೆ ಮನೆಕಡೆ
ಈಗ್ಲೇ ಸಾಗೋಣ||೧||
ಕವಿದ ಮಂಜು ನೋಡು
ಮರಳಿ ಬೇಗ ಹೋಗು
ನಿದಿರೆ ಮಾಡು ಮಲಗು
ಸಾಕಪ್ಪ ಸಾಕು ಇಂಥ ಹಿಮದ ನಡುವೆ
ತಡೆಯೆ ಮೈಚಳಿ ಗಾಳಿಯ ಕಚಗುಳಿ ಕಾಡಿದೆ
ಎಂಥ ಚಳಿಗಾಲ
ಮರಳು ತಕ್ಷಣ ಹಿಂದಕೆ,ಹೋಗದೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
December 28, 2023
ತಿನಿಸ ಜೊತೆಗೆ ಕೊಂಚ ಪ್ರೀತಿ
ಇರಲಿ ನನ್ನ ಬಾಳಿಗೆ
ನಿನ್ನ ಮನೆಯ ಕಾಯುತಿರುವ
ಹೊಣೆಯು ನನ್ನ ಪಾಲಿಗೆ
ಕದ್ದು ಹಾಲು ನೆಕ್ಕಿ ಬರುವ
ಬೆಕ್ಕು ಮಮತೆ ಮಡಿಲಲಿ
ಮನೆಯ ಒಳಗೆ ನಾನು ಬರಲು
ಏಕೆ ಕೋಪ ನಿನ್ನಲಿ
ದಿನವು ಪೂರ್ತಿ ಬಂಧಿಸಿಡುವೆ
ಕೊರಳ ಸುತ್ತ ಸರಪಳಿ
ಜತನದಿಂದ ಮನೆಯ ಕಾವ
ಕಾರ್ಯಕಿದುವೆ ಬಳುವಳಿ?
ವೈರಿ ಓಡಿ ನುಸುಳಿಕೊಳಲು
ನನ್ನ ಮನಕೆ ವೇದನೆ
ಕಳ್ಳ ಬರಲು ಹಿಡಿಯಲೆಂತು
ತೋರಲೆಂತು ಸಾಧನೆ
ನಂಬಿಕಸ್ಥ ಪ್ರಾಣಿಯೆಂದು
ನಿತ್ಯ ನನ್ನ ಹೊಗಳುವೆ
ಮತ್ತೆ ಏಕೆ ಬಂಧಿಸಿಡುವೆ
ನಿಜವನೆಂದು ಹೇಳುವೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
December 27, 2023
ಜಾತ್ಯಾತೀತರು...
ರಾಜಕೀಯ ಸಂಪೂರ್ಣ
ಜಾತಿಮಯ...
ಓಟು-ಸ್ಥಾನ-ಹುದ್ದೆ-ಹಣ-
ಎಲ್ಲವೂ ಜಾತಿಯೆಂಬ
ಸಮುದ್ರ ಮಥನದ
ಉತ್ಪನ್ನಗಳೇ...
ಆದರೆ ಗುಡಿಸಿ-ಸಾರಿಸಿ
ರಂಗೋಲಿಯನು
ಹಾಕುವುದು
ಮಾತ್ರ
ಜಾತ್ಯಾತೀತವೆಂಬ
ರಂಗೋಲಿಯೇ!
***
ಪಾರದರ್ಶಕ
ಸಿನಿಮಾ ನಾಟಕಗಳಲಿ
ಆದರ್ಶ ಪಾತ್ರಗಳ
ಮಾಡಿ ಸೈ
ಎನ್ನಿಸಿಕೊಂಡ
ನಟ-ನಟಿಯರು
ಬಲು ಆಕರ್ಷಕ...
ನಿಜ ಜೀವನದ
ಪಾತ್ರಗಳಲಿ
ಸೋಲುತಿರುವುದನು
ಕಣ್ಣಾರೆ ಕಾಣುತಿರುವೆವು...
ಜೀವನ ಯಾರನ್ನೂ
ಬಿಡದು ಪಾರದರ್ಶಕ!
***
ಕನ್ನಡದ ದೌರ್ಭಾಗ್ಯ...
ಓ ಅಪ್ಪಟ
ಕನ್ನಡದ …