ಎಂಥ ಚಳಿಗಾಲ
ಕವನ
ಸುತ್ತ ಮುತ್ತ ಕಾಣದಂತೆ
ಎಂಥ ಹಿಮಪಾತ
ಹೊರಗ್ಬರ್ತೀಯಾ,ಒಳಗೇ ಇರ್ತೀಯಾ
ನೋಡಂತೀಯಾ ಬೇಡ ಅಂತೀಯಾ||ಪ||
ಮಂಜು ಹನಿಯು ಕವಿದು
ದಾರಿ ಮರೆಯಲಿಹುದು
ಚಳಿಗೆ ತನುವು ನಡುಗಿ
ಬೇಡಪ್ಪ ಬೇಡ ಚಳಿಯ ಹೊಡೆತ ತಡೆಯೆ
ಚಳಿಯು ಈತರ ಏಕಿದೆ ನನ್ನನು ಕಾಡಿದೆ
ಎಲ್ಲಿಗೆ ಹೋಗೋಣ
ಮನಸು ಮೆಲ್ಲಗೆ ನನ್ನಲಿ ಹೇಳಿದೆ ಮನೆಕಡೆ
ಈಗ್ಲೇ ಸಾಗೋಣ||೧||
ಕವಿದ ಮಂಜು ನೋಡು
ಮರಳಿ ಬೇಗ ಹೋಗು
ನಿದಿರೆ ಮಾಡು ಮಲಗು
ಸಾಕಪ್ಪ ಸಾಕು ಇಂಥ ಹಿಮದ ನಡುವೆ
ತಡೆಯೆ ಮೈಚಳಿ ಗಾಳಿಯ ಕಚಗುಳಿ ಕಾಡಿದೆ
ಎಂಥ ಚಳಿಗಾಲ
ಮರಳು ತಕ್ಷಣ ಹಿಂದಕೆ,ಹೋಗದೆ ಮುಂದಕೆ
ಇರದೆ ಕ್ಷಣಕಾಲ||೨||
(ಸುಮ್ನೇ ತಮಾಷೆಗೆ)
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್