ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 22, 2024
ಮಹಾವಿಷ್ಣುವಿನ ಸಪ್ತಮಾವತಾರ
ಭೂಮಿಗಿಳಿದ ಭಗವಂತನ ನರಾವತಾರ
ಸರಯೂ ಪುಣ್ಯ ನದಿ ತೀರ
ಸಾಕೇತದ ಪವಿತ್ರ ನೆಲ ಸಾರ//
ದಶರಥಾತ್ಮಜ ಪ್ರಿಯ ನಂದನ
ಕೌಸಲ್ಯಾ ಮಡಿಲ ಕಂದನು
ಚೈತ್ರಶುಕ್ಲ ಮಾಸದಿ ಉದಿಸಿದ
ನವಮಿಯ ಶುಭದಿನದಿ ಜನಿಸಿದ//
ರಾಮನೇ ಮನಸ ಪರಿಶುದ್ಧ ಬೆಳಕು
ಆತ್ಮ ಮನಸುಗಳ ಸಂಯಮದ ಸರಕು
ದುಷ್ಟ ಶಕ್ತಿಗಳ ಸರ್ವನಾಶ
ದೈವೀ ಶಕ್ತಿಗಳ ಉಪಾಸನೆ //
ಶಬರಿಗೆ ಮೋಕ್ಷವ ತಂದ
ಮಾತೆ ಅಹಲ್ಯೆಯ ಪೊರೆದ
ಹನುಮಂತ ಪ್ರೀತ ರಾಜಾರಾಮ
ಶಿಷ್ಟರ ಪರಿಪಾಲಿಸಿದ ಸೋಮ
ಅಯೋಧ್ಯೆಯ ಪುಣ್ಯ ನೆಲದಲಿ
ಪ್ರತಿಷ್ಠಾಪನೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 21, 2024
ನನ್ನ ಕಂಬನಿ ಕಥೆಯ ನಿನ್ನಲಿ
ಹೇಳಲೇನಿದೆ ಮಾತಲಿ
ಸಕಲ ಬಲ್ಲವ,ಅರಿಯಲಾರೆಯ
ಗುಟ್ಟು ಏನಿದೆ ನನ್ನಲಿ
ಇರುಳು ಹಗಲಿನ ತರದಿ ಬಾಳುವೆ
ಕಷ್ಟ ಸುಖಗಳ ಮಿಶ್ರಣ
ಕೆಲವು ಜೀವಕೆ ಸುಖ ಮರೀಚಿಕೆ
ನಿತ್ಯ ಬದುಕಲಿ ತಲ್ಲಣ
ನನ್ನ ವೇದನೆ ಕೇಳ ಬಂದಿಹೆ
ನಿನ್ನ ಕಣ್ಣಲಿ ಕಂಬನಿ
ಅದನು ಕಂಡೆನು ನನ್ನ ಎದೆಯಲಿ
ನಿನ್ನ ನೋವಿನ ಮಾರ್ಧನಿ
ಅರಿತೆ ದೇವನೆ ಕರ್ಮಫಲವಿದು
ತಿದ್ದಲಾಗದು ಬರಹವ
ಕಷ್ಟ ಸಹಿಸುವ ಸಹನೆ ಕರುಣಿಸು
ನೀನು ಜೊತೆಯಿರು ಕೇಶವ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 20, 2024
ರವಿಯು ಪಶ್ಚಿಮದೆಡೆಗೆ ಸಾಗಲು
ಬುವಿಯು ಕತ್ತಲ ಸೆರಗಲಿ
ಇರುಳು ಕಳೆದರೆ ಬೆಳಕು ಬರಲಿದೆ
ಇರದು ಸಂಶಯ ಮನದಲಿ
ಸರಿದ ಸೂರ್ಯನು ಮತ್ತೆ ಬರುವನು
ಇಳೆಯು ಮೆರೆವುದು ಬೆಳಕಲಿ
ಸವೆದ ಬದುಕಿದು ಚರಿತೆಯಾಯಿತು
ಮತ್ತೆ ಬರುವುದೆ ಬಾಳಲಿ
ಒಡಲ ಮಕ್ಕಳ ಮಡಿಲಲಿರಿಸುತ
ಕಳೆದು ಹೋಯಿತು ಯೌವನ
ರೆಕ್ಕೆ ಬಲಿಯಲು ತೊರೆದ ಮಕ್ಕಳು
ಸಾಕು ಎನಿಸಿದೆ ಜೀವನ
ಉದರ ಹಸಿವಿಗೆ ಉಣಲು ಹಿಟ್ಟಿದೆ
ತಿನಲು ಮನವಿದು ಬಾರದೆ
ಮನದ ಹಸಿವಿಗೆ ಪ್ರೀತಿಯಂಬಲಿ
ಕೊಡುವ ಮಂದಿಯ ಕಾಣದೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
(ಚಿತ್ರ ಕೃಪೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 19, 2024
ಉದುರಿದ ಹಸಿರೆಲೆ ಒಣಗಿದೆ ಬಿಸಿಲಲಿ
ಸಾರಿದೆ ನೋವನು ಮೌನದಲಿ
ಮರಗಳ ವೇದನೆ ಅಡಗಿದೆ ಅದರಲಿ
ಬರೆದಿದೆ ಒಣಗಿದ ಎಲೆಯಲ್ಲಿ
ತನ್ನಯ ಪಾಡಿಗೆ ಮೊಳೆತಿಹ ಗಿಡವದು
ಬೆಳೆದಿರೆ ಸುಂದರ ಮರವಾಗಿ
ಬೆಲೆಯನು ಕಟ್ಟುತ ಕೊಳ್ಳಲು ಬಂದರೆ
ನೀಡುವೆ ತಕ್ಷಣ ನೀ ಹೋಗಿ
ಜೀವಿಗೆ ಉಸಿರನು ನೀಡಿದ ವೃಕ್ಷವು
ಉಸಿರನು ನಿಲ್ಲಿಸಿ ಧರೆಶಾಹಿ
ಮಾಡಿದ ನೆರವನು ಮರೆಯುವ ಮಾನವ
ಮನವದು ಧನದಲಿ ವ್ಯಾಮೋಹಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 18, 2024
ದಿನಕರ ದೇವನು ಪಥವ ಬದಲಿಸುವ
ದೀರ್ಘ ರಾತ್ರಿಯು ಸರಿಯುವ ಸಮಯವು
ಮಕರ ರಾಶಿಗೆ ಪ್ರವೇಶವಾಗಿರಲು
ಭಾಸ್ಕರನ ಪೂಜೆಯ ಒಟ್ಟಾಗಿ ಗೈಯಲು//
ಹೆಂಗಳೆಯರ ಸಂತಸ ಮುಗಿಲು ಮುಟ್ಟುತ
ಎಳ್ಳು ಬೆಲ್ಲ ಬೆರೆಸಿ ಹಂಚಿ ಮೆಲ್ಲುತ/
ಒಳ್ಳೊಳ್ಳೆಯ ಮಾತನಾಡಿ ನಲಿಯುತ
ಹಳೆಯ ವೈಷಮ್ಯಸುಟ್ಟು ಬಿಡುತ//
ಅನ್ನದಾತರ ಬೆವರ ಹನಿಗಳ ಸುಗ್ಗಿ ಹಬ್ಬ
ದವಸ ಧಾನ್ಯ ಸೇರಿಸಿ ರಾಶಿ ಪೂಜೆಯ ಕಬ್ಬ/
ರಾಸುಗಳ ಶೃಂಗರಿಸಿ ಪೂಜಿಸಿ ನಲಿಯುತ
ಹಾಲು ಬೆಲ್ಲ ಪೊಂಗಲ್ ಅರ್ಪಿಸುತ//
ಕೆಂಡದ ರಾಶಿಯಲಿ ಹಾಯುವ ಎತ್ತುಗಳು
ಭೋಗಿಯ ಅವಸರದಿ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 17, 2024
ಸಂಕ್ರಾಂತಿ ಮಕರ ಸಂಕ್ರಾಂತಿ ಬಂತು
ನಾಡಿನಗಲಕೆ ಜನರ ಪಾಲಿಗೆ ತಂತು//
ಪಥವ ಬದಲಿಸುತ ಬಂತೇ ಬಂತು
ಭಾಸ್ಕರನ ಹೊಂಗಿರಣ ಪ್ರಭೆಯ ಬೀರಿತು//
ರೈತ ಮಂದಿಯು ಪೈರ ಬೆಳೆಯುತ
ಮನೆಯ ಮುಂದೆ ರಾಶಿ ಹಾಕುತ/
ಸುಗ್ಗಿಯ ಮಾಡುತ ಹಿಗ್ಗಲಿ ಕುಣಿಯುತ
ಹುಗ್ಗಿಯ ಪಾಯಸ ಮಾಡುತ ಸವಿಯುತ//
ರಂಗು ರಂಗಿನ ರಂಗವಲ್ಲಿ ಬಿಡಿಸುತ
ಎಳ್ಳುಬೆಲ್ಲ ಮೆದ್ದು ಒಳ್ಳೆಯ ಮಾತನಾಡುತ/
ಸುಖ ಶಾಂತಿ ಆರೋಗ್ಯ ಬೇಡುತ
ಕಳೆ ಕೊಳೆಗಳ ಹೊರದೂಡಿ ಮೆರೆಯುತ//
ಸಕ್ಕರೆ ಅಚ್ಚು ಕಡಲೆ ಶೇಂಗ ಮೆಲ್ಲುತ
ಸಂಕ್ರಾಂತಿ ಸಂಭ್ರಮ ಆಚರಣೆ ಮಾಡುತ/…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 17, 2024
ಸುರಿದಿಹ ಇಬ್ಬನಿ ಕರಗುತ ಕುಳಿತಿದೆ
ಮಿರ ಮಿರ ಮಿಂಚಿ ಮುತ್ತಂತೆ
ಬೆರಗಿನ ಮನದಲಿ ಕರದಲಿ ಲೇಖನಿ
ಬರೆದನು ಮನದಿ ಬಂದಂತೆ
ಮುತ್ತಿನ ಫಸಲನು ಹೊತ್ತಿಹ ಪೈರಿದು
ಸುತ್ತಲು ಮೊಳೆತು ಹೊಲದಲ್ಲಿ
ಮತ್ತದ ಕಾಣುತ ಚಿತ್ತದಿ ಬಂದುದು
ತುತ್ತಿನ ಬೆಳೆಗೆ ನೆಲೆಯೆಲ್ಲಿ
ಎಣಿಸಲು ಹಂಬಲ ಹಣವನು ಬಯಸುವ
ಗುಣವದು ತುಂಬಿ ಮನದಲ್ಲಿ
ಝಣ ಝಣ ಸದ್ದದು ಮನವನು ಗೆದ್ದಿದೆ
ಕಣ ಕಣ ಬೆರೆತು ರಕ್ತದಲಿ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 16, 2024
ಇಟ್ಟ ಧೃಡತೆಯ ಹೆಜ್ಜೆ
ದಟ್ಟ ಕಾನನ ನಡುವೆ
ಬಿಟ್ಟು ಸಾಗುತಲಿರುವೆ ಭಯದ ನೆರಳು
ಸುಟ್ಟು ಹೋಗದ ಮೋಹ
ಕಟ್ಟಿ ಸೆಳೆದಿರುವಾಗ
ನೆಟ್ಟ ನೋಟದೆ ಹುಡುಕಿ ಕರೆವ ಕೊರಳು
ಭರದಲಿಡುತಿರೆ ಹೆಜ್ಜೆ
ಕರದಿ ಹಿಡಿದಿಹೆ ಲಾಂದ್ರ
ಕರಗಿ ಹೋಗಲಿ ನಿಶೆಯು ಮಂಜಿನಂತೆ
ಅರಸಿ ಪಡೆಯುವ ಮನದೆ
ಮರುಗಲೇತಕೆ ಬರಿದೆ
ದೊರೆಯದುಳಿಯದು ನಿನಗೆ ಬೇಡ ಚಿಂತೆ
ಬೆರಗುಗೊಳಿಸುವ ತರದಿ
ಸೆರಗು ಹಾಸಿದ ಮಂಜು
ಮರೆಗೆ ಸರಿಯಲಿ ಬೇಗ ವಿಧಿಯ ಮುನಿಸು
ಗುರಿಯ ಸೇರುವ ಯೋಗ
ಬರಲಿ ಬಾಳಲಿ ಬೇಗ
ಹರಿಯ ಮನದಲಿ ನೆನೆದು ಹೆಜ್ಜೆಯಿರಿಸು||
-…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 15, 2024
ಕಾಡಿನ ಒಳಗಡೆ ಹುಲ್ಲಿನ ಸೂರಿನ
ಗುಡಿಸಲು ಇರುವುದು ನೋಡಿಲ್ಲಿ
ಬಾಗಿಲು ತೆರೆಯುತ ಬಂದಳು ಸುಂದರಿ
ಅಚ್ಚರಿ ತಂದಳು ನನ್ನಲ್ಲಿ
ನೀಲಿಯ ಲಂಗವ ಧರಿಸಿದ ಯುವತಿಯು
ಧರಿಸಿದ ಕುಪ್ಪಸ ಕೆಂಬಣ್ಣ
ಬೆಳ್ಳನೆ ಬಣ್ಣದ ದಾವಣಿಯಟ್ಟಳು
ಸೆಳೆವುದು ರಸಿಕರ ಮನವನ್ನ
ನೊಸಲಲಿ ಬಿಗಿದಳು ಪದಕದ ಮಾಲೆಯ
ಕಿವಿಯಲಿ ತೂಗವ ಲೋಲಾಕು
ಆಕೆಯ ವೇಷವ ನೋಡುತ ಅನಿಸಿತು
ಕಾಡಿಗೆ ಹೊಂದದ ಪೋಷಾಕು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಶ್ರೀ ಬಸವರಾಜ್ ರವರ ವಾಲ್ ನಿಂದ ಸಂಗ್ರಹಿತ
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 14, 2024
ಅಪ್ಪನು ಹೋದರು ಸ್ನಾನವ ಮಾಡಲು
ನಂತರ ಪೂಜೆಯ ಮಾಡುವರು
ಅಣ್ಣನು ತಂಗಿಯು ಹೂಗಳ ಕೀಳಲು
ಹೂವಿನ ತೋಟಕೆ ನಡೆದಿಹರು
ಘಮ್ಮನೆ ಪರಿಮಳ ಬೀರುವ ಹೂಗಳು
ಮಲ್ಲಿಗೆ ಸಂಪಿಗೆ ಹೂವುಗಳ
ತುಳಸಿಯ ದಳಗಳ ಕಿತ್ತಿಹ ಸಂತಸ
ತುಂಬಿದೆ ಈ ಎಳೆ ಮನಸುಗಳ
ಕಿತ್ತಿಹ ಹೂಗಳ ಬುಟ್ಟಿಯಲಿರಿಸುತ
ನಡೆದರು ಮನೆಕಡೆ ಜೊತೆ ಸೇರಿ
ಬುಟ್ಟಿಯ ಹಿಡಿಯಲು ತನ್ನಲಿ ನೀಡಲು
ಕೇಳಿದ ತಂಗಿಯು ಹಟಮಾರಿ
ಎಡವಿದ ತಂಗಿಯ ಬುಟ್ಟಿಯ ಒಳಗಿನ
ಹೂಗಳು ಬಿದ್ದಿತು ಮಣ್ಣಿನಲಿ
ತಂಗಿಯ ನೋವನು ಅರಿತಿಹ ಅಣ್ಣನು
ಅಳದಿರು ಎಂದನು ಪ್ರೀತಿಯಲಿ||
-…