ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 30, 2024
ದೇಶಕಾಗಿ ಜನರಿಗಾಗಿ
ಅಭಿಮಾನದ ಸೊಗಡಿಗಾಗಿ
ರಕ್ತ ಹರಿಸಿ ತಂದರಂದು
ಸ್ವಾತಂತ್ರ್ಯವ ನಾಡಿಗಂದು
ಸತ್ಯ ಧರ್ಮ ತ್ಯಾಗದಲ್ಲಿ
ಮುನ್ನಡೆದ ಮಹಾತ್ಮನಿಗೆ
ಗುಂಡನೇಟ ಕೊಡುತಲಂದು
ಪ್ರಾಣ ಹರಣ ಮಾಡಿದ ಬಗೆ
ಜೀತದೊಳಗೆ ನಡೆದ ಜನರ
ಜಾತಿಯೆನುತ ಸಾಗಿಹರ
ಬನ್ನಿರೆನುತ ಕೈಯ ಹಿಡಿದು
ಒಂದೆಯೆನಿಸಿ ಹುತಾತ್ಮನಾದ
ವೀರಯೋಧ ಗಡಿಗಳಲ್ಲಿ
ಹಗಲು ಇರುಳು ಚಳಿಯಲ್ಲಿ
ನೊಂದು ಬೆಂದು ನಡುಗುತಲ್ಲಿ
ರಕ್ಷಣೆಯ ಮಾಡುತಲ್ಲಿ
ದೇಶಕಾಗಿ ಜೀವತೆತ್ತ
ಸೈನಿಕರ ನೆನೆಯುತಿಲ್ಲಿ
ಪ್ರಾರ್ಥನೆಯ ಸಲಿಸುತ
ಬೇಡುವೆವು ದೇವನಲ್ಲಿ
…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 29, 2024
ಮಧುರ ಎನ್ನುವ ಪದಗಳೆ
ಹೀಗೆ , ಹೇಗೆಂದರೆ ? ಚಿರ ಯೌವನವೆ !
ಕತ್ತಲು ಕಳೆದು ಬೆಳಕಾದಂತೆ
ಬೆಟ್ಟದಿಂದ ಕಾಲು ಜಾರದೆ
ಕೆಳಗಿಳಿದು ಬಂದಂತೆ !!
ಪ್ರೀತಿ ಪ್ರೇಮ ಪ್ರಣಯದೆಡೆಗೆ ಸಲುಗೆ
ಅವಿಲಿಗೆ ಹಾಕುವ ತರಕಾರಿಗಳಿದ್ದಂತೆ !
ಜೊತೆಗೆ ಸೇರಿದರೆ ಸಾಲದು, ಹೀಗೆಯೇ
ಉಪ್ಪು ಕಾರ ಹುಳಿ ಸೇರಿದಂತೆ
ಮನಸು ಹೃದಯ ಸೇರಬೇಕು ಹಾಗೆಯೆ !!
ಹಾಲು ಜೇನಿನಂತೆ ಸೇರಿದರೆ ಬದುಕು ಬಂಗಾರವೆ ?
ಜೊತೆ ಸೇರಿ ನಡೆದರೆ ಬೃಂದಾವನವೆ !
ಉಪ್ಪರಿಗೆಯ ಕನಸು ಒಲವಿನಲಿ ಬಂದರೆ ;
ಬೀದಿಯ ಬದುಕಿಗೆ ಸಾಗುವುದು ದಿಟವೆ ?
ತಿಳಿದು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 28, 2024
ಉದಯದಲಿ ಚರವಾಣಿ ರಿಂಗಣಿಸಿ ಎಡೆಬಿಡದೆ
ಮೊದಲದನು ಹಿಡಿದಿದ್ದೆ ಗುಂಡಿಯೊತ್ತಿ
ತೊದಲುತ್ತ ನುಡಿದಿದ್ದ ಹಲವಾರು ವಿಷಯಗಳ
ಮೊದಲಾಯ್ತು ಮಾತುಗಳು ಸುತ್ತಿಬಳಸಿ
ಚೊಕ್ಕದಿಹ ರಂಗದಲಿ ಸನ್ಮಾನ ಮಾಡಿಸುವೆ
ಕಿಕ್ಕಿರಿದು ಜನ ನಿಂತು ನೋಡುವಂತೆ
ರೊಕ್ಕವನು ಒಂದಿಷ್ಟು ತಳ್ಳಿಬಿಡಿ ನನ್ನೆಡೆಗೆ
ಮಿಕ್ಕ ಹೊಣೆ ನನಗಿರಲಿ ಬೇಡ ಚಿಂತೆ
ಚಾಡಿ ಹೇಳುವರುಂಟು ನಮ್ಮ ದೂಷಣೆ ಗೈದು
ಬೇಡ ನಮ್ಮಲ್ಲಿ ನಿಮಗೆ ಅನುಮಾನ
ನೋಡುತಿರಿ ನಿಮಗಲ್ಲಿ ವೈಭವದ ಸನ್ಮಾನ
ಮಾಡಿಸುವೆ ರಂಗದಲಿ ನಿಮ್ಮ ಗುಣಗಾನ
ಕಳಿಸಿಬಿಡಿ ನಿಮ್ಮೆಲ್ಲ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 27, 2024
ಕಾದುಕುಳಿತಿದೆ ಚಂದದಾಸನ
ಯಾರು ಬರುವರೊ ಕೂರಲು
ಬಹಳ ಮಂದಿಗೆ ಮನದಲಾಸೆಯು
ಒಮ್ಮೆ ಆಸನ ಏರಲು
ಮೆತ್ತ ಮೆತ್ತನೆ ವಸ್ತ್ರ ಹಾಸಿದೆ
ಅಡಿಯಲಿರುವುದ ಮುಚ್ಚಲು
ಅದನು ಸರಿಸುತ ಏರಬೇಕಿದೆ
ತಳದಲೇನಿದೆ ಅರಿಯಲು
ಕೆಳಗೆ ಭೀಕರ ಮುಳ್ಳು ಹಾಸಿಗೆ
ಮಾಡು ಮೊದಲಿಗೆ ಯೋಚನೆ
ಮುಳ್ಳು ಚುಚ್ಚದ ಹಾಗೆ ಕೂರಲು
ನಿನ್ನಲೇನಿದೆ ಯೋಜನೆ
ನಾಡನಾಳಲು ಇರುವ ಆಸನ
ಕಾಣಲಂದವು ಹೊರಗಡೆ
ಜತನದಿಂದಲೆ ಕೂರಬೇಕಿದೆ
ಕಳೆದು ಸುತ್ತಲ ಅಡೆತಡೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 26, 2024
"ಇಲ್ಲ... ದೇವರಿಲ್ಲ, ಆ ದೇವಾಲಯದಲಿ ದೇವರಿಲ್ಲ ಇನ್ನು"
ಎಂದನೊಬ್ಬ ಸಂತನು.
ಆ ಮಾತ ಕೇಳಿದ ಅರಸ ಸಿಟ್ಟಾದನು,
"ನೀನು ನಾಸ್ತಿಕನೇನು?
ಅದಕೆ ಹೀಗೆ ಒರಲುತಿರುವೆಯೇನು?
ಅನರ್ಘ್ಯ ರತ್ನಗಳಿಂದ,
ಸ್ವರ್ಣಖಚಿತ ವಿಗ್ರಹದಿಂದ
ಭವ್ಯ ದೇವುಳವ ಕಟ್ಟಿಸಿಹೆನು.
ಆದರೂ ಇದನು ಶೂನ್ಯ ಎನ್ನಬಹುದೇನು?"
ಸಂತನಾಗಲೇ ನುಡಿದನು,
"ಶೂನ್ಯವಲ್ಲ, ಅದು ಅರಸನ ಅಹಮ್ಮಿನ ಮೊಟ್ಟೆ,
ಅದರೊಳಗೆ ದೇವರೆಂದು ನಿನ್ನ ವಿಗ್ರಹವೇ ಇಟ್ಟೆ
ಜನರ ಎದೆಯ ಒಳಗಿನ ದೇವನನು ಅಲ್ಲಿಂದ ಓಡಿಸಿಬಿಟ್ಟೆ"
ಸಿಂಡರಿಸಿ ಸಿಟ್ಟಲ್ಲಿ ಅರಸ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 26, 2024
ಯಾರ ಗೆಜ್ಜೆಯ ದನಿಯ ಸಪ್ಪಳ
ನನ್ನನಿಲ್ಲಿಗೆ ಕರೆಸಿತೊ
ಯಾವ ಪ್ರೀತಿಯ ಸ್ವರದ ಕರೆಗೆ
ಹೃದಯ ಒಲುಮೆಯ ಕಂಡಿತೊ
ಹೊತ್ತು ಕಂತಿರೆ ಚಂದ್ರ ನಗುತಿರೆ
ನಿನ್ನ ನೆನಪದು ಮೂಡಿತೊ
ಎಲ್ಲೊ ಮರೆಯಲಿ ಕುಳಿತು ಕಾಡಿರೆ
ನನ್ನ ಮೈಮನ ಸೋತಿತೊ
ಮಧುರ ಧ್ವನಿಯದು ರಾಗ ಹೊಮ್ಮಿಸೆ
ದೇಹ ಮಿರ ಮಿರ ಮಿಂಚಿತೊ
ಮೋಹ ತುಂಬಿದ ಒಡಲು ಕುಣಿಯಲು
ತನುವು ಮನ್ಮಥನಾಯಿತು
ಬಾರೆ ಕೋಮಲೆ ನನ್ನ ಶ್ಯಾಮಲೆ
ಮನವು ತಡೆಯದೆ ಕೇಳಿತು
ಕೈಯ ಹಿಡಿಯೆ ಎದುರು ಬಾರೆ
ಮೈಯ ಕಣಕಣ ಬೇಡಿತು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 25, 2024
ಗಿಳಿಗಳ ಹಿಂಡಿದು ಸಭೆಯನು ಸೇರಿದೆ
ಒಣಗಿದ ವೃಕ್ಷದ ಕೊಂಬೆಯಲಿ
ಬಳಗದ ಹಿತವನು ಕಾಯುವ ಚಿಂತನೆ
ಬಿಸಿ ಬಿಸಿ ಚರ್ಚೆಯು ನಡುವಿನಲಿ
ಬತ್ತಿದೆ ಕೆರೆ ತೊರೆ,ನೀರಿನ ಕ್ಷಾಮವು
ಕಾಡಿದೆ ನಾಡನು ಬರಗಾಲ
ಬಾನಲಿ ಮೋಡವು ಮಳೆಯನು ಸುರಿಸದೆ
ಮುಗಿದಿದೆ ಈ ಸಲ ಮಳೆಗಾಲ
ಯಾವುದೊ ಗಿಳಿಮರಿ ಧುಮುಕಿತು ನಡುವಲಿ
ಕೂಗಿತು ಘೋಷಣೆ ಎಡೆಬಿಡದೆ
ಹೊಗೆಯನು ಹೋಲುವ ಅನಿಲವ ಸೂಸಿತು
ಹೇಗದು ಬಂದಿತು ಅರಿಯದಿದೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 24, 2024
ಯುವಕರಿಗೆ ಆದರ್ಶಪ್ರಾಯರಾದವರು
ಬತ್ತದ ತೊರೆಯಂತೆ ಝರಿಯಾಗಿ ಹರಿದವರು//
ಭಾರತ ದೇಶದ ಅಪ್ರತಿಮ ಸಾಹಸಿಗರು
ಸೂಕ್ಷ್ಮಮತಿ ಸದ್ಗುಣ ಸಂಪನ್ನರಿವರು//
ಸೈನಿಕ ಶಕ್ತಿಯ ಹುಟ್ಟು ಹಾಕಿದರು
ಸಂಘಟಕ ಶಕ್ತಿಯ ದಂಡ ನಾಯಕರು/
ಗುರಿಯೇ ಸಾಧನೆ ಹೋರಾಡಿ ಎಂದರು
ಶೌರ್ಯ ಸಾಹಸದಿ ಮೆರೆದ ರು//
ಸ್ವಾಮಿ ವಿವೇಕಾನಂದರೇ ಆದರ್ಶ ನಿಮಗೆ
ಆಂಗ್ಲರ ವಿರುದ್ಧ ಸೆಣಸಾಡಿ ಕೊನೆವರೆಗೆ/
ಪಾರತಂತ್ರ್ಯವದು ಚುಚ್ಚುತಿಹ ಮುಳ್ಳು
ಜೀವವದು ಮುಡಿಪು ಗೆಲುವು ಸಾಧಿಸಲು //
ಸೆರೆವಾಸ ಗೃಹಬಂಧನ ಕಷ್ಟ ಉಂಡರು
ತ್ವರಿತಕ್ರಾಂತಿ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 23, 2024
ದೇವ ರಘಪತಿ ರಾಮಚಂದ್ರನೆ
ನೋವು ಕಳೆಯಿತು ಕಂಡು ನಿನ್ನನು
ಭಾವವುಕ್ಕಿದೆ ತಾಳಲಾರದೆ ಬಂದ ಕಣ್ಣೀರು
ಕಾವ ದೇವನೆ ನಿನ್ನ ಜನ್ಮದ
ತಾವಲೀದಿನ ಕಾಣಲೆನ್ನುತ
ಜಾವದಲ್ಲಿಯೆ ಬಂದು ಕುಳಿತೆನು ಬಿಗಿದು ನನ್ನುಸಿರು
ಕನ್ನ ಕೊರೆಯಲು ಬಂದರನ್ಯರು
ತನ್ನದಲ್ಲದ ಜಾಗ ಹಿಡಿದರು
ನಿನ್ನ ಮಂದಿರ ಕೆಡವಿ ಬಿಟ್ಟರು ತುಚ್ಛ ಮನಸಿನೊಳು
ಎನ್ನ ಮನದಲಿ ಸತತ ಸಂಕಟ
ಚೆನ್ನ ರಾಮಗೆ ಸಿಗದೆ ದೇಗುಲ
ನಿನ್ನ ಮಂದಿರ ಮರಳಿ ಕಟ್ಟಲು ಬಂದ ತೊಡಕುಗಳು
ದೂಡಲೆಂತದು ಮನದ ದುಗುಡವ
ಬಾಡಿ ಮುದುಡಿದ ಮನದಲಿದ್ದೆನು
ಮಾಡಲೇನನು ಮಾಡಿ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 23, 2024
ಶ್ರೀರಾಮ ಜಯರಾಮ ಜಯಜಯ ರಾಮ
ರಘುಕುಲೋತ್ತಮ ಸೀತಾರಾಮ
ಕೌಸಲ್ಯಾನಂದನ ರಾಜಾರಾಮ
ಅನುಜ ಲಕ್ಷ್ಮಣನ ಪ್ರೀತಿಯ ರಾಮ
ಅಯೋಧ್ಯೆಯ ಕುಲತಿಲಕ ರಾಮ
ಶರಣ ವಿಭೀಷಣನ ಹರಸಿದ ರಾಮ
ವೀರ ಹನುಮನು ಭಜಿಸಿದ ರಾಮ
ಭಕ್ತರ ಹೃದಯದ ಆನಂದ ರಾಮ
ರಕ್ಕಸರ ಹುಟ್ಟಡಗಿಸಿದ ಧೀರಕಲಿ ರಾಮ
ದುರುಳೆ ಶೂರ್ಪನಕಿಗೆ ಬುದ್ಧಿಕಲಿಸಿದ ರಾಮ
ತಾಟಕಿಯ ಸಂಹರಿಸಿ ಕ್ಷೇಮ ನೀಡಿದ ರಾಮ
ಮುನಿಜನ ವಂದಿತ ಮಹಾಮಹಿಮ ರಾಮ
ಸಾಗರಕೆ ಸೇತುವೆ ನಿರ್ಮಿಸಿದ ರಾಮ
ಕಪಿಗಡಣ ಸಹಕಾರ ಪುಣ್ಯವದು ರಾಮ
ಸುಗ್ರೀವನ ಸಖ್ಯ ಬೆಳೆಸಿದ ರಾಮ
ಕಪಿವೀರ ವಾಲಿಗೆ…