ಹುತಾತ್ಮರ ದಿನ
ಕವನ
ದೇಶಕಾಗಿ ಜನರಿಗಾಗಿ
ಅಭಿಮಾನದ ಸೊಗಡಿಗಾಗಿ
ರಕ್ತ ಹರಿಸಿ ತಂದರಂದು
ಸ್ವಾತಂತ್ರ್ಯವ ನಾಡಿಗಂದು
ಸತ್ಯ ಧರ್ಮ ತ್ಯಾಗದಲ್ಲಿ
ಮುನ್ನಡೆದ ಮಹಾತ್ಮನಿಗೆ
ಗುಂಡನೇಟ ಕೊಡುತಲಂದು
ಪ್ರಾಣ ಹರಣ ಮಾಡಿದ ಬಗೆ
ಜೀತದೊಳಗೆ ನಡೆದ ಜನರ
ಜಾತಿಯೆನುತ ಸಾಗಿಹರ
ಬನ್ನಿರೆನುತ ಕೈಯ ಹಿಡಿದು
ಒಂದೆಯೆನಿಸಿ ಹುತಾತ್ಮನಾದ
ವೀರಯೋಧ ಗಡಿಗಳಲ್ಲಿ
ಹಗಲು ಇರುಳು ಚಳಿಯಲ್ಲಿ
ನೊಂದು ಬೆಂದು ನಡುಗುತಲ್ಲಿ
ರಕ್ಷಣೆಯ ಮಾಡುತಲ್ಲಿ
ದೇಶಕಾಗಿ ಜೀವತೆತ್ತ
ಸೈನಿಕರ ನೆನೆಯುತಿಲ್ಲಿ
ಪ್ರಾರ್ಥನೆಯ ಸಲಿಸುತ
ಬೇಡುವೆವು ದೇವನಲ್ಲಿ
ದೇಶದಗಲ ನಡೆದ ಸಂತ
ನಮ್ಮೆಲ್ಲರ ರಾಷ್ಟ್ರಪಿತ
ಕರಮಚಂದ ಗಾಂಧಿಯವರು
ನಮ್ಮನಗಲಿ ಹೋದ ದಿನ
ಅವರ ಸ್ಮರಣೆ ಮಾಡುವ
ದಿನ ನಿತ್ಯವೂ ನಮಿಸುವ
ಅವರ ನುಡಿಯ ನಡೆಸುವ
ಹುತಾತ್ಮರ ದಿನವ ಆಚರಿಸುವ
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
