ಕವನಗಳು

ವಿಧ: ಕವನ
February 16, 2024
ಅರಸಿನ ಪುಡಿಯನು ಬೆರೆಸುತ ಜಲದಲಿ ಕರದಲಿ ಉಂಡೆಯ ಮಾಡಿದರೆ? ತರುವಿನ ಕೊಂಬೆಗೆ ಮಾಡಿದ ಉಂಡೆಯ ಸರದಿಯಲಂಟಿಸಿ ಇಟ್ಟಿಹರೇ?   ಬೆಟ್ಟದ ತುದಿಯಲಿ ಎತ್ತರ ಜಾಗದಿ ಹುಟ್ಟಿದೆ ಗಿಡವಿದು ಚಂದದಲಿ ಕೊಟ್ಟವರಾರದು ಬದುಕಲು ಜಲವನು ಕಟ್ಟೆಯ ಕಟ್ಟಿದರಾರಲ್ಲಿ   ಏಣಿಯ ತರದಲಿ ಚಿಗುರಿದೆ ಎಲೆಗಳು ಕಾಣಲು ಸುಂದರ ಎನಿಸುತಿದೆ ಗೋಣನು ಗಗನಕೆ ಚಾಚಿದೆ ಗಿಡವಿದು ಭಾನುವ ಕಿರಣದ ಆತುರದೆ   ಸ್ವಚ್ಛದ ಗುಡ್ಡಕೆ ಶೋಭೆಯ ತಂದಿದೆ ಹಚ್ಚನೆ ಹಸುರಿನ ಪುಟ್ಟ ಮರ ಪಚ್ಚೆಯ ಬಣ್ಣದ ಉದ್ದದ ಕಡ್ಡಿಯು ಮೆಚ್ಚುಗೆ ಗಳಿಸಿದೆ ‌ನೋಡುಗರ…
ವಿಧ: ಕವನ
February 15, 2024
ಗಝಲ್-೧ ಯಾರು ನೋಡ ಬಾರದೆಂದು ಬಿರಿದು ಬಂದೆನು ನೋವು ಕೊಟ್ಟ ಕೂಳರನ್ನು ಹುರಿದು ಬಂದೆನು   ಸಾವಿನಲ್ಲು ಸುಖವ ಪಡೆವ ಜನರು ಏತಕೊ ಭಾವನೆಗಳ ಕೊಂದ ಇವರ ಜರಿದು ಬಂದೆನು   ದ್ವೇಷ ಇರುವ ಕಡೆಯಲೆಲ್ಲ ವಿಜಯ ಎಲ್ಲಿದೆ ನಿನ್ನ ಮಾಯೆ ಮೋಹಕಿಂದು  ಉರಿದು ಬಂದೆನು   ಕರುಣೆ ಎನುವ ಪದವು ಈಗ ಸೊರಗಿ ನಿಂತಿದೆ ಮನಸಿನಿಂದ ಮದವ ಹೀಗೆ ತರಿದು ಬಂದೆನು   ಮೌನ ಇರಲು ಮಾತು ನೆಗೆದು ಬಂತೆ ಈಶನೆ ಕೆಸರ ಕೈಲಿ ಮಾಲೆ ಕಂಡು ಮುರಿದು ಬಂದೆನು *** ಗಝಲ್-೨ ಮನದ ಕಿಟಿಕಿಯದು ಮುಚ್ಚಿಹುದು ಗೆಳೆಯ ತನುವ ಬಾಗಿಲೊಳು…
ವಿಧ: ಕವನ
February 14, 2024
ಬಿರಿದಿಹ ತಾವರೆಯಂದದ ಮೊಗವು ಅರಳಿದೆ ಮೊಗದಲಿ ಸುಂದರ ನಗುವು ಹುಬ್ಬಲಿ ಕುಳಿತಿದೆ ಕಾಮನ ಬಿಲ್ಲು ಗಲ್ಲವ ಸವರುವ ಆ ಮುಂಗುರುಳು||   ಹೆಣೆದಿಹ ತುರುಬಲಿ ಮಲ್ಲಿಗೆ ಹೂವು ಸುತ್ತಲು ಹರಡಿದೆ ಮಲ್ಲೆಯ ಘಮವು ಮುತ್ತಿನ ಸರವನು ಹೊತ್ತಿಹ ಕೊರಳು ಉಂಗುರ ತೋರಿದೆ ಬೆಸೆದಿಹ ಬೆರಳು||   ಚೆಲುವೆಗೆ ಒಪ್ಪುವ ಸೀರೆಯ ಬಣ್ಣ ಕಾಡಿಗೆ ಮೆರೆಸಿದೆ ಹೊಳೆಯುವ ಕಣ್ಣ ಬಳುಕುವ ಬಳ್ಳಿಯ ಆ ನಡು ಸಣ್ಣ ಬೀರುತಲಿರುವಳು ಹೂ ನಗುವನ್ನ|| -ಪೆರ್ಮುಖ ಸುಬ್ರಹ್ಮಣ್ಯ ಭಟ್  ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
February 13, 2024
ಮೋಸದ ಮಿಕ!  ಎಲ್ಲೆಲ್ಲಿ ಶ್ರಮ ರಹಿತ ಸುಲಭ ಹಣ; ಸಂಪತ್ತಿನ ಹರಿವು ಇದೆಯೋ  ಸಖಾ...   ಅಲ್ಲಲ್ಲಿ ಲಪಟಾಯಿಸಲು ಹೊಂಚುಹಾಕಿ ಕಾದು ಕುಳಿತಿರುತ್ತದೆ ಮೋಸದ  ಮಿಕ! *** ವಿಶ್ವಮಾನವ ಸಂಸ್ಕೃತಿ  ನಾವು- ಅವರಿಗೆ ಗೌರವದಿ ಕೈಮುಗಿಯುವುದು ಅವರು ನಮಗೆ  ಪ್ರತಿಯಾಗಿ ಕೈಮುಗಿಯುವುದು...   ವಿಶ್ವ ಮಾನವ ಸಂಸ್ಕೃತಿ! ಮಹಾ ರಾಜಕೀಯ ಪರಿಣತರೆ- ನೀವು ಕೂಪಮಂಡೂಕ... ಅಷ್ಟು ಸುಲಭದಲಿ ನಿಮಗಿದರ್ಥವಾಗದು! *** ಶೂರ    ಐದು ದಿನಗಳ          ಕಾಲ ನೈಜೀರಿಯಾ ಪ್ರಜೆ ಹೊಟ್ಟೆಯೊಳಗಿದ್ದ   ಇಪ್ಪತ್ತು ಕೋಟಿ    …
ವಿಧ: ಕವನ
February 12, 2024
ರೆಕ್ಕೆ ಬಡಿದು ಗಗನಕೇರಿ ಹಕ್ಕಿ ನಲಿಯುತಿದ್ದಿತು ಸಿಕ್ಕಿದಂಥ ಕಾಳುಕಡಿಯ ಹೆಕ್ಕಿ ತಿನ್ನುತಿದ್ದಿತು   ನೋಡಿ ಮನುಜ ಸಹಿಸದಾಗಿ ಕೂಡಿ ಹಾಕಬಯಸಿದ ಬೇಡಿ ತೊಡಿಸಿ ಹಕ್ಕಿಯನ್ನು ಗೂಡಲಿರಸತೊಡಗಿದ   ಸ್ವಚ್ಛ ಮನದ ಹಕ್ಕಿಯೀಗ ಇಚ್ಛೆಯಂತೆ ಹಾರದು ಹುಚ್ಚು ಮನದ ನರನ ಆಟ ಮೆಚ್ಚಲಾರ ದೇವನು   ತನ್ನ ಸುಖಕೆ ಪರರ ಕಾಡಿ ತಿನ್ನಲೇನು ಸುಖವಿದೆ? ತನ್ನ ಹಾಗೆ ಪ್ರಾಣಿ ಪಕ್ಷಿ ಮುನ್ನ ಅರಿಯಬೇಕಿದೆ   ಜೀವಿಯಾಗಿ ಬಂದಮೇಲೆ ಭಾವ ನೂರು ಮನದಲಿ ನೋವು ನಲಿವು ಸಹಜ ತಾನೆ ಬೇವು ಬೆಲ್ಲದಂದದಿ   ಪರರ ಸುಖವ ಕಸಿದು ನಿನಗೆ…
ವಿಧ: ಕವನ
February 11, 2024
ಒಲವಿನ ಪತ್ರವ ತಲುಪಿಸು ಎನ್ನುತ ಚೆಲುವನ ಬಳಿಗೆ ಕಳಿಸಿದ್ದೆ ಬಲುಹಿತ ಎನಿಸುವ ಗೆಲುವಿನ ಸುದ್ದಿಗೆ ಕಳವಳದಿಂದ ಕಾದಿದ್ದೆ   ಗಿಳಿಮರಿ ನಿನ್ನನು ಕಳಿಸಿದ ಕಾರ್ಯವ ಕಳಕಳಿ ಯಿಂದ ಮುಗಿಸಿದೆಯ ಬಳುವಳಿ ಇತ್ತನೆ ಗೆಳೆಯನು ನಿನ್ನಲಿ ತಿಳಿಸಲು ನೀನು ಬಂದಿಹೆಯ   ಹಸಿವಿಗೆ ಉಣ್ಣಲು ಅಶನವನೀಯಲೆ ಬಸವಳಿದಿರುವೆ ನೀನೀಗ ಹಸುವಿನ ಮನವಿದು ಕಸಿವಿಸಿಗೊಂಡೆನು ಕುಶಲವೆ ಇನಿಯ ಹೇಳೀಗ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
February 10, 2024
ಬಾಲಕೃಷ್ಣ ಏಕೆ ಹೀಗೆ ಬಂದು ಮಡಿಲು ಸೇರಿದೆ ಎಲ್ಲಿ ಏನು ಯಾರಿಗೆಲ್ಲ ತಂಟೆಯನ್ನು ಮಾಡಿದೆ   ಅಲ್ಲಿ ಇಲ್ಲಿ ಬೆಣ್ಣೆ  ಮುದ್ದೆ ಕದ್ದು ಮೆದ್ದು ಬಂದೆಯಾ ಸುಮ್ಮನಿರುವ ಕಂದನಲ್ಲ ನನಗೆ ಏಕೋ ಸಂಶಯ   ಉರಗ ಹಿಡಿದು ಶಿರವ ಮೆಟ್ಟಿ ನೃತ್ಯವಾಡಿ ಬಂದೆಯಾ ದುರುಳ ದನುಜರನ್ನು ಅಟ್ಟಿ ಮುಷ್ಟಿಯಲ್ಲಿ ಕೊಂದೆಯಾ   ಹಸಿವಿನಿಂದ ನೊಂದೆಯೇನು ಕೊಂಚ ಹಾಲು ನೀಡಲೇ ತಿನುವೆಯೇನು ಮುದ್ದೆ ಬೆಣ್ಣೆ ತಂದು ಕೊಡಲೆ ಈಗಲೆ   ತುಂಟ ಕಂದ ಸುಮ್ಮನಿರಲು ತಾಯಿ ಮನದೆ ತಳಮಳ ನೂರು ಪ್ರಶ್ನೆ ಉದಿಸಿ ಮನದೆ ಯಶೋದೆಗಿಂದು ಕಳವಳ…
ವಿಧ: ಕವನ
February 09, 2024
ಕಂಪು ಸೂಸುವ ಕೆಂಪು ಮಿಶ್ರಿತ ಹಳದಿ ಬಣ್ಣದ ತೊಳೆಗಳು ಶುಚಿಯಲಿಟ್ಟಿಹ ರುಚಿಯಲದ್ಭುತ ಎನಿಸುವಂತಹ ಫಲಗಳು   ಸಿಹಿಯ ಜೇನಿಗೆ ಬಹಳ ಹತ್ತಿರ ಕಹಿಯ ಮರೆಸುವ ಹಣ್ಣಿದು ಮನೆಯ ಅಂಗಳ ಸನಿಹ ಗಿಡದಲಿ ಮನವ ಸೆಳೆದಿಹ ಹಲಸಿದು   ಬಣ್ಣ ಕಾಣಲು ತಿನ್ನುವಾಸೆಯು ನನ್ನ ಮನದಲಿ ಬಂದುದು ವರ್ಷದಾದಿಗೆ ಹರ್ಷವಿತ್ತುದು ಬಲಿತ ಹಣ್ಣಿದು ದೊರೆತುದು||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
February 08, 2024
ನಾಡು ನುಡಿಗಾಗಿ ಹೋರಾಡಿದ ಮಹಾನುಭಾವರು ಕುಗ್ರಾಮವನು ಅಳಿಸಿ ಸೌಲಭ್ಯಗಳ ನೀಡಿದವರು ಎಲ್ಲಾ ಧರ್ಮಗಳ ಸಾರವೊಂದೇ ಎಂದುಲಿದವರು ಮನೆಮನೆಯಲೂ ಪರಿವರ್ತನೆಗೆ ಶ್ರಮಿಸಿದವರು   ಶಿಕ್ಷಣಕ್ಕಾಗಿ ನೂತನ ಸಂಸ್ಥೆಗಳ ಹುಟ್ಟುಹಾಕಿದವರು ಬಡವರ ಏಳಿಗೆಯೇ ಗ್ರಾಮದೇಳಿಗೆಯೆಂದವರು ಮೂಲಭೂತ ಸೌಕರ್ಯಗಳ ಕಲ್ಪಿಸಿದವರು ಶಾಲೆ ವೃತ್ತಿ ಉದ್ಯೋಗಕ್ಕಾಗಿ ಹೋರಾಡಿದವರು   ಭಾಷೆಯ ಬೆಳವಣಿಗೆಗೆ ಅಕ್ಷರ ಜ್ಯೋತಿ ಹಚ್ಚಿದವರು ನಿಸ್ವಾರ್ಥ ಸೇವೆಯ ಅಮೂಲ್ಯ ಮಾಣಿಕ್ಯವೆನಿಸಿದವರು ಸರಳ ಸಾಮಾನ್ಯ ಜನಪರ ಹಿತ ಚಿಂತಕರು ಸಮಾಜದ…
ವಿಧ: ಕವನ
February 08, 2024
ನಮ್ಮ ಮನೆಯಾ ಅಂಗಳ ಪಕ್ಕಾ ಬೆಳೆದಿದೆ ಹಸಿರಿನ ಗಿಡವಿದು ಎಕ್ಕಾ ಹೂವಿನ ಗೊಂಚಲು ಬಿಟ್ಟಿದೆ ಗಿಡವು ಅವುಗಳ ನಡುವಲಿ ಮೊಗ್ಗಿದೆ ಕೆಲವು   ಎರಡಿದೆ ಜಾತಿಯು ಎಕ್ಕದ ಗಿಡದಿ ಕೆಲಗಿಡ ಹೂಗಳು ಬೆಳ್ಳನೆ ಬಣ್ಣದಿ ಬೇಗನೆ ಒಣಗದು ಅರಳಿದ ಹೂವು ಅಡಗಿದೆ ಗಿಡದಲಿ ಔಷಧ ಗುಣವು   ದೇವನ ಪೂಜೆಗೆ ಬಳಸಲು ಬಹುದು ಕೀಳದೆ ಗಿಡದಲಿ ಇಡಲೂ ಬಹುದು ಪೋಣಿಸಿ ಮಾಡಿದ ಮಾಲೆಯು ಸೊಗಸು ಮಾಲೆಯ ಮೊಳೆಯಲಿ ನೇಲಿಸಿ ಉಳಿಸು||   -ಪೆರ್ಮುಖ ಸುಬ್ರಹ್ಮಣ್ಯ ಭಟ್