ಕವನಗಳು

ವಿಧ: ಕವನ
March 02, 2024
ಓ..ಲಲ್ಲೂ ರಾಮ ಬರುವನಂತೆ ಬಾರೊ ಸಖಾ ನಾವೆಲ್ಲಾ ಹೋಗೋಣ ಅಯೋಧ್ಯಾ ನಗರಕ!   ನೆನಪಿಸುತ್ತಿದೆ ಅಂದಿನ ಶ್ರೀ ರಾಮನ ವೈಭವ ಬನ್ನಿರೆಲ್ಲ ನೋಡಿ ಆನಂದಿಸೋಣ ಸಂಭ್ರಮ!   ಎಲ್ಲ ಶತಮಾನಗಳಲೂ ನಿನ್ನದು ದುರ್ದೈವವೇ ಪಿತನ ಹಿತಕೆ-ಕೈಕೆ ದುರಾಸೆಗೆ ಬಲಿಯಾದೆಯಾ?   ಜಾನಕಿಯ ಜೊತೆ ಹದಿನಾಲ್ಕು ವರ್ಷ ವನವಾಸ ಭರತಗೆ ಸಿಂಹಾಸನವ ಕೊಟ್ಟು ಪಟ್ಟೆ ಸಂತೋಷ!   ಅಲ್ಪನ ಮಾತಿಗಂಜಿ ಸೀತಾ ಮಾತೆಯ ತ್ಯಾಗ ಆಯಿತೇ ಲವ-ಕುಶರ ಪುತ್ರ ಶೋಕ ವಿಯೋಗ!   ಓ ಮರ್ಯಾದಾ ಪುರುಷೋತ್ತಮಾ ಶ್ರೀರಾಮ ನಿನ್ನ ಆದರ್ಶಗಳಿಂದಲೇ ನೀನು…
ವಿಧ: ಕವನ
March 01, 2024
ಆನ್ಲೈನ್-ಆಫ್ಲೈನ್... ನಗರದಲೆಲ್ಲೆಲ್ಲೂ ನಡೆಯುತಲಿದೆ ಸದ್ದಿಲ್ಲದೆ ಭರಾಟೆ ಬಿಸ್ನೆಸ್- ಆನ್ಲೈನ್...   ಅಯ್ಯೋ..ನಮ್ಮೂರ ಪೇಟೆಗಳಿಂದು ಸೊರಗಿ ಬಾಡಿ ಹೋಗಿವೆ ಆಗಿ ಸ್ವಿಚ್ ಆಫ್ಲೈನ್! *** ಕುವೆಂಪು  ಜಗದ ಕವಿ... ಯುಗದ ಕವಿ... ಮಲೆನಾಡಿನ ಕವಿ... ವಿಶ್ವಪಥದ ಕವಿ... ಮನುಜ ಮತದ ಕವಿ... ರಾಷ್ಟ್ರ ಕವಿ...   ಕನ್ನಡಾಭಿಮಾನಕೆ ನಿಮಗೆ ಯಾರಿಲ್ಲ ಸರಿ ಜ್ಞಾನ ಪೀಠಕೇ ತಂದುಕೊಟ್ಟಿರಿ ಗರಿ ವಿಶ್ವ ಮಾನವ ಸಂದೇಶ ಸಾರಿದ ಚೇತನವೇ.... ನಿಮಗಿದೋ ಸಹಸ್ರ ನಮನ  *** ಸದಭಿಮಾನ.... ನನ್ನ ದೇಶ ನನ್ನ ಧರ್ಮ…
ವಿಧ: ಕವನ
February 29, 2024
ಸುತ್ತಮುತ್ತ ನೀರನೀಡೆ ಹೊಳೆಯು ಒಂದು ಹರಿದಿದೆ ದೊಡ್ಡ ಮರದ ರೆಂಬೆ ಕೊಂಬೆ ಹೊಳೆಯ ಬದಿಗೆ ಚಾಚಿದೆ   ವೃಕ್ಷ ತನ್ನ ತಲೆಯನೆತ್ತಿ ನೀರಿಗಾಗಿ ಅರಸಿದೆ ಜಲದ ಕಡೆಗೆ ಬೇರು ಸರಿಯೆ ಗುರುತು ಹಾಕಿ ಕೊಟ್ಟಿತೇ?   ಮರವು ಪೂರ್ತಿ ಎಲೆಗಳಿರದೆ ಕಾಣುತಿಹುದು ಬೆತ್ತಲು ಕಜ್ಜಿಯಂತೆ ತುಂಬಿಕೊಂಡ ಮುಳ್ಳು ಮೈಯ ಮುಚ್ಚಲು   ಕಾಣುತಿಹುದು ಟಿಸಿಲ ತುದಿಗೆ ಚಂದ ಹೂವು ಬಿಟ್ಟಿದೆ ನಾಳೆಗರಳಿ ನಗಲು ಮೊಗ್ಗು ಸರದಿಯಲ್ಲಿ ಕಾದಿದೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
February 28, 2024
೧. ಮೊರೆವ ಕಡಲಿನಂತೆ ನೀನು ಆಗಬೇಡ ಜಾಣೆಯೆ ತೀರಕೆರಗಿ ಬರುವ ನೀರ ಸೇರಬೇಡ ಜಾಣೆಯೆ   ಮೌನ ಮಾತು ನೆಗೆದು ಹೋಗೆ ಪ್ರೀತಿ ಈಗ ಎಲ್ಲಿದೆ ಜೀವ ಭಾವ ಬೆರೆತ ಸಮಯ ಬಾಡಬೇಡ ಜಾಣೆಯೆ   ಮುತ್ತು ರತ್ನ ಹವಳ ಬೇಡ ಒಲುಮೆಯೊಂದೆ ಸೇರಲಿ ಬತ್ತದಿರುವ ಕನಸ ಒಳಗೆ  ಸಾಗಬೇಡ ಜಾಣೆಯೆ   ಕರೆಯದಿರಲು ನೋವು ಸಹಜ ಯಾತ್ರೆ ಪಯಣವೆಂದಿಗು ನಡೆಯುತಿರಲು ವೇಷ ದ್ವೇಷ ಕೂಡಬೇಡ ಜಾಣೆಯೆ   ವಿಷದ ಮುಳ್ಳ ಸನಿಹ ಇಂದು ಕುಳಿತೆ ಏಕೆ ಈಶನೆ ಕಸದ ರೀತಿ ನೋಡುತಿರಲು ಹೋಗಬೇಡ ಜಾಣೆಯೆ *** ಗಝಲ್-೨ ಬಾನಿನಲ್ಲಿ ಇರುವ ತಾರೆಯಂತೆ…
ವಿಧ: ಕವನ
February 27, 2024
ಯೌವನವು ಜಾರುತ ಸೋರಿ ಹೋಗಿದೆ ತನುವ ಬೆಸೆಯುವಲ್ಲಿ ಚೆಲುವು ಸರಿಯುತ ಮುಖವು ಸುರುಟಿದೆ ಧ್ವನಿಯು ಒಡೆಯಿತಿಲ್ಲಿ ಮನಸಿನಲಿ ನೋವು ಹೆಚ್ಚಾಗಿಯಿಂದು ಎದೆಯಾಳ ಕುಸಿಯಿತಿಂದು ತೊದಲು ಮಾತಿನಲಿ ಕಣ್ಣು ಕುರುಡಾಯ್ತು ಏನು ತೋರದಿಂದು   ಮೂಲೆ ಕೋಣೆಯಲಿ ಕಂಬ ಹಿಡಿದು ಮಲಗಿದ್ದೆ ನಾನು ಅಲ್ಲಿ ಮಗುವೊಂದು ಬಂದು ಕೈಯನ್ನು ಮುಗಿದು ಕುಳಿತಿತ್ತು ಪಕ್ಕದಲ್ಲಿ ಮನೆಯೊಡತಿ ಸಿಡುಕಿ ಬೈಯುತ್ತ ನಿಂದು ಕೆಕ್ಕರಿಸಿ ಕುಣಿದಳಿಂದು ವೇದನೆಯ ಜೊತೆಗೆ ಒಡಲೆಲ್ಲ ಬೆಂದು ಹುಸಿಯಾಯ್ತು ಸ್ವರ್ಗವಿಂದು   ಯಾರ ಬಳಿಯಲಿ ಹೇಳಲೇನು…
ಲೇಖಕರು: kmurthys
ವಿಧ: ಕವನ
February 27, 2024
ಕವಿಮನದ ಭಾವಗಳು ಒಲೆಯ ಮೇಲಿನ ಪಾಕ ಸವಿರುಚಿಯ ಭಕ್ಷ್ಯಗಳ ಲಿಪಿಸುವನು ಭುಜಿಸೆ | ನವಿರಾದ ಅಭಿರುಚಿಯ ಓದುಗನು ರುಚಿ ನೋಡೆ ಕವಿಗಾತ್ಮತೃಪ್ತಿಯದು ~ ಪರಮಾತ್ಮನೆ ||
ವಿಧ: ಕವನ
February 26, 2024
ದೇಗುಲದ ಎದುರಲ್ಲೆ ಬಾಗಿಹಳು ಕುಳಿತಲ್ಲೆ ಸಾಗಿಸಲು ಬಡತನದ ಬದುಕಿಗಾಗಿ   ಹೆಣೆದು ಮಾಲೆಯ ಮಾಡಿ ದಣಿದು ವದನವು ಬಾಡಿ ಮಣಿಸಿ ಬಿಟ್ಟಿಹುದವಳ ತುತ್ತಿಗಾಗಿ   ಸಿರಿಯ ಜೊತೆಯಲಿ ಮೆರೆವ ಗುರಿಯು ಆಕೆಯದಲ್ಲ ಭರವಸೆಯ ಕಿರಣವಿದೆ ಬೆನ್ನಹಿಂದೆ   ಸದ್ದು ಗದ್ದಲ ಮರೆತು ಜಿದ್ದಿನಲ್ಲಿಯೆ ಕಲಿವ ಮುದ್ದು ಪುತ್ರಿಯ ಬದುಕು ಬೆಳಗೆ ಮುಂದೆ   ಹರಿಯುತಿಹ ಕಂಬನಿಯ ಒರೆಸುವಳು ಸೆರಗಿನಲಿ ಕರಿವದನ ರಕ್ಷಿಪುದು ಕರುಣದಿಂದೆ   ಏಕೆ ಈದಿನ ಪೂರಾ ಮೂಕವಾಗಿದೆ ನಗರ ಬಾಕಿ ಉಳಿದಿದೆ ಹೂವು ರಾಶಿ ರಾಶಿ   ಕೊಂಡುಕೊಳ್ಳಲು…
ವಿಧ: ಕವನ
February 25, 2024
ಮಹಾಭಾರತ ಕರ್ತೃ ವೇದವ್ಯಾಸರು ದ್ವಾಪರಯುಗದಲಿ ಪರಾಶರ ಸತ್ಯವತಿಯ ಗರ್ಭದಲಿ ಮಾಘ ಮಾಸ ಪೌರ್ಣಿಮೆಯಂದು ಜನಿಸಲು 'ಭಾರತ ಹುಣ್ಣಿಮೆ'ಯೆಂದು ಪ್ರಸಿದ್ಧಿಯಾಗಲು   ವ್ಯಾಸಪೂರ್ಣಿಮೆ ಎನಿಸಿಕೊಳ್ಳಲು ಅರುಣೋದಯ ಸಮಯದೊಳು ಮಿಂದು ಮಡಿಯುಟ್ಟು ಧ್ಯಾನಿಸಲು ದಾನಧರ್ಮ ವಿಶೇಷವೆನಿಸಲು   ರೇಣುಕಮ್ಮಳ ದಿವ್ಯ ಸನ್ನಿಧಿ ಚಾಲುಕ್ಯ ರಾಷ್ಟ್ರಕೂಟರ ಶಿಲ್ಪಶೈಲಿ ಸವದತ್ತಿ ಎಲ್ಲಮ್ಮನ ಜಾತ್ರೆ ಗೌಜಿ ಜೋಗ ಜೋಗತಿಯರ ಸಂಭ್ರಮ   ಉಧೋ ಉಧೋ ಎನ್ನುವ ಸ್ವರ ಚೌಡಕಿ ಬಾರಿಸುವ ಕಲೆಯ ಸೆಲೆ ಎತ್ತಿನ ಬಂಡಿಗಳ ಮೆರವಣಿಗೆ ಹಾಡು ಭಜನೆ…
ವಿಧ: ಕವನ
February 24, 2024
ಚೀವ್ ಚೀವ್ ಎನ್ನುತ ಬಂದಿತು ಹಕ್ಕಿ ಮರದಲಿ ಹೋಗಿ ಕೂತಿತು ಹಕ್ಕಿ ಅಲ್ಲಿಂದಿತ್ತ ಇಲ್ಲಿಂದತ್ತ ತಿರುಗಿತು ಹಕ್ಕಿ ಕೊಂಬೆಯ ಹಿಡಿದು ಜೋತಾಡಿತು ಹಕ್ಕಿ   ಕುಟ್ ಕುಟ್ ಎಂದು ಕುಟ್ಟಿತು ಕೊಂಬೆಗೆ ಮೆಲ್ಲನೆ ಕಚ್ಚಿ ರಂದ್ರವ ಮಾಡಿತು ರೆಂಬೆಗೆ ರಂದ್ರವ ಒಳಗೆ ತಲೆ ಮರೆಸಿ ಕೊಂಡಿದೆ ಕಲಿಸಿದ ಗುರುವಿಗೆ ವಂದನೆ ಹೇಳಿದೆ   ನೋಡಿದ ನನಗೆ ಸಂತಸ ತಂದಿತು ಮನದಲಿ ಏನೋ ಆಸೆ ಚಿಗುರಿತು ಹಿಡಿಯಲು ಹೋದೆ ಹಕ್ಕಿಯ ನೀಗ ಗುಯ್ ಗುಯ್ ಎನ್ನುತ ಹಾರಿತು ಬೇಗ.   -ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ 
ವಿಧ: ಕವನ
February 23, 2024
ತಂಪು ಜಾಗದಲಿಂತು ಕೆಂಪು ಹವಳದ ತಟ್ಟೆ ಕಂಪು ಸೂಸುತಲಿಹುದು ಯಾರದೆಂದೆ ಹಳದಿ ಮುತ್ತಿದು ಚಂದ ಬಳಿಗೆ ಬಂದಿದೆ ಭೃಂಗ ಬೆಳೆದ ಗಿಡದಲಿ ಹೂವು ಅರಿತುಕೊಂಡೆ   ಹಸಿರಿನೆಲೆಗಳ ಗಿಡವು ಬಸಿರಿನಂತಿದೆ ಮೊಗ್ಗು ಕುಸುಮವರಳಿದೆ ಕೆಲವು ಮನವ ಸೆಳೆಯೆ ನಸುಕು ಸರಿಯುತಲಿತ್ತು ನಿಶೆಯ ಮುಸುಕನು ಸರಿಸೆ ಬಿಸಿಲ ತರುವನು ರವಿಯು ತಿಮಿರ ಕಳೆಯೆ|| -ಪೆರ್ಮುಖ ಸುಬ್ರಹ್ಮಣ್ಯ ಭಟ್