ಗಝಲ್ ಗಳ ಲೋಕ

ಗಝಲ್ ಗಳ ಲೋಕ

ಕವನ

೧.

ಮೊರೆವ ಕಡಲಿನಂತೆ ನೀನು ಆಗಬೇಡ ಜಾಣೆಯೆ

ತೀರಕೆರಗಿ ಬರುವ ನೀರ ಸೇರಬೇಡ ಜಾಣೆಯೆ

 

ಮೌನ ಮಾತು ನೆಗೆದು ಹೋಗೆ ಪ್ರೀತಿ ಈಗ ಎಲ್ಲಿದೆ

ಜೀವ ಭಾವ ಬೆರೆತ ಸಮಯ ಬಾಡಬೇಡ ಜಾಣೆಯೆ

 

ಮುತ್ತು ರತ್ನ ಹವಳ ಬೇಡ ಒಲುಮೆಯೊಂದೆ ಸೇರಲಿ

ಬತ್ತದಿರುವ ಕನಸ ಒಳಗೆ  ಸಾಗಬೇಡ ಜಾಣೆಯೆ

 

ಕರೆಯದಿರಲು ನೋವು ಸಹಜ ಯಾತ್ರೆ ಪಯಣವೆಂದಿಗು

ನಡೆಯುತಿರಲು ವೇಷ ದ್ವೇಷ ಕೂಡಬೇಡ ಜಾಣೆಯೆ

 

ವಿಷದ ಮುಳ್ಳ ಸನಿಹ ಇಂದು ಕುಳಿತೆ ಏಕೆ ಈಶನೆ

ಕಸದ ರೀತಿ ನೋಡುತಿರಲು ಹೋಗಬೇಡ ಜಾಣೆಯೆ

***

ಗಝಲ್-೨

ಬಾನಿನಲ್ಲಿ ಇರುವ ತಾರೆಯಂತೆ ನೆಲೆಸು 

ಒಲವಿನ ಸುಧೆಯ ಧಾರೆಯಂತೆ ನೆಲೆಸು 

 

ಹೊತ್ತಲ್ಲದ ಹೊತ್ತಿನಲ್ಲಿ ಬಂದಿರುವೆ ಯಾಕೆ 

ಚೆಲುವಿನ ಸನಿಹ ಮದಿರೆಯಂತೆ  ನೆಲೆಸು 

 

ಗೊತ್ತು ಗುರಿಯಿಲ್ಲದ  ಬದುಕೊಂದು ಸಂತೆ

ಮತ್ತಿನ ಒಳಗಿನ  ಧ್ವನಿಯಂತೆ  ನೆಲೆಸು 

 

ಚಿತ್ತಾರದ ಪುಟಗಳಿದ್ದರೂ ಬಾಳೊಂದು ಕನಸೆ

ನಶೆಯು ಒಂದೊಳ್ಳೆಯ ನಡತೆಯಂತೆ  ನೆಲೆಸು 

 

ಸಾಗರದ ಮುತ್ತುಗಳಲ್ಲಿ ನಿನ್ನನೇ ಕಾಣುತಿರುವೆ

ಈಶನ ಹೃದಯದಲಿಂದು ರಾಣಿಯಂತೆ ನೆಲೆಸು 

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್