ಕಂಪು ಸೂಸುವ ಕೆಂಪು ತಟ್ಟೆ

ಕಂಪು ಸೂಸುವ ಕೆಂಪು ತಟ್ಟೆ

ಕವನ

ತಂಪು ಜಾಗದಲಿಂತು

ಕೆಂಪು ಹವಳದ ತಟ್ಟೆ

ಕಂಪು ಸೂಸುತಲಿಹುದು ಯಾರದೆಂದೆ

ಹಳದಿ ಮುತ್ತಿದು ಚಂದ

ಬಳಿಗೆ ಬಂದಿದೆ ಭೃಂಗ

ಬೆಳೆದ ಗಿಡದಲಿ ಹೂವು ಅರಿತುಕೊಂಡೆ

 

ಹಸಿರಿನೆಲೆಗಳ ಗಿಡವು

ಬಸಿರಿನಂತಿದೆ ಮೊಗ್ಗು

ಕುಸುಮವರಳಿದೆ ಕೆಲವು ಮನವ ಸೆಳೆಯೆ

ನಸುಕು ಸರಿಯುತಲಿತ್ತು

ನಿಶೆಯ ಮುಸುಕನು ಸರಿಸೆ

ಬಿಸಿಲ ತರುವನು ರವಿಯು ತಿಮಿರ ಕಳೆಯೆ||

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್