ಕವನಗಳು

ವಿಧ: ಕವನ
February 24, 2024
ಚೀವ್ ಚೀವ್ ಎನ್ನುತ ಬಂದಿತು ಹಕ್ಕಿ ಮರದಲಿ ಹೋಗಿ ಕೂತಿತು ಹಕ್ಕಿ ಅಲ್ಲಿಂದಿತ್ತ ಇಲ್ಲಿಂದತ್ತ ತಿರುಗಿತು ಹಕ್ಕಿ ಕೊಂಬೆಯ ಹಿಡಿದು ಜೋತಾಡಿತು ಹಕ್ಕಿ   ಕುಟ್ ಕುಟ್ ಎಂದು ಕುಟ್ಟಿತು ಕೊಂಬೆಗೆ ಮೆಲ್ಲನೆ ಕಚ್ಚಿ ರಂದ್ರವ ಮಾಡಿತು ರೆಂಬೆಗೆ ರಂದ್ರವ ಒಳಗೆ ತಲೆ ಮರೆಸಿ ಕೊಂಡಿದೆ ಕಲಿಸಿದ ಗುರುವಿಗೆ ವಂದನೆ ಹೇಳಿದೆ   ನೋಡಿದ ನನಗೆ ಸಂತಸ ತಂದಿತು ಮನದಲಿ ಏನೋ ಆಸೆ ಚಿಗುರಿತು ಹಿಡಿಯಲು ಹೋದೆ ಹಕ್ಕಿಯ ನೀಗ ಗುಯ್ ಗುಯ್ ಎನ್ನುತ ಹಾರಿತು ಬೇಗ.   -ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ 
ವಿಧ: ಕವನ
February 23, 2024
ತಂಪು ಜಾಗದಲಿಂತು ಕೆಂಪು ಹವಳದ ತಟ್ಟೆ ಕಂಪು ಸೂಸುತಲಿಹುದು ಯಾರದೆಂದೆ ಹಳದಿ ಮುತ್ತಿದು ಚಂದ ಬಳಿಗೆ ಬಂದಿದೆ ಭೃಂಗ ಬೆಳೆದ ಗಿಡದಲಿ ಹೂವು ಅರಿತುಕೊಂಡೆ   ಹಸಿರಿನೆಲೆಗಳ ಗಿಡವು ಬಸಿರಿನಂತಿದೆ ಮೊಗ್ಗು ಕುಸುಮವರಳಿದೆ ಕೆಲವು ಮನವ ಸೆಳೆಯೆ ನಸುಕು ಸರಿಯುತಲಿತ್ತು ನಿಶೆಯ ಮುಸುಕನು ಸರಿಸೆ ಬಿಸಿಲ ತರುವನು ರವಿಯು ತಿಮಿರ ಕಳೆಯೆ|| -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
February 22, 2024
ಕುಳಿತಿಹ ಕಡೆಯಲಿ ಕುಳಿತಿರಲಾಗದೆ ಇಳಿದಿಹೆ ನೆನೆಯಲು ಮಳೆಯೊಳಗೆ ಮಳೆಹನಿ ನೆನೆಸಿದೆ ಚಳಿಯನು ತಾರದೆ ಕಳೆದಿದೆ ಬೇಗುದಿ ನನ್ನೊಳಗೆ   ಇನಿಯನು ಬರುವನು ಮನವಿದು ಕಾದಿದೆ ಕನಸಿನ ಚಿಲುಮೆಯು ಉಕ್ಕಲಿದೆ ತನುಮನ ಬೆಸೆಯಲು ದಿನಗಳೆ ಕಾದಿಹೆ ಜನುಮದ ಜೋಡಿಯು ಸಿಕ್ಕಲಿದೆ   ಕುಣಿಯುತ ಮಳೆಯಲಿ ದಣಿಯದು ದೇಹವು ಕಣ ಕಣ ತುಂಬಿದೆ ಸಂತೋಷ ಮಣಿಯುವೆ ನಲ್ಲಗೆ ತಣಿಸುವನಾತನು ಚಣದಲಿ ತರುವನು ಉಲ್ಲಾಸ   ಆತುರ ತಂದಿದೆ ಕಾತರ ತುಂಬಿದೆ ಕೋತಿಯ ತರದಲಿ ಆಡಿಸಿದೆ ಮಾತಿಗೆ ನಿಂತರೆ ಸೋತೇ ಹೋಗುವೆ ರಾತ್ರಿಗೆ ಸಿದ್ಧತೆ…
ವಿಧ: ಕವನ
February 21, 2024
ದಿಟ್ಟ ತನದಲಿ ಹಯವ ಬಂಧಿಸಿ ಕಟ್ಟಿ ಛಲದಲಿ ಸಮರಕೆಳಸಿದ ಪುಟ್ಟ ಬಾಲರ ಕಂಡು ಭ್ರಮಿತನು ದೇವ ಶ್ರೀರಾಮ ಸಿಟ್ಟುಗೊಳ್ಳದೆ ನುಡಿದನವರಲಿ ಕೆಟ್ಟ ಹಟವನು ತೊರೆದು ಮೊದಲಲಿ ಬಿಟ್ಟು ಕಳುಹಿರಿ ಯಜ್ಞ ಕುದುರೆಯ, ಬೇಡ ಸಂಗ್ರಾಮ   ಇಂತು ಲವ ಕುಶರಲ್ಲಿ ಮಮತೆಯು ಬಂತು ಮನದಲಿ ರಾಮಚಂದ್ರಗೆ ನಿಂತು ಬಾಲರ ತಬ್ಬುವಾಸೆಯು ಬೆಳೆದು ಮನದೊಳಗೆ ಇಂಥ ಮಾತಿನ ಯತ್ನ ಸಾಗಿರೆ ಹಂತ ಹಂತದಿ ಮಣಿಸಲಾಗದೆ ಚಿಂತೆಯಾಯಿತು ನೊಂದ ಮನದಲಿ ತಂದ ಬೇಗುದಿಗೆ   ಮುಂದೆ ನಿಂತಿಹ ಮಕ್ಕಳಿಬ್ಬರ ತಂದೆ ತಾನೆಂದರಿಯ ದೇವನು ಕಂದರೀರ್ವರ…
ವಿಧ: ಕವನ
February 20, 2024
ನನ್ನ ಹಳ್ಳಿಯ ಜನರ ಒಡಲಿದೊ ಬರಿದೆ ಅಗ್ನಿ ಕುಂಡ ಅಲ್ಲಿ ಬರದ ಕಾರ್ಮೋಡದಲ್ಲಿ ನೇತಾರ ಇದ್ದು ದಂಡ   ಕೂಳು ಕೂಳಿಗು ಗತಿಯು ಇಲ್ಲದೆ  ಜನರ ವಲಸೆ ಹಾಡು ಹವಾ ರೂಮಲೆ ಕುಳಿತ ನಾಯಕನ ಹೊಟ್ಟೆ ಬಿರಿಯೆ ನೋಡು ಡಿ. ಸಿ ಕುಳಿತ ಕಾರಲ್ಲಿ ಎ. ಸಿಯ ಕಾರುಬಾರು ನೋಡು ಹಳ್ಳಿ ಜನರ ಜೋಪಡಿಯ ತುಂಬಾ ಬರಿದೆ ಗಾಳಿ ನೋಡು   ಜಲವು ಬತ್ತಿದ ಕೆರೆಯ ಮಣ್ಣಲಿ ಸತ್ತ ದನದ ಕೊಂಬು ನೀರು ಇಲ್ಲದೆ ಒಣಗಿ ಕರಟಿದ ಭತ್ತ , ರಾಗಿ ಕಬ್ಬು ಎಲುಬುಗೂಡಿನ ಹರೆಯ ಹೆಣ್ಣಿನ ಮನದಿ ಆಸೆ ಇಲ್ಲ ಜಲವು ಸಿಕ್ಕರೆ ಸಾಕು ಎನ್ನುತ ಕೊಡದಿ…
ವಿಧ: ಕವನ
February 19, 2024
ಭಾನು ಪಡುವಣ ಕಡಲಿಗಿಳಿದಿರೆ ಬಾನಿಗೇರಿದ ಚಂದ್ರಮ ತಾನು ರಾತ್ರಿಯ ರಾಜನೆನ್ನುತ ಜಾಣನೆನ್ನುವ ಸಂಭ್ರಮ   ಗಿಡದ ಮೊಗ್ಗನು ನೋಡಿ ಚಂದಿರ ತಡೆಯಲಾರದೆ ಹೋದನೆ ಹಿಡಿವ ಬಯಕೆಯು ಮೂಡಿ ಮನದಲಿ ಕಡೆಗೆ ಚುಂಬಿಸೆ ಬಂದನೆ?   ತನ್ನ ಪ್ರೇಯಸಿ ಹೂವು ನೈದಿಲೆ- -ಯನ್ನು ಸೋಮನು ಮರೆತನೆ ಮುನ್ನ ಯೋಚನೆ ಮಾಡಲಾರದೆ ಚೆನ್ನ ಮೊಗ್ಗಿಗೆ ಸೋತನೆ?   ಶಶಿಗೆ ಮೊಗ್ಗಿದು ಭ್ರಮೆಯ ತಂದಿತೆ ಬಸಿರು ಹೊತ್ತಿಹ ಗಿಡವಿದು ಖುಷಿಯ ತಾಳದೆ ಭ್ರಮರವಾದನೆ ತುಸುವೆ ವಿಚಲಿತನಾದುದು||   -ಪೆರ್ಮುಖ ಸುಬ್ರಹ್ಮಣ್ಯ ಭಟ್ ಚಿತ್ರ ಕೃಪೆ: …
ವಿಧ: ಕವನ
February 18, 2024
ವಿಷದ ಹಾವಿನ ಜೊತೆಯಲಾಡುವೆ ಕುಸಿದು ಹೋದೆನು ನೋಡಿ ಭಯದಲಿ ಮಸೆದು ಹಲ್ಲನು ಜರೆದು ಹರಿಯನು ಮಾತೆ ರೋಷದಲಿ ಹಸಿವೆಗೆನ್ನುತ ನನ್ನ ಕೇಳದೆ ಮೊಸರು ಗಡಿಗೆಯನೆತ್ತಿಕೊಳ್ಳುವೆ ತುಸುವೆ ಬೆಣ್ಣೆಯನರಸಿ ಗಡಿಗೆಯನೊಡೆದೆ ನೋಡಲ್ಲಿ||   ಕರುಣೆಯಿಲ್ಲದ ದನುಜ ಕಾಡಿರೆ ದುರುಳರಂತ್ಯವ ಗೈವೆನೆನ್ನುತ ಕರದ ಮುಷ್ಟಿಯ ಬಿಗಿದು ನಡೆದರೆ ನನಗೆ ಭಯ ತರದೆ? ತರಳ ನೀನಿದೊ ಪುಟ್ಟ ಬಾಲಕ ಕರೆದ ಕೂಗಿಗೆ ತಿರುಗಿ ನೋಡದೆ ಮರುಳನಂತೆಯೆ ನೀನು ನಡೆದರೆ ನನಗೆ ಭಯವಿರದೆ||   ನಂದ ಕಂದನ ತುಂಟತನವಿದು ನಂದಗೋಕುಲ ಮಂದಿಗಚ್ಚರಿ…
ವಿಧ: ಕವನ
February 17, 2024
ಗಂಡು -- ಓ ಸಖಿಯೆ ನಿನ್ನ ಒಲವಿಗಾಗಿ ಹಂಬಲಿಸುತ್ತಿರುವೆ ಬಳಿ ಬಂದು ಕೈಹಿಡಿದು ಪ್ರೀತಿ ಕೊಡಲಾರೆಯಾ ||ಪ||   ತೇಲಿ ಬಿಡೇ ತೇಲಿ ಬಿಡೇ ತೇಲಿ ಬಿಡೇ ಒಲವಿನಲ್ಲಿ ನನ್ನನೆಂದು ತೇಲಿಬಿಡೇ ಬಾಳ ದೋಣಿ ಜೀವದಲೆಲಿ ಸಾಗುತಿದೆ ನೀನು ಬಂದು ನನಗೆಯಿಂದು ಮುತ್ತು ಕೊಡೇ || ತೇಲಿಬಿಡೇ||   ನಿನ್ನ ಬಂಧಿಯಿಂದು ಮೋಹಪಾಶದೊಳಗೆ  ಉಸಿರುನಿಂತ ವೇದನೆಯಲ್ಲಿ ನರಳುತಿಹೆ ಕೈಯ ಬೆಸೆದು ಮೈಯ ತಬ್ಬು ನನ್ನೊಲವೆ ಬದುಕಿಯಿರುವೆ ಒಂದು ಕ್ಷಣ ನಿನ್ನಯೆದುರೆ ||ತೇಲಿಬಿಡೇ||   ರಾತ್ರಿಯಾಗೆ ಹಾಲ್ ಬೆಳಕೂ ಚುಚ್ಚುತಿಹುದೆ…
ವಿಧ: ಕವನ
February 17, 2024
ಭಾಸ್ಕರನು ಸಪ್ತ ಅಶ್ವಗಳನ್ನೇರಿ ಕ್ರಮಿಸುವ ದಿನವಿಂದು ಅರುಣೋದಯ ಕಾಲದಲ್ಲಿ ಸಲಿಲದಿ ಪವಿತ್ರ ಸ್ನಾನವಿಂದು ಭಗವಾನ್ ಸೂರ್ಯನಾರಾಯಣನಿಗೆ ಅರ್ಘ್ಯ ನೀಡುವೆವಿಂದು ಜಗದ ಜೀವರಿಗೆ ದೀರ್ಘಾಯುಷ್ಯ ಕರುಣಿಸುವ  ಸಮಯವಿಂದು   ದಾನ ಧರ್ಮಗಳ ಮಾಡುವ ಪುಣ್ಯ ಪರ್ವಕಾಲವಿಂದು ರಥಸಪ್ತಮಿಯ ವಿಶೇಷ ಪೂಜೆ ಆರಾಧನೆಯಿಂದು ಅನ್ನದಾತರು ಸುಗ್ಗಿ ಚಟುವಟಿಕೆಗಳನ್ನು  ಪ್ರಾರಂಭಿಸುವ ದಿನವಿಂದು ನೇಸರನ ಕಿರಣ ಉಲ್ಲಾಸ ಉತ್ಸಾಹ ಮೈಮನಕಿಂದು   ಆದಿತ್ಯ ದಿನಕರ ಅರ್ಕ ತರಣಿತೇಜ ದಿನಮಣಿಯೆ ನಿನ್ನ ಕಿರಣಗಳ ಪಸರಿಸಿ ಭೂದೇವಿಯ…
ವಿಧ: ಕವನ
February 16, 2024
ಅರಸಿನ ಪುಡಿಯನು ಬೆರೆಸುತ ಜಲದಲಿ ಕರದಲಿ ಉಂಡೆಯ ಮಾಡಿದರೆ? ತರುವಿನ ಕೊಂಬೆಗೆ ಮಾಡಿದ ಉಂಡೆಯ ಸರದಿಯಲಂಟಿಸಿ ಇಟ್ಟಿಹರೇ?   ಬೆಟ್ಟದ ತುದಿಯಲಿ ಎತ್ತರ ಜಾಗದಿ ಹುಟ್ಟಿದೆ ಗಿಡವಿದು ಚಂದದಲಿ ಕೊಟ್ಟವರಾರದು ಬದುಕಲು ಜಲವನು ಕಟ್ಟೆಯ ಕಟ್ಟಿದರಾರಲ್ಲಿ   ಏಣಿಯ ತರದಲಿ ಚಿಗುರಿದೆ ಎಲೆಗಳು ಕಾಣಲು ಸುಂದರ ಎನಿಸುತಿದೆ ಗೋಣನು ಗಗನಕೆ ಚಾಚಿದೆ ಗಿಡವಿದು ಭಾನುವ ಕಿರಣದ ಆತುರದೆ   ಸ್ವಚ್ಛದ ಗುಡ್ಡಕೆ ಶೋಭೆಯ ತಂದಿದೆ ಹಚ್ಚನೆ ಹಸುರಿನ ಪುಟ್ಟ ಮರ ಪಚ್ಚೆಯ ಬಣ್ಣದ ಉದ್ದದ ಕಡ್ಡಿಯು ಮೆಚ್ಚುಗೆ ಗಳಿಸಿದೆ ‌ನೋಡುಗರ…