ಭ್ರಮಿಸಿದನೆ ಚಂದ್ರಮ
ಕವನ
ಭಾನು ಪಡುವಣ ಕಡಲಿಗಿಳಿದಿರೆ
ಬಾನಿಗೇರಿದ ಚಂದ್ರಮ
ತಾನು ರಾತ್ರಿಯ ರಾಜನೆನ್ನುತ
ಜಾಣನೆನ್ನುವ ಸಂಭ್ರಮ
ಗಿಡದ ಮೊಗ್ಗನು ನೋಡಿ ಚಂದಿರ
ತಡೆಯಲಾರದೆ ಹೋದನೆ
ಹಿಡಿವ ಬಯಕೆಯು ಮೂಡಿ ಮನದಲಿ
ಕಡೆಗೆ ಚುಂಬಿಸೆ ಬಂದನೆ?
ತನ್ನ ಪ್ರೇಯಸಿ ಹೂವು ನೈದಿಲೆ-
-ಯನ್ನು ಸೋಮನು ಮರೆತನೆ
ಮುನ್ನ ಯೋಚನೆ ಮಾಡಲಾರದೆ
ಚೆನ್ನ ಮೊಗ್ಗಿಗೆ ಸೋತನೆ?
ಶಶಿಗೆ ಮೊಗ್ಗಿದು ಭ್ರಮೆಯ ತಂದಿತೆ
ಬಸಿರು ಹೊತ್ತಿಹ ಗಿಡವಿದು
ಖುಷಿಯ ತಾಳದೆ ಭ್ರಮರವಾದನೆ
ತುಸುವೆ ವಿಚಲಿತನಾದುದು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಶ್ರೀ ಶ್ರೀಪತಿ ಹೆಗ್ಡೆಯವರ ವಾಲ್ನಿಂದ
ಚಿತ್ರ್