ನಿರೀಕ್ಷೆಯಲ್ಲಿ....
ಕವನ
ಕುಳಿತಿಹ ಕಡೆಯಲಿ ಕುಳಿತಿರಲಾಗದೆ
ಇಳಿದಿಹೆ ನೆನೆಯಲು ಮಳೆಯೊಳಗೆ
ಮಳೆಹನಿ ನೆನೆಸಿದೆ ಚಳಿಯನು ತಾರದೆ
ಕಳೆದಿದೆ ಬೇಗುದಿ ನನ್ನೊಳಗೆ
ಇನಿಯನು ಬರುವನು ಮನವಿದು ಕಾದಿದೆ
ಕನಸಿನ ಚಿಲುಮೆಯು ಉಕ್ಕಲಿದೆ
ತನುಮನ ಬೆಸೆಯಲು ದಿನಗಳೆ ಕಾದಿಹೆ
ಜನುಮದ ಜೋಡಿಯು ಸಿಕ್ಕಲಿದೆ
ಕುಣಿಯುತ ಮಳೆಯಲಿ ದಣಿಯದು ದೇಹವು
ಕಣ ಕಣ ತುಂಬಿದೆ ಸಂತೋಷ
ಮಣಿಯುವೆ ನಲ್ಲಗೆ ತಣಿಸುವನಾತನು
ಚಣದಲಿ ತರುವನು ಉಲ್ಲಾಸ
ಆತುರ ತಂದಿದೆ ಕಾತರ ತುಂಬಿದೆ
ಕೋತಿಯ ತರದಲಿ ಆಡಿಸಿದೆ
ಮಾತಿಗೆ ನಿಂತರೆ ಸೋತೇ ಹೋಗುವೆ
ರಾತ್ರಿಗೆ ಸಿದ್ಧತೆ ಮಾಡಲಿದೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್