ಖವ್ಹಾಲಿ

ಖವ್ಹಾಲಿ

ಕವನ

ಗಂಡು -- ಓ ಸಖಿಯೆ ನಿನ್ನ ಒಲವಿಗಾಗಿ ಹಂಬಲಿಸುತ್ತಿರುವೆ

ಬಳಿ ಬಂದು ಕೈಹಿಡಿದು ಪ್ರೀತಿ ಕೊಡಲಾರೆಯಾ ||ಪ||

 

ತೇಲಿ ಬಿಡೇ ತೇಲಿ ಬಿಡೇ ತೇಲಿ ಬಿಡೇ

ಒಲವಿನಲ್ಲಿ ನನ್ನನೆಂದು ತೇಲಿಬಿಡೇ

ಬಾಳ ದೋಣಿ ಜೀವದಲೆಲಿ ಸಾಗುತಿದೆ

ನೀನು ಬಂದು ನನಗೆಯಿಂದು ಮುತ್ತು ಕೊಡೇ || ತೇಲಿಬಿಡೇ||

 

ನಿನ್ನ ಬಂಧಿಯಿಂದು ಮೋಹಪಾಶದೊಳಗೆ 

ಉಸಿರುನಿಂತ ವೇದನೆಯಲ್ಲಿ ನರಳುತಿಹೆ

ಕೈಯ ಬೆಸೆದು ಮೈಯ ತಬ್ಬು ನನ್ನೊಲವೆ

ಬದುಕಿಯಿರುವೆ ಒಂದು ಕ್ಷಣ ನಿನ್ನಯೆದುರೆ ||ತೇಲಿಬಿಡೇ||

 

ರಾತ್ರಿಯಾಗೆ ಹಾಲ್ ಬೆಳಕೂ ಚುಚ್ಚುತಿಹುದೆ

ಹೃದಯ ಬೇನೆಯಲ್ಲಿಯೇ ಅಳುತಿಹುದೆ

ಸಹಿಸಲಾರೆ ಸಂಕಟವನ್ನು ಬದುಕಿನೊಳಗೆ

ಬಂದು ಸೇರು ನನ್ನನೊಮ್ಮೆ ಅರೆಗಳಿಗೆ ||ತೇಲಿಬಿಡೇ||

 

ಹೆಣ್ಣು -- ನಾ ಹೇಳಿದಂತೇ ನೀ ಇರುವಿಯಾದರೆ

ನಿನ್ನ ಆಸೆಯನ್ನು ಈಡೇರಿಸುವೆ ಸಖನೆ || ತೇಲಿ ಬಿಡೇ ||

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್