ಪುಣ್ಯ ಪರ್ವಕಾಲ

ಪುಣ್ಯ ಪರ್ವಕಾಲ

ಕವನ

ಭಾಸ್ಕರನು ಸಪ್ತ ಅಶ್ವಗಳನ್ನೇರಿ ಕ್ರಮಿಸುವ ದಿನವಿಂದು

ಅರುಣೋದಯ ಕಾಲದಲ್ಲಿ ಸಲಿಲದಿ ಪವಿತ್ರ ಸ್ನಾನವಿಂದು

ಭಗವಾನ್ ಸೂರ್ಯನಾರಾಯಣನಿಗೆ ಅರ್ಘ್ಯ ನೀಡುವೆವಿಂದು

ಜಗದ ಜೀವರಿಗೆ ದೀರ್ಘಾಯುಷ್ಯ ಕರುಣಿಸುವ  ಸಮಯವಿಂದು

 

ದಾನ ಧರ್ಮಗಳ ಮಾಡುವ ಪುಣ್ಯ ಪರ್ವಕಾಲವಿಂದು

ರಥಸಪ್ತಮಿಯ ವಿಶೇಷ ಪೂಜೆ ಆರಾಧನೆಯಿಂದು

ಅನ್ನದಾತರು ಸುಗ್ಗಿ ಚಟುವಟಿಕೆಗಳನ್ನು 

ಪ್ರಾರಂಭಿಸುವ ದಿನವಿಂದು

ನೇಸರನ ಕಿರಣ ಉಲ್ಲಾಸ ಉತ್ಸಾಹ ಮೈಮನಕಿಂದು

 

ಆದಿತ್ಯ ದಿನಕರ ಅರ್ಕ ತರಣಿತೇಜ ದಿನಮಣಿಯೆ

ನಿನ್ನ ಕಿರಣಗಳ ಪಸರಿಸಿ ಭೂದೇವಿಯ ಮಡಿಲ ಹಸಿರಾಗಿಸು ಕಣ್ಮಣಿಯೆ

ಜಗದ ಜೀವ ಸಂಕುಲದಿ ನವ ಚೈತನ್ಯ ಮೂಡಿಸಿದೆ

ಹೃದಯ ವೈಶಾಲ್ಯದಲಿ ನಿನಗೆ ನೀನೇ ಸರಿಸಾಟಿಯೆನಿಸಿದೆ

 

ಸಪ್ತ ಅಶ್ವಗಳೇ ಸಪ್ತ ದಿನಗಳ ಸಂಕೇತ

ಅರುಣೋದಯ ಶುಭ ಸೂಚಕದ ಪ್ರತೀಕ

ಚರ್ಮರೋಗಗಳ ನಿವಾರಿಸಿ  ದೇಹ ಸದೃಢ ಗೊಳಿಸು

ಜಗತ್ ಚಕ್ಷುವೇ ಜೀವಕೋಟಿಗಳ ಸದಾ ರಕ್ಷಿಸು

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್