ವಂದನೆ...

ವಂದನೆ...

ಕವನ

ಚೀವ್ ಚೀವ್ ಎನ್ನುತ ಬಂದಿತು ಹಕ್ಕಿ

ಮರದಲಿ ಹೋಗಿ ಕೂತಿತು ಹಕ್ಕಿ

ಅಲ್ಲಿಂದಿತ್ತ ಇಲ್ಲಿಂದತ್ತ ತಿರುಗಿತು ಹಕ್ಕಿ

ಕೊಂಬೆಯ ಹಿಡಿದು ಜೋತಾಡಿತು ಹಕ್ಕಿ

 

ಕುಟ್ ಕುಟ್ ಎಂದು ಕುಟ್ಟಿತು ಕೊಂಬೆಗೆ

ಮೆಲ್ಲನೆ ಕಚ್ಚಿ ರಂದ್ರವ ಮಾಡಿತು ರೆಂಬೆಗೆ

ರಂದ್ರವ ಒಳಗೆ ತಲೆ ಮರೆಸಿ ಕೊಂಡಿದೆ

ಕಲಿಸಿದ ಗುರುವಿಗೆ ವಂದನೆ ಹೇಳಿದೆ

 

ನೋಡಿದ ನನಗೆ ಸಂತಸ ತಂದಿತು

ಮನದಲಿ ಏನೋ ಆಸೆ ಚಿಗುರಿತು

ಹಿಡಿಯಲು ಹೋದೆ ಹಕ್ಕಿಯ ನೀಗ

ಗುಯ್ ಗುಯ್ ಎನ್ನುತ ಹಾರಿತು ಬೇಗ.

 

-ಚಂದ್ರಶೇಖರ ಶ್ರೀನಿವಾಸಪುರ, ಕೋಲಾರ 

ಚಿತ್ರ್