ಭಾರತ ಹುಣ್ಣಿಮೆ

ಭಾರತ ಹುಣ್ಣಿಮೆ

ಕವನ

ಮಹಾಭಾರತ ಕರ್ತೃ ವೇದವ್ಯಾಸರು

ದ್ವಾಪರಯುಗದಲಿ ಪರಾಶರ ಸತ್ಯವತಿಯ ಗರ್ಭದಲಿ

ಮಾಘ ಮಾಸ ಪೌರ್ಣಿಮೆಯಂದು ಜನಿಸಲು

'ಭಾರತ ಹುಣ್ಣಿಮೆ'ಯೆಂದು ಪ್ರಸಿದ್ಧಿಯಾಗಲು

 

ವ್ಯಾಸಪೂರ್ಣಿಮೆ ಎನಿಸಿಕೊಳ್ಳಲು

ಅರುಣೋದಯ ಸಮಯದೊಳು

ಮಿಂದು ಮಡಿಯುಟ್ಟು ಧ್ಯಾನಿಸಲು

ದಾನಧರ್ಮ ವಿಶೇಷವೆನಿಸಲು

 

ರೇಣುಕಮ್ಮಳ ದಿವ್ಯ ಸನ್ನಿಧಿ

ಚಾಲುಕ್ಯ ರಾಷ್ಟ್ರಕೂಟರ ಶಿಲ್ಪಶೈಲಿ

ಸವದತ್ತಿ ಎಲ್ಲಮ್ಮನ ಜಾತ್ರೆ ಗೌಜಿ

ಜೋಗ ಜೋಗತಿಯರ ಸಂಭ್ರಮ

 

ಉಧೋ ಉಧೋ ಎನ್ನುವ ಸ್ವರ

ಚೌಡಕಿ ಬಾರಿಸುವ ಕಲೆಯ ಸೆಲೆ

ಎತ್ತಿನ ಬಂಡಿಗಳ ಮೆರವಣಿಗೆ

ಹಾಡು ಭಜನೆ ಕುಣಿತ ವೈಭವ

 

ಗಣೇಶ ಮಲ್ಲಿಕಾರ್ಜುನ ಏಕನಾಥರ ಸಂಗಮ

ಮಲಪ್ರಭಾ ನದಿಯ ಪವಿತ್ರ ಸ್ನಾನ

ಎಲ್ಲಮ್ಮನ ಗುಡ್ಡದಲಿ ಏಳು ಕೊಳ್ಳಗಳು

ಏಳು ಬೆಟ್ಟಗಳ ಪ್ರಾಕೃತಿಕ ಸೌಂದರ್ಯ

 

ಮುತ್ತೈದೆಯರ ಬಾಗಿನ ಸಮರ್ಪಣೆ

ತುಳಜಾ ಭವಾನಿ ದೇವಿಯ ಜನ್ಮ ದಿನ

ಒಕ್ಕಲು ಮನೆತನದವರ ಪೂಜೆ

ರಕ್ಷಿಸು ಕಾಪಾಡು ಎನುತ ಪ್ರಾರ್ಥನೆ

 

ಅಪಾರ ಭಕ್ತರ  ಆಗಮನ

ಸವದತ್ತಿ ರೇಣುಕೆಯ ಜಾತ್ರೆ‌ ವಿಜೃಂಭಣೆ

ನದಿಯ ನೀರು ಉದ್ಭವದ ಎಣ್ಣೆಹೊಂಡ

ತರಳಬಾಳು ಹುಣ್ಣಿಮೆಯೆನುವ ಅನ್ವರ್ಥ

-ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್