ಕರ ಮುಗಿವೆ...

ಕರ ಮುಗಿವೆ...

ಕವನ

ಬಿರಿದಿಹ ತಾವರೆಯಂದದ ಮೊಗವು

ಅರಳಿದೆ ಮೊಗದಲಿ ಸುಂದರ ನಗುವು

ಹುಬ್ಬಲಿ ಕುಳಿತಿದೆ ಕಾಮನ ಬಿಲ್ಲು

ಗಲ್ಲವ ಸವರುವ ಆ ಮುಂಗುರುಳು||

 

ಹೆಣೆದಿಹ ತುರುಬಲಿ ಮಲ್ಲಿಗೆ ಹೂವು

ಸುತ್ತಲು ಹರಡಿದೆ ಮಲ್ಲೆಯ ಘಮವು

ಮುತ್ತಿನ ಸರವನು ಹೊತ್ತಿಹ ಕೊರಳು

ಉಂಗುರ ತೋರಿದೆ ಬೆಸೆದಿಹ ಬೆರಳು||

 

ಚೆಲುವೆಗೆ ಒಪ್ಪುವ ಸೀರೆಯ ಬಣ್ಣ

ಕಾಡಿಗೆ ಮೆರೆಸಿದೆ ಹೊಳೆಯುವ ಕಣ್ಣ

ಬಳುಕುವ ಬಳ್ಳಿಯ ಆ ನಡು ಸಣ್ಣ

ಬೀರುತಲಿರುವಳು ಹೂ ನಗುವನ್ನ||

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್