ಚಿಕ್ಕ ಮುನಿಯಪ್ಪ (ಗಿತ್ತಪ್ಪ)- ಅಮೂಲ್ಯ ಮಾಣಿಕ್ಯ

ಚಿಕ್ಕ ಮುನಿಯಪ್ಪ (ಗಿತ್ತಪ್ಪ)- ಅಮೂಲ್ಯ ಮಾಣಿಕ್ಯ

ಕವನ

ನಾಡು ನುಡಿಗಾಗಿ ಹೋರಾಡಿದ ಮಹಾನುಭಾವರು

ಕುಗ್ರಾಮವನು ಅಳಿಸಿ ಸೌಲಭ್ಯಗಳ ನೀಡಿದವರು

ಎಲ್ಲಾ ಧರ್ಮಗಳ ಸಾರವೊಂದೇ ಎಂದುಲಿದವರು

ಮನೆಮನೆಯಲೂ ಪರಿವರ್ತನೆಗೆ ಶ್ರಮಿಸಿದವರು

 

ಶಿಕ್ಷಣಕ್ಕಾಗಿ ನೂತನ ಸಂಸ್ಥೆಗಳ ಹುಟ್ಟುಹಾಕಿದವರು

ಬಡವರ ಏಳಿಗೆಯೇ ಗ್ರಾಮದೇಳಿಗೆಯೆಂದವರು

ಮೂಲಭೂತ ಸೌಕರ್ಯಗಳ ಕಲ್ಪಿಸಿದವರು

ಶಾಲೆ ವೃತ್ತಿ ಉದ್ಯೋಗಕ್ಕಾಗಿ ಹೋರಾಡಿದವರು

 

ಭಾಷೆಯ ಬೆಳವಣಿಗೆಗೆ ಅಕ್ಷರ ಜ್ಯೋತಿ ಹಚ್ಚಿದವರು

ನಿಸ್ವಾರ್ಥ ಸೇವೆಯ ಅಮೂಲ್ಯ ಮಾಣಿಕ್ಯವೆನಿಸಿದವರು

ಸರಳ ಸಾಮಾನ್ಯ ಜನಪರ ಹಿತ ಚಿಂತಕರು

ಸಮಾಜದ ಒಳಿತಲ್ಲಿ ತನ್ನ ಬದುಕು ಕಂಡವರು

 

ಬಾಪುವಿನ ರಾಮರಾಜ್ಯದ ಕನಸನ್ನು ಸಾಕಾರಗೊಳಿಸಿದರು

ಜಾತಿ -ನೀತಿ ಬಡವ-ಬಲ್ಲಿದ ಬೇಡವೆಂದರು

ಮಾನವತೆ ಮನುಷ್ಯತ್ವ ನರನಾಡಿಯಲಿ ಚಿಮ್ಮಲೆಂದರು

ಜನ ಮನ್ನಣೆ ಗಳಿಸಿ ಅಮರರಾಗಿ ದೇವತ್ವವೆನಿಸಿದರು

("ನಾಡು ನುಡಿಗಾಗಿ ಹೋರಾಡಿದ ಮಹಾನುಭಾವರು")

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್