ಇನಿಯನು ಕುಶಲವೆ?

ಇನಿಯನು ಕುಶಲವೆ?

ಕವನ

ಒಲವಿನ ಪತ್ರವ ತಲುಪಿಸು ಎನ್ನುತ

ಚೆಲುವನ ಬಳಿಗೆ ಕಳಿಸಿದ್ದೆ

ಬಲುಹಿತ ಎನಿಸುವ ಗೆಲುವಿನ ಸುದ್ದಿಗೆ

ಕಳವಳದಿಂದ ಕಾದಿದ್ದೆ

 

ಗಿಳಿಮರಿ ನಿನ್ನನು ಕಳಿಸಿದ ಕಾರ್ಯವ

ಕಳಕಳಿ ಯಿಂದ ಮುಗಿಸಿದೆಯ

ಬಳುವಳಿ ಇತ್ತನೆ ಗೆಳೆಯನು ನಿನ್ನಲಿ

ತಿಳಿಸಲು ನೀನು ಬಂದಿಹೆಯ

 

ಹಸಿವಿಗೆ ಉಣ್ಣಲು ಅಶನವನೀಯಲೆ

ಬಸವಳಿದಿರುವೆ ನೀನೀಗ

ಹಸುವಿನ ಮನವಿದು ಕಸಿವಿಸಿಗೊಂಡೆನು

ಕುಶಲವೆ ಇನಿಯ ಹೇಳೀಗ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್