ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
February 08, 2024
ನಮ್ಮ ಮನೆಯಾ ಅಂಗಳ ಪಕ್ಕಾ
ಬೆಳೆದಿದೆ ಹಸಿರಿನ ಗಿಡವಿದು ಎಕ್ಕಾ
ಹೂವಿನ ಗೊಂಚಲು ಬಿಟ್ಟಿದೆ ಗಿಡವು
ಅವುಗಳ ನಡುವಲಿ ಮೊಗ್ಗಿದೆ ಕೆಲವು
ಎರಡಿದೆ ಜಾತಿಯು ಎಕ್ಕದ ಗಿಡದಿ
ಕೆಲಗಿಡ ಹೂಗಳು ಬೆಳ್ಳನೆ ಬಣ್ಣದಿ
ಬೇಗನೆ ಒಣಗದು ಅರಳಿದ ಹೂವು
ಅಡಗಿದೆ ಗಿಡದಲಿ ಔಷಧ ಗುಣವು
ದೇವನ ಪೂಜೆಗೆ ಬಳಸಲು ಬಹುದು
ಕೀಳದೆ ಗಿಡದಲಿ ಇಡಲೂ ಬಹುದು
ಪೋಣಿಸಿ ಮಾಡಿದ ಮಾಲೆಯು ಸೊಗಸು
ಮಾಲೆಯ ಮೊಳೆಯಲಿ ನೇಲಿಸಿ ಉಳಿಸು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಲೇಖಕರು: ಬರಹಗಾರರ ಬಳಗ
ವಿಧ: ಕವನ
February 07, 2024
ಇಲಿಯನೊಂದು ಕಂಡ ಬೆಕ್ಕು
ಅದನು ಹಿಡಿಯಬಯಸಿತು
ಬೆಕ್ಕು ಸನಿಹ ಬರಲು ಇಲಿಯು
ದೊಡ್ಡ ಮರವನೇರಿತು
ಮರದಲಿರುವ ಎಲೆಯ ನಡುವೆ
ಅವಿತು ಕುಳಿತ ಮೂಷಿಕ
ಹಿಡಿವ ಆಸೆ ಬಿಡದ ಬೆಕ್ಕು
ತಿನ್ನುವಾಸೆ ಪ್ರೇರಕ
ಕೊಕ್ಕೆ ಬಳಸಿ ಮರದ ಕಾಯಿ
ಒಡೆಯ ಕಿತ್ತ ನೆನಪಲಿ
ಅದನೆ ಬಳಸಿಕೊಳಲು ಗಳವ
ಹಿಡಿಯಿತೇನು ಕರದಲಿ
ಹುಲ್ಲು ರಾಶಿ ಬಣವೆಯೇರಿ
ಗಳವ ಹಿಡಿದು ನಿಂತರೆ
ಮರದ ಎಲೆಯ ನಡುವಲಿರುವ
ಇಲಿಯು ಕೈಗೆ ಸಿಗುವುದೇ?
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಲೇಖಕರು: ಬರಹಗಾರರ ಬಳಗ
ವಿಧ: ಕವನ
February 06, 2024
ಯತಿಯಿರದ
ಕಾವ್ಯವದು ಸಪ್ಪೆ
ಸಾರಿನಂತಯ್ಯಾ !
ಲಯ ಪ್ರಾಸವು
ಉಪ್ಪಿಟ್ಟಿಗೆ ಹಾಕಿದ
ಒಗ್ಗರಣೆಯು !
ಛಂದಸ್ಸಾರವ
ಚಂದದಲಿ ಬರೆಯು
ಕವಿಯಾಗುವೆ !
ಪದ್ಯವನಿಂದು
ಗದ್ಯದಲಿ ಬರೆದು
ಕವಿಯೆನಿಸಿದ !
ಬರಹಗಾರ
ಕವಿಯಾಗಲಾರದೆ
ಕೋಪಿಷ್ಟನಾದ !
ಲೋಕದ ಜನ
ಡೊಂಕೆನ್ನದಿರಿ
ನಮಗೆ ನಾವೇ
ಡೊಂಕು ಬಾಳಲಿ !
ಕೊಡು ಬೆಳಕ
ಕರ್ಪೂರದಂತೆ,ಈಶಾ
ಜಗದೊಳಗೆ !
ಕಾಮ ಜ್ವರಕೆ
ಮದ್ದಿಲ್ಲವೊ ನೀ ತಿಳಿ
ಸಂನ್ಯಾಸಿಯಾಗೊ !
ನೋವು ಕೊಡದೆ
ಯಾರಿಗೂ ಮಾತಾಡದೆ
ನೀ ಕವಿಯಾಗು !
ಸುಮ್ಮನಿರುವುದ ಕಲಿ
ಲೋಕದ ಬೆಳಕಿನಲಿ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
February 05, 2024
ಮುಂಜಾನೆ ಹಿಮ ಬಿದ್ದು ಮೈ ಕೊರೆವ ಈ ಚಳಿಗೆ
ನನ್ನವರು ಮಾಡುವರು ನಿತ್ಯ ಕಾಲ್ನಡಿಗೆ
ಇರುಳಿನಲಿ ಧರಿಸಿದ್ದ ಉಡುಪಿನಲಿ ಹೊರಡುವರು
ಬೇಡೆಂದು ಹೇಳುವರು ಬೆಚ್ಚಗಿನ ಉಡುಗೆ
ಇಷ್ಟೊಂದು ಚಳಿಯನ್ನು ಹೇಗವರು ಸಹಿಸುವರೊ
ನನಗಂತು ಮನೆಯೊಳಗೆ ಚಳಿಯ ನಡುಕ
ಅವರಲ್ಲಿ ಹೇಳಿದರೆ ಬೇರೇನೊ ತಿಳಿಯುವರು
ಕುಡಿಮೀಸೆ ನಗುವಲ್ಲಿ ಮಾಡಿ ಕುಹಕ
ಕಾಲ್ನಡಿಗೆ ಮುಗಿಸುತ್ತ ಬರುವಂಥ ಹೊತ್ತಾಯ್ತು
ನಡುಗುವುದು ಚಳಿಯಲ್ಲಿ ಅವರ ಕಾಯ
ಮರಳುತಿಹ ಮೊದಲಾಗಿ ನಾನರಿತು ಕೊಂಡಿಹೆನು
ಮಾಡಿಟ್ಟೆ ಬಿಸಿ ಬಿಸಿಯ ಒಂದು ಚಾಯ||
-…
ಲೇಖಕರು: ಬರಹಗಾರರ ಬಳಗ
ವಿಧ: ಕವನ
February 04, 2024
ಹಸಿರಿನ ಗಿಡಮರ ಪರಿಸರದಿಂದಲಿ
ಸುಂದರ ಎನಿಸುವ ಈ ತಾಣ
ಹರಿಯುವ ಶುದ್ಧದ ನದಿಯಿದೆ ಸನಿಹದೆ
ಹಳ್ಳಿಯ ಚೆಲುವಿನನಾವರಣ
ಹೆಂಚಿನ ಮಾಡಿನ ಕಟ್ಟಡವಿಲ್ಲಿದೆ
ವಾರಸುದಾರರು ಇಲ್ಲಿಲ್ಲ
ಕುಸಿಯಲು ತೊಡಗಿದ ಗೋಡೆಯು ಸಾರಿದೆ
ಇಂದಿನ ಮಂದಿಗೆ ಬೇಕಿಲ್ಲ
ಭದ್ರತೆಗಾಗಿಯೆ ಮಾಡಿದ ಬಾಗಿಲು
ಬಳಸಿದೆ ಮರಗಳ ಹಲಗೆಗಳು
ಮುಚ್ಚಿದೆ ಕದವನು ಜಡಿದಿದೆ ಬೀಗವ
ಕರಗಿವೆ ಹಿರಿಯರ ಸ್ವಪ್ನಗಳು
ಹಿಂದಿನ ಕಾಲದಿ ಅಂಗಡಿಯಿಲ್ಲಿಯೆ
ನಡೆಯುತಲಿದ್ದಿತು ವ್ಯಾಪಾರ
ಊರಿನ ಜನರಿಗೆ ಸಾಧನಕೊಳ್ಳಲು
ಮಾಡುತಲಿದ್ದರು ವ್ಯವಹಾರ
ಈಗಿನ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
February 03, 2024
ಪೂರ್ಣ ಚಂದ್ರಮ ಬುವಿಗೆ ಇಳಿದನೆ
ಇಂದು ಬಂದಿತೆ ಹುಣ್ಣಿಮೆ
ನಿನ್ನ ಅಂದಕೆ ಮಾರುಹೋದೆನೆ
ಭ್ರಮೆಯ ತರಿಸಿದೆ ಸುಮ್ಮನೆ
ಚಂದ್ರ ಮೊಗದಲಿ ಪುಟ್ಟ ಚಂದ್ರಮ
ನೊಸಲ ಮೇಲಿನ ಕುಂಕುಮ
ಬೊಗಸೆ ಕಣ್ಗಳ ಬಾಣವೆಸೆದಿರೆ
ನಮ್ಮ ನೋಟ ಸಮಾಗಮ
ಹೊಳೆಯುತಿರುವುದು ದಂತಪಂಕ್ತಿಯು
ಮಿಂಚು ತಿಂಗಳಬೆಳಕಿದು
ನುಣುಪುಗೆನ್ನೆಯು ಕೆಂಪಗಾಗಿದೆ
ಬಣ್ಣ ಲಜ್ಜೆಯು ತಂದುದು
ಬಾಚಿ ಹೆರಳಿನ ನಡುವೆ ಬೈತಲೆ
ಸೆರಗನೆಳೆದಿಹೆ ಶಿರದಲಿ
ಹೊಳೆವ ಮುತ್ತಿನ ಸರವ ಹೊತ್ತಿದೆ
ನಿನ್ನ ಸುಂದರ ಕೊರಳಲಿ
ಸೀರೆಯುಟ್ಟಿಹೆ ಕಿವಿಗೆ ಝಮುಕಿಯು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
February 02, 2024
ನೀನೆ ರಾಧೆಯು ನಾನೆ ಮೋಹನ
ಸನಿಹ ನಿಂತರೆ ಮಧುವನ
ಒಲವ ಚುಂಬನ ಸುತ್ತಲೆಲ್ಲವು
ಬಯಕೆ ತೋಟದಿ ಹೂಮನ
ನೂರು ತಾರೆಯು ಚಂದ್ರ ಬೆಳಕಲಿ
ನಾಚಿ ದೂರಕೆ ನಿಲ್ಲಲು
ಬರಲು ಹತ್ತಿರ ಮೋಹ ಸುತ್ತಲು
ಕೈಯ ಹಿಡಿಯುತ ಸಾಗಲು
ಮೈಯ ವರ್ಣಕೆ ತುಂಬು ಯೌವನ
ಬಳುಕಿ ನಿಲ್ಲುತ ಅಪ್ಪಲು
ಮದನ ಬೆಸುಗೆಗೆ ರತಿಯ ರೀತಿಯೆ
ಮಧುವ ಚೆಲ್ಲುತ ರಮಿಸಲು
ಜಲದ ಹೊಳಪಿಗೆ ನಿನ್ನ ಕಂಗಳು
ನನ್ನ ನೋಡುತ ನಗುತಿವೆ
ರಾತ್ರೆಯಾಗುತ ತಂಪ ಚೆಲ್ಲಿದೆ
ಸುಖದ ಮತ್ತಲಿ ತೇಲಿವೆ
ಪ್ರೀತಿ ಆಸರೆ ಹೀಗೆ ಸಿಗುತಿರೆ
ಸವಿಯು ಏಳಿಗೆ ಕಾಣಲಿ
ಬಾಳ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
February 01, 2024
ಸುಂದರವಾದ ಹಳ್ಳಿ ಪ್ರದೇಶದಲಿ
ವಿಶಾಲವಾದ ಬಯಲು ಸೀಮೆಯಲಿ/
ಅಕ್ಕಾ ಅಣ್ಣಾ ತಮ್ಮನ ಜೊತೆಯಲಿ
ಸಂತಸದಿಂದಿದ್ದೆ ಪುಟ್ಟ ಮನೆಯಲಿ//
ಮಳೆಗಾಲದಲಿ ಮಳೆ ಬರುವುದೆಂದರೆ
ನೀರದು ತುಂಬಿ ತುಳುಕು ವುದೆಂದರೆ/
ನೀರಲಿ ಆಡುವ ಖುಷಿಯನು ನೆನೆದರೆ
ಮನದಲಿ ಮೂಡುವ ಭಾವನೆಯೇ ಬೇರೆ//
ಓದುತ ಓದುತ ಪಟ್ಟ ಸಾಹಸ
ದೊರೆಯಿತು ದೊಡ್ಡ ಸರಕಾರಿ ಕೆಲಸ/
ಮನಸಿಗೆ ದೊರೆಯಿತಂದು ಸಂತಸ
ದೂರದ ನಗರಕೆ ಹೋದರು ವಾಸ//
ಜನರ ವಾಸ ಇಲ್ಲದೆ ಇರುವುದು
ಸುತ್ತಮುತ್ತ ಮರ ಗಿಡ ಬೆಳೆದಿಹುದು/
ಹಳೆಯ ಮನೆಯೊಂದೇ ಕಾಣುತಿಹುದು
ಮನಕೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 31, 2024
ಸಾಧನಕೇರಿಯ ಸಾಧಕ ಗೌರವದ ಬೇಂದ್ರೆಯಜ್ಜ
ಕನ್ನಡ ಸಾಹಿತ್ಯ ಸತ್ವದಲಿ ಗೈದಿರಿ ಕಜ್ಜ
ಕನ್ನಡಮ್ಮನ ಮಡಿಲಲಿ ಪದಮಾಲೆಯ ಯಜ್ಞ
ಅಂಬಿಕೆ ರಾಮಚಂದ್ರರ ಹೆಸರ ಬೆಳಗಿದ ಮಹಾಪ್ರಾಜ್ಞ
ಅಂಬಿಕಾತನಯದತ್ತ ವರಕವಿ ದ.ರಾ.ಬೇಂದ್ರೆ ನಮ್ಮಜ್ಜ
ಬಡತನದ ಬವಣೆಯ ಕುಲುಮೆಯಲಿ ನೊಂದು ಬೆಂದಿರಿ
ಕೃಷ್ಣಕುಮಾರಿಯ ಹೊರತಂದು ನಾಕುತಂತಿಯ ಮೀಟಿದಿರಿ
ಉತ್ಕೃಷ್ಟ ಗರಿ ಜ್ಞಾನಪೀಠ ತಮ್ಮ ಮುಡಿಗೇರಿತು
ಪದ್ಮಶ್ರೀ ಜೊತೆಗೆ ಹಲವಾರು ಪ್ರಶಸ್ತಿ ಅರಸಿ ಬಂದಿತು
ಕವನದ ಸಾಲುಗಳಲಿ ನಿಜ ಜೀವನದ ಅಮೃತಧಾರೆಯಿತ್ತು
ಜಾನಪದ ದೇಸಿಯತೆ ಸರಳ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 30, 2024
ದೇಶಕಾಗಿ ಜನರಿಗಾಗಿ
ಅಭಿಮಾನದ ಸೊಗಡಿಗಾಗಿ
ರಕ್ತ ಹರಿಸಿ ತಂದರಂದು
ಸ್ವಾತಂತ್ರ್ಯವ ನಾಡಿಗಂದು
ಸತ್ಯ ಧರ್ಮ ತ್ಯಾಗದಲ್ಲಿ
ಮುನ್ನಡೆದ ಮಹಾತ್ಮನಿಗೆ
ಗುಂಡನೇಟ ಕೊಡುತಲಂದು
ಪ್ರಾಣ ಹರಣ ಮಾಡಿದ ಬಗೆ
ಜೀತದೊಳಗೆ ನಡೆದ ಜನರ
ಜಾತಿಯೆನುತ ಸಾಗಿಹರ
ಬನ್ನಿರೆನುತ ಕೈಯ ಹಿಡಿದು
ಒಂದೆಯೆನಿಸಿ ಹುತಾತ್ಮನಾದ
ವೀರಯೋಧ ಗಡಿಗಳಲ್ಲಿ
ಹಗಲು ಇರುಳು ಚಳಿಯಲ್ಲಿ
ನೊಂದು ಬೆಂದು ನಡುಗುತಲ್ಲಿ
ರಕ್ಷಣೆಯ ಮಾಡುತಲ್ಲಿ
ದೇಶಕಾಗಿ ಜೀವತೆತ್ತ
ಸೈನಿಕರ ನೆನೆಯುತಿಲ್ಲಿ
ಪ್ರಾರ್ಥನೆಯ ಸಲಿಸುತ
ಬೇಡುವೆವು ದೇವನಲ್ಲಿ
…