ಹನಿಗಳು ಮತ್ತು ಒಂದು ಗಝಲ್

ಹನಿಗಳು ಮತ್ತು ಒಂದು ಗಝಲ್

ಕವನ

ಯತಿಯಿರದ

ಕಾವ್ಯವದು ಸಪ್ಪೆ

ಸಾರಿನಂತಯ್ಯಾ !

 

ಲಯ ಪ್ರಾಸವು

ಉಪ್ಪಿಟ್ಟಿಗೆ ಹಾಕಿದ

ಒಗ್ಗರಣೆಯು !

 

ಛಂದಸ್ಸಾರವ

ಚಂದದಲಿ ಬರೆಯು

ಕವಿಯಾಗುವೆ !

 

ಪದ್ಯವನಿಂದು

ಗದ್ಯದಲಿ ಬರೆದು

ಕವಿಯೆನಿಸಿದ !

 

ಬರಹಗಾರ

ಕವಿಯಾಗಲಾರದೆ

ಕೋಪಿಷ್ಟನಾದ !

 

ಲೋಕದ ಜನ

ಡೊಂಕೆನ್ನದಿರಿ

ನಮಗೆ ನಾವೇ

ಡೊಂಕು ಬಾಳಲಿ !

 

ಕೊಡು ಬೆಳಕ 

ಕರ್ಪೂರದಂತೆ,ಈಶಾ

ಜಗದೊಳಗೆ !

 

ಕಾಮ ಜ್ವರಕೆ

ಮದ್ದಿಲ್ಲವೊ ನೀ ತಿಳಿ

ಸಂನ್ಯಾಸಿಯಾಗೊ !

 

ನೋವು ಕೊಡದೆ

ಯಾರಿಗೂ ಮಾತಾಡದೆ

ನೀ ಕವಿಯಾಗು !

 

ಸುಮ್ಮನಿರುವುದ ಕಲಿ

ಲೋಕದ ಬೆಳಕಿನಲಿ

ತಿರುಗುತಲಿ ಓದುತ

ಜ್ಞಾನಿಯಾಗು ಬುವಿಲಿ !

 

ಮತ್ತಿಹುದಯ್ಯ

ಮುತ್ತಿನಾ ಲೋಕದಲಿ

ಪ್ರೀತಿ ಜೊತೆಗೆ !

***

ಗಝಲ್

ನಾದವಿರದ ಕೊಳಲಿಂದ ಏನು ಪ್ರಯೋಜನ

ಪ್ರೀತಿಯಿರದ ಸವಿಯಿಂದ ಏನು ಪ್ರಯೋಜನ

 

ಕಚ್ಛೆಯನ್ನು ಕಟ್ಟಿದರೂ ಹುಚ್ಚರಿಹರಿಲ್ಲಿ ಏಕಿಂದು

ಸ್ವಂತಿಕೆಯಿಲ್ಲದ ಮಡಿಯಿಂದ ಏನು ಪ್ರಯೋಜನ

 

ಮನವಿದ್ದರೂ ಹತ್ತುತಲೆ ರಾವಣರೇ ತುಂಬಿಹರು

ಚೈತ್ರವಿರದಿಹ ನೆಲೆಯಿಂದ ಏನು ಪ್ರಯೋಜನ

 

ಒಬ್ಬರನೊಬ್ಬರು ತುಳಿಯಲು ಹೊರಟಿದ್ದು ಏತಕೊ

ವಿಚಿತ್ರವೆನಿಸುವ ನುಡಿಯಿಂದ ಏನು ಪ್ರಯೋಜನ

 

ಸಾರವಿಲ್ಲದ ಬದುಕದುವೇ ಕಾಣುತಿದೆ ಈಶಾ

ತೃಪ್ತಿಯಿಲ್ಲದ ನಡೆಯಿಂದ ಏನು ಪ್ರಯೋಜನ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್