ಮಡದಿಯ ಕಾಳಜಿ

ಮಡದಿಯ ಕಾಳಜಿ

ಕವನ

ಮುಂಜಾನೆ ಹಿಮ ಬಿದ್ದು ಮೈ ಕೊರೆವ ಈ ಚಳಿಗೆ

ನನ್ನವರು ಮಾಡುವರು ನಿತ್ಯ ಕಾಲ್ನಡಿಗೆ

ಇರುಳಿನಲಿ ಧರಿಸಿದ್ದ ಉಡುಪಿನಲಿ ಹೊರಡುವರು

ಬೇಡೆಂದು ಹೇಳುವರು ಬೆಚ್ಚಗಿನ ಉಡುಗೆ

 

ಇಷ್ಟೊಂದು ಚಳಿಯನ್ನು ಹೇಗವರು ಸಹಿಸುವರೊ

ನನಗಂತು ಮನೆಯೊಳಗೆ ಚಳಿಯ ನಡುಕ

ಅವರಲ್ಲಿ ಹೇಳಿದರೆ ಬೇರೇನೊ ತಿಳಿಯುವರು

ಕುಡಿಮೀಸೆ ನಗುವಲ್ಲಿ ಮಾಡಿ ಕುಹಕ

 

ಕಾಲ್ನಡಿಗೆ ಮುಗಿಸುತ್ತ ಬರುವಂಥ ಹೊತ್ತಾಯ್ತು

ನಡುಗುವುದು ಚಳಿಯಲ್ಲಿ ಅವರ ಕಾಯ

ಮರಳುತಿಹ ಮೊದಲಾಗಿ ನಾನರಿತು ಕೊಂಡಿಹೆನು

ಮಾಡಿಟ್ಟೆ ಬಿಸಿ ಬಿಸಿಯ ಒಂದು ಚಾಯ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ 

ಚಿತ್ರ್