ಸಿಗಬಹುದೇ ಇಲಿ ?

ಸಿಗಬಹುದೇ ಇಲಿ ?

ಕವನ

ಇಲಿಯನೊಂದು ಕಂಡ ಬೆಕ್ಕು

ಅದನು ಹಿಡಿಯಬಯಸಿತು

ಬೆಕ್ಕು ಸನಿಹ ಬರಲು ಇಲಿಯು

ದೊಡ್ಡ ಮರವನೇರಿತು

 

ಮರದಲಿರುವ ಎಲೆಯ ನಡುವೆ

ಅವಿತು ಕುಳಿತ ಮೂಷಿಕ

ಹಿಡಿವ ಆಸೆ ಬಿಡದ ಬೆಕ್ಕು

ತಿನ್ನುವಾಸೆ ಪ್ರೇರಕ

 

ಕೊಕ್ಕೆ ಬಳಸಿ ಮರದ ಕಾಯಿ

ಒಡೆಯ ಕಿತ್ತ ನೆನಪಲಿ

ಅದನೆ ಬಳಸಿಕೊಳಲು ಗಳವ

ಹಿಡಿಯಿತೇನು ಕರದಲಿ

 

ಹುಲ್ಲು ರಾಶಿ ಬಣವೆಯೇರಿ

ಗಳವ ಹಿಡಿದು ನಿಂತರೆ

ಮರದ ಎಲೆಯ ನಡುವಲಿರುವ

ಇಲಿಯು ಕೈಗೆ ಸಿಗುವುದೇ?

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್