ಒಂದಿಷ್ಟು ಹನಿಗಳು...

ಒಂದಿಷ್ಟು ಹನಿಗಳು...

ಕವನ

ಮೋಸದ ಮಿಕ! 

ಎಲ್ಲೆಲ್ಲಿ

ಶ್ರಮ ರಹಿತ

ಸುಲಭ

ಹಣ; ಸಂಪತ್ತಿನ

ಹರಿವು ಇದೆಯೋ 

ಸಖಾ...

 

ಅಲ್ಲಲ್ಲಿ

ಲಪಟಾಯಿಸಲು

ಹೊಂಚುಹಾಕಿ

ಕಾದು ಕುಳಿತಿರುತ್ತದೆ

ಮೋಸದ 

ಮಿಕ!

***

ವಿಶ್ವಮಾನವ ಸಂಸ್ಕೃತಿ 

ನಾವು-

ಅವರಿಗೆ ಗೌರವದಿ

ಕೈಮುಗಿಯುವುದು

ಅವರು ನಮಗೆ 

ಪ್ರತಿಯಾಗಿ

ಕೈಮುಗಿಯುವುದು...

 

ವಿಶ್ವ ಮಾನವ ಸಂಸ್ಕೃತಿ!

ಮಹಾ ರಾಜಕೀಯ

ಪರಿಣತರೆ-

ನೀವು ಕೂಪಮಂಡೂಕ...

ಅಷ್ಟು ಸುಲಭದಲಿ

ನಿಮಗಿದರ್ಥವಾಗದು!

***

ಶೂರ 

  ಐದು ದಿನಗಳ

         ಕಾಲ

ನೈಜೀರಿಯಾ ಪ್ರಜೆ

ಹೊಟ್ಟೆಯೊಳಗಿದ್ದ

  ಇಪ್ಪತ್ತು ಕೋಟಿ

   ಕೊಕೇನ್ ವಶ...

 

        ನಿಜದಿ

   ಶೂರನೆಂದರೆ

        ನೀನೇ...

     ಅದೊಡೆದು

  ನೀನಾಗಲಿಲ್ಲವೇ

        ವಿವಶ!

***

ಒಡಲೊಂದು ಭ್ರಷ್ಟ ಕಡಲು 

ಸೊಳ್ಳೆ ಔಷಧಿ

ನುಂಗಿ ನೀರು

ಕುಡಿದ

ಬಿಬಿಎಂಪಿ

ಅಧಿಕಾರಿಗಳ

ಒಡಲು...

 

ನಾಚಿಕೆಯಿಲ್ಲದ

ಪಾಪದ ಹೊಟ್ಟೆ

ಎಲ್ಲವೂ

ಜೀರ್ಣೋಭವ...

ಹೊಟ್ಟೆಯೊಂದು

ಭ್ರಷ್ಟ ಕಡಲು!

***

ಸಾಹಿತ್ಯ ತಿಜೋರಿ

ಪುಸ್ತಕವೇ ಜಗದ

ಮಸ್ತಕ ಕಾಣಿರೋ

ಇದುವೇ ಶಾಶ್ವತ

ತಿಳಿಯಿರೋ

ಇದು ಜ್ಞಾನ

ಸಾಗರವೋ...

 

ಜಗದಲಿ

ಮಾನವನಿರುವವರೆಗೂ

ಇವುಗಳಿಗಳಿವಿಲ್ಲ

ಇದೊಂದು ಶಾಶ್ವತ

ಸಾಹಿತ್ಯದ 

ತಿಜೋರಿಯೋ!

***

ತ್ಯಾಗಿಗಳು 

ಏಸು-ಪೈಗಂಬರ್

ಶಂಕರಾಚಾರ್ಯರು-

ಮಾನವ ಕಲ್ಯಾಣಕೆ

ತಮ್ಮ ಜೀವನವನೇ

ತ್ಯಾಗ ಮಾಡಿ

ದುಡಿದರು...

 

ಇದನರ್ಥ

ಮಾಡಿಕೊಳ್ಳದ

ಶಿಷ್ಯರು

ಪರಸ್ಪರ ಹೊಡೆದಾಡಿ

ಸಮಾಜದ ನೆಮ್ಮದಿ

ಕೆಡಿಸುವರು!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್