ತಳದಲಿರುವುದು...?

ತಳದಲಿರುವುದು...?

ಕವನ

ಕಾದುಕುಳಿತಿದೆ ಚಂದದಾಸನ

ಯಾರು ಬರುವರೊ ಕೂರಲು

ಬಹಳ ಮಂದಿಗೆ ಮನದಲಾಸೆಯು

ಒಮ್ಮೆ ಆಸನ ಏರಲು

 

ಮೆತ್ತ ಮೆತ್ತನೆ ವಸ್ತ್ರ ಹಾಸಿದೆ

ಅಡಿಯಲಿರುವುದ ಮುಚ್ಚಲು

ಅದನು ಸರಿಸುತ ಏರಬೇಕಿದೆ

ತಳದಲೇನಿದೆ ಅರಿಯಲು

 

ಕೆಳಗೆ ಭೀಕರ ಮುಳ್ಳು ಹಾಸಿಗೆ

ಮಾಡು ಮೊದಲಿಗೆ ಯೋಚನೆ

ಮುಳ್ಳು ಚುಚ್ಚದ ಹಾಗೆ ಕೂರಲು

ನಿನ್ನಲೇನಿದೆ ಯೋಜನೆ

 

ನಾಡನಾಳಲು ಇರುವ ಆಸನ

ಕಾಣಲಂದವು ಹೊರಗಡೆ

ಜತನದಿಂದಲೆ ಕೂರಬೇಕಿದೆ

ಕಳೆದು ಸುತ್ತಲ ಅಡೆತಡೆ||

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್