ನಿನಗೆ ಅರಿಯದೇ?

ನಿನಗೆ ಅರಿಯದೇ?

ಕವನ

ನನ್ನ ಕಂಬನಿ ಕಥೆಯ ನಿನ್ನಲಿ

ಹೇಳಲೇನಿದೆ ಮಾತಲಿ

ಸಕಲ ಬಲ್ಲವ,ಅರಿಯಲಾರೆಯ

ಗುಟ್ಟು ಏನಿದೆ ನನ್ನಲಿ

 

ಇರುಳು ಹಗಲಿನ ತರದಿ ಬಾಳುವೆ

ಕಷ್ಟ ಸುಖಗಳ ಮಿಶ್ರಣ

ಕೆಲವು ಜೀವಕೆ ಸುಖ ಮರೀಚಿಕೆ

ನಿತ್ಯ ಬದುಕಲಿ ತಲ್ಲಣ

 

ನನ್ನ ವೇದನೆ ಕೇಳ ಬಂದಿಹೆ

ನಿನ್ನ ಕಣ್ಣಲಿ ಕಂಬನಿ

ಅದನು ಕಂಡೆನು ನನ್ನ ಎದೆಯಲಿ

ನಿನ್ನ ನೋವಿನ ಮಾರ್ಧನಿ

 

ಅರಿತೆ ದೇವನೆ ಕರ್ಮಫಲವಿದು

ತಿದ್ದಲಾಗದು ಬರಹವ

ಕಷ್ಟ ಸಹಿಸುವ ಸಹನೆ ಕರುಣಿಸು

ನೀನು ಜೊತೆಯಿರು ಕೇಶವ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್