ಬಗೆ ಬಗೆ ಹೂಗಳು

ಬಗೆ ಬಗೆ ಹೂಗಳು

ಕವನ

ಅಪ್ಪನು ಹೋದರು ಸ್ನಾನವ ಮಾಡಲು

ನಂತರ ಪೂಜೆಯ ಮಾಡುವರು

ಅಣ್ಣನು ತಂಗಿಯು ಹೂಗಳ ಕೀಳಲು

ಹೂವಿನ ತೋಟಕೆ ನಡೆದಿಹರು

 

ಘಮ್ಮನೆ ಪರಿಮಳ ಬೀರುವ ಹೂಗಳು

ಮಲ್ಲಿಗೆ ಸಂಪಿಗೆ ಹೂವುಗಳ

ತುಳಸಿಯ ದಳಗಳ ಕಿತ್ತಿಹ ಸಂತಸ

ತುಂಬಿದೆ ಈ ಎಳೆ ಮನಸುಗಳ

 

ಕಿತ್ತಿಹ ಹೂಗಳ ಬುಟ್ಟಿಯಲಿರಿಸುತ

ನಡೆದರು ಮನೆಕಡೆ ಜೊತೆ ಸೇರಿ

ಬುಟ್ಟಿಯ ಹಿಡಿಯಲು ತನ್ನಲಿ ನೀಡಲು

ಕೇಳಿದ ತಂಗಿಯು ಹಟಮಾರಿ

 

ಎಡವಿದ ತಂಗಿಯ ಬುಟ್ಟಿಯ ಒಳಗಿನ

ಹೂಗಳು ಬಿದ್ದಿತು ಮಣ್ಣಿನಲಿ

ತಂಗಿಯ ನೋವನು ಅರಿತಿಹ ಅಣ್ಣನು

ಅಳದಿರು ಎಂದನು ಪ್ರೀತಿಯಲಿ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್